ಕ್ರಿಸ್ಮಸ್ ಅಂದ್ರೆ ಮೊದ್ಲು ನೆನಪಾಗೋದೆ ಸಾಂತಾ ಕ್ಲಾಸ್, ಕ್ರಿಸ್ಮಸ್ ಟ್ರೀ ಹಾಗೂ ಕೇಕ್. ಇನ್ನೇನು ಕ್ರಿಸ್ಮಸ್ ಬಂದೇ ಬಿಡ್ತು. ಈ ವರ್ಷ ನಿಮ್ಮ ಮನೆಯಲ್ಲೂ ಕ್ರಿಸ್ಮಸ್ ಹಬ್ಬಕ್ಕೆ ಏನಾದ್ರೂ ಸ್ಪೆಷಲ್ ರೆಸಿಪಿ ಮಾಡ್ಬೇಕು ಅಂತ ಯೋಚಿಸ್ತಿದ್ದೀರಾ? ಹಾಗಾದ್ರೆ ನಾವು ಇಂದು ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಚಾಕೋಲೆಟ್ ವಾಲ್ನಟ್ ಬ್ರೌನಿಯನ್ನು ಯಾವ ರೀತಿ ತಯಾರಿಸುವುದು ಎಂದು ತಿಳಿಸಿಕೊಡುತ್ತಿದ್ದೇವೆ. ನೀವೂ ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನ ಟ್ರೈ ಮಾಡಿ. ಖಂಡಿತವಾಗಿ ಈ ಬ್ರೌನಿ ಎಲ್ಲರಿಗೂ ಇಷ್ಟವಾಗುತ್ತೆ.
ಬೇಕಾಗುವ ಸಾಮಗ್ರಿ:
ಬೆಣ್ಣೆ – 2 ಚಮಚ
ಡಾರ್ಕ್ ಚಾಕೋಲೆಟ್ – 30 ಗ್ರಾಂ
ಸಕ್ಕರೆ ಪುಡಿ – ರುಚಿಗೆ ತಕ್ಕಷ್ಟು
ವೆನಿಲ್ಲಾ – ಕೆಲವು ಹನಿಗಳು
ಮೈದಾ ಹಿಟ್ಟು – 35 ಗ್ರಾಂ
ಹಾಲು – 2 ಚಮಚ
ಬಾಕಲೇಟ್ ತುಂಡು – 5 ರಿಂದ 9
ಬಟರ್ ಪೇಪರ್
ಮೈಕ್ರೋವೇವ್
ಮಾಡುವ ವಿಧಾನ :
* ಮೊದಲಿಗೆ ಚಾಕೋಲೆಟ್ಗಳನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಮತ್ತು ಬೆಣ್ಣೆಯೊಂದಿಗೆ ಸೇರಿಸಿ, ಬೆಣ್ಣೆ ಮತ್ತು ಚಾಕೊಲೆಟ್ ಕರಗುವವರೆಗೆ ಮೈಕ್ರೋವೇವ್‌ನಲ್ಲಿ ಇರಿಸಿ.
* ನಂತರ ಸಕ್ಕರೆ, ಹಾಲು, ವೆನಿಲ್ಲಾ, ಮೈದಾ, ವಾಲ್ನಟ್ ಅನ್ನು ಮೊದಲೇ ತಯಾರಿಸಿದ ಚಾಕೋಲೆಟ್ ಮಿಶ್ರಣಕ್ಕೆ ಸೇರಿಸಿ. ಮೃದುವಾಗಿ ಎಲ್ಲವನ್ನೂ ಕಲಸಿ.
* ಈಗ ಪಾತ್ರೆಯ ಗಾತ್ರಕ್ಕೆ ಅನುಗುಣವಾಗಿ ಬಟರ್ ಪೇಪರ್ ಅನ್ನು ಕತ್ತರಿಸಿ. ಮತ್ತು ಪಾತ್ರೆಯ ತಳಭಾಗ ಮತ್ತು ಬದಿ ಭಾಗಗಳಿಗೆ ಬೆಣ್ಣೆ ಪೇಪರ್ ಅಂಟಿಸಿಕೊಳ್ಳಿ.
* ನಂತರ ಮೊದಲೇ ತಯಾರಿಸಿಟ್ಟ ಹಿಟ್ಟನ್ನು ಬಟರ್ ಪೇಪರ್ ಹಾಕಿದ ಕಂಟೇನರ್ ಒಳಗೆ ಸುರಿಯಿರಿ. ಮತ್ತು ಅದು ಸಮವಾಗಿ ಹರಡಿಕೊಳ್ಳುವಂತೆ ಮಾಡಿ. ನಂತರ ರುಚಿಗೆ ಸ್ವಲ್ಪ ಹುರಿದ ವಾಲ್ನಟ್ ಹಾಗೂ ಚಾಕೋಲೆಟ್ ತುಂಡುಗಳಿಂದ ಮಿಶ್ರಣದ ಮೇಲ್ಭಾಗವನ್ನು ಅಲಂಕರಿಸಿ.
* 15 ಸೆಕೆಂಡುಗಳ ಕಾಲ ಚಾಕೋಲೆಟ್ ಬ್ರೌನಿಯ ಮಿಶ್ರಣವನ್ನು ಮೈಕ್ರೋ ಓವನ್‌ನಲ್ಲಿ ಬೇಯಲು ಇರಿಸಿ. ಬಳಿಕ ಚಾಕು ಮೂಲಕ ಅದು ಬೆಂದಿದೆಯಾ ಎಂದು ಪರಿಶೀಲಿಸಿ. ಬೆಂದಿಲ್ಲದಿದ್ದರೆ ಇನ್ನೂ ಸ್ವಲ್ಪ ಸಮಯಗಳ ಕಾಲ ಬೇಯಿಸಿಕೊಳ್ಳಿ.
* ಬೆಂದ ಬಳಿಕ ಪಾತ್ರೆಯಿಂದ ಬ್ರೌನಿಯನ್ನು ತೆಗೆದು ಒಂದು ಪ್ಲೇಟ್‌ನಲ್ಲಿ ಇಟ್ಟು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ.
* ಈಗ ರುಚಿಯಾದ ಚಾಕೋಲೆಟ್ ವಾಲ್ನಟ್ ಬ್ರೌನಿ ಸವಿಯಲು ಸಿದ್ಧ.



