ರಾಂಚಿ: ವಿಜಯ್ ಹಜಾರೆ ಟೂರ್ನಿಯಲ್ಲಿ(Vijay Hazare Trophy) ಬಿಹಾರ (Bihar) ತಂಡವನ್ನು ಪ್ರತಿನಿಧಿಸುತ್ತಿರುವ 14 ವರ್ಷದ ವೈಭವ್ ಸೂರ್ಯವಂಶಿ (Vaibhav Sooryavanshi) ವೇಗದ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಅರುಣಾಚಲ ಪ್ರದೇಶ (Arunachal Pradesh) ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಹೊಡೆದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ ಪಂದ್ಯದಲ್ಲಿ ಅತಿ ವೇಗದ ಶತಕ ಸಿಡಿಸಿದ ಭಾರತದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಸಾಧನೆಯ ಮೂಲಕ ಅತಿ ವೇಗದಲ್ಲಿ ಶತಕ ಸಿಡಿಸಿದ ಎರಡನೇ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಭಾರತದ ಪರ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಪಂಜಾಬಿನ ಅನ್ಮೋಲ್‌ಪ್ರೀತ್ ಸಿಂಗ್ ಮೊದಲ ಸ್ಥಾನದಲ್ಲಿ ಇದ್ದಾರೆ. 2024-25ರ ಅವಧಿಯಲ್ಲಿ ಅರುಣಾಚಲದ ವಿರುದ್ಧ 35 ಎಸೆತಗಳಲ್ಲಿ ಶತಕ ಹೊಡೆದಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲೇ ಕೊಹ್ಲಿ ಆಡಲಿದ್ದಾರೆ, ಆದ್ರೆ ಚಿನ್ನಸ್ವಾಮಿಯಲ್ಲಿ ಅಲ್ಲ!
1. ಜಾಕೆ ಫ್ರೇಸರ್-ಎಂಸಿಗೂರ್ಕ್(ದಕ್ಷಿಣ ಆಫ್ರಿಕಾ) – 29 ಎಸೆತ
2. ಎಬಿಡಿ ವಿಲಿಯರ್ಸ್(ದಕ್ಷಿಣ ಆಫ್ರಿಕಾ) – 31 ಎಸೆತ
3. ಅನ್ಮೋಲ್‌ಪ್ರೀತ್ ಸಿಂಗ್ – 35 ಎಸೆತ
4. ಕೋರಿ ಆಂಡರ್‌ಸನ್(ನ್ಯೂಜಿಲೆಂಡ್)- 36 ಎಸೆತ
5. ಗ್ರಹಾಂ ರೋಸ್(ಸೋಮರ್‌ಸೆಟ್) – 36 ಎಸೆತ
6. ವೈಭವ್ ಸೂರ್ಯವಂಶಿ – 36 ಎಸೆತ
ಕೈತಪ್ಪಿದ ದ್ವಿಶತಕ
ವೈಭವ್ ಸೂರ್ಯವಂಶಿ 10 ರನ್‌ನಿಂದ ದ್ವಿಶತಕದ ದಾಖಲೆಯಿಂದ ವಂಚಿತರಾದರು. ಇಂದು 190 ರನ್(84 ಎಸೆತ, 16 ಬೌಂಡರಿ, 15 ಸಿಕ್ಸ್) ಸಿಡಿಸಿ ಔಟಾದರು. ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದ ಸೂರ್ಯವಂಶಿ ತಂಡದ ಮೊತ್ತ 26.4 ಓವರ್‌ಗಳಲ್ಲಿ 261 ರನ್ ಆಗಿದ್ದಾಗ ಎರಡನೇಯವರಾಗಿ ಔಟಾದರು. ಇದನ್ನೂ ಓದಿ: ಐಪಿಎಲ್ ಉದಯೋನ್ಮುಖ ಪ್ರತಿಭೆಗಳ ಮಹಾ ಹಬ್ಬ
ಸೂರ್ಯವಂಶಿ ಸ್ಕೋರ್ ಏರಿದ್ದು ಹೇಗೆ?
50 ರನ್ – 25 ಎಸೆತ (8 ಬೌಂಡರಿ, 2 ಸಿಕ್ಸ್)
100 ರನ್ – 36 ಎಸೆತ(10 ಬೌಂಡರಿ, 8 ಸಿಕ್ಸ್)
150 ರನ್ – 59 ಎಸೆತ(14 ಬೌಂಡರಿ, 13 ಸಿಕ್ಸ್)
190 ರನ್ – 84 ಎಸೆತ(16, ಬೌಂಡರಿ, 15 ಸಿಕ್ಸ್)

