ನವದೆಹಲಿ: ಕಾಂಗ್ರೆಸ್ (Congress) ಸಂಸದ ಇಮ್ರಾನ್ ಮಸೂದ್ (Imran Masood) ಪ್ರಿಯಾಂಕಾ ವಾದ್ರಾ (Priyanka Gandhi Vadra) ಪರ ಬ್ಯಾಟಿಂಗ್ ಮಾಡಿದ ಬೆನ್ನಲ್ಲೇ ಪತಿ ರಾಬಾರ್ಟ್ ವಾದ್ರಾ ಅವರು ಪತ್ನಿಯ ಪರ ವಹಿಸಿ ಮಾತನಾಡಿ ಸಂಚಲನ ಮೂಡಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪ್ರಧಾನಿಯಾಗಿ (Prime Minister) ನೋಡಲು ಅನೇಕರು ಬಯಸುತ್ತಾರೆ. ರಾಜಕೀಯದಲ್ಲಿ ಅವರಿಗೆ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ.
VIDEO | Delhi: Businessman Robert Vadra (@irobertvadra ) said, “I think Priyanka (Gandhi Vadra) has learnt a lot from her grandmother (Indira Gandhi), father (Rajiv Gandhi), Sonia ji and her brother (Rahul Gandhi) as well. When she speaks, she speaks from the heart. I think she… pic.twitter.com/H6ZJS89EYf
— Press Trust of India (@PTI_News) December 23, 2025
ಪ್ರಿಯಾಂಕಾ ಅವರ ಅಜ್ಜಿ (ಇಂದಿರಾ ಗಾಂಧಿ) ಅವರ ತಂದೆ (ರಾಜೀವ್ ಗಾಂಧಿ), ಸೋನಿಯಾ ಜಿ ಮತ್ತು ಅವರ ಸಹೋದರ ರಾಹುಲ್ ಗಾಂಧಿ ಅವರಿಂದ ಕೂಡ ಬಹಳಷ್ಟು ಕಲಿತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಜನರು ಅವರನ್ನು ಮೆಚ್ಚುತ್ತಾರೆ. ಅವರು ಮಾತನಾಡುವಾಗ ತಮ್ಮ ಹೃದಯದಿಂದ ಮಾತನಾಡುತ್ತಾರೆ ಎಂದು ಜನರು ಹೇಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಪ್ರಿಯಾಂಕಾಗೆ ಪ್ರಧಾನಿ ಪಟ್ಟ – ಪಿಎಂ ಆಗುವ ಸಾಮರ್ಥ್ಯ ಅವರಿಗಿದೆ: ಸಂಸದ ಇಮ್ರಾನ್ ಮಸೂದ್
ಚಳಿಗಾಲದ ಅಧಿವೇಶನದಲ್ಲಿ ವೋಟ್ ಕಳ್ಳತನ ಚರ್ಚೆಯಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ವಯನಾಡ್ ಸಂಸದೆಯಾಗಿರುವ ಪ್ರಿಯಾಂಕಾ ವಾದ್ರಾ ಮಾತನಾಡಿದ್ದರು. ಇಬ್ಬರ ಭಾಷಣವನ್ನು ನಾಯಕರು ತುಲನೆ ಮಾಡಿದಾಗ ಪ್ರಿಯಾಂಕಾ ಭಾಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಿಂದ ಸಿಟ್ಟಿಗೆದ್ದು ರಾಹುಲ್ ವಿದೇಶಕ್ಕೆ ತೆರಳಿದ್ದಾರೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಪ್ರಿಯಾಂಕಾ ಪರ ಈಗ ಕೈ ನಾಯಕರು ಮಾತನಾಡುತ್ತಿದ್ದಾರೆ.

