– ಅಡಳಿತಾಧಿಕಾರಿ, ಶುಶ್ರೂಷಾ ನಿರ್ವಾಹಕಿ ಬದಲಾವಣೆ
ಹಾಸನ: ಬೇಲೂರು ತಾಲೂಕು ಆಸ್ಪತ್ರೆಯಲ್ಲಿ (Beluru Hospital) ಸ್ಕ್ಯಾನಿಂಗ್ ಮಷಿನ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಗ್ರೂಪ್ ಡಿ ನೌಕರನನ್ನು ಅಮಾನತು ಮಾಡುವಂತೆ ಡಿಹೆಚ್‍ಓ ಶಿಫಾರಸು ಮಾಡಿದ್ದಾರೆ.
ಆಸ್ಪತ್ರೆಯ ಗ್ರೂಪ್ ಡಿ ನೌಕರ ಪ್ರದೀಪ್‌ರನ್ನು ಅಮಾನತು ಮಾಡಲು ಡಿಹೆಚ್‍ಓ ಅನಿಲ್‍ಕುಮಾರ್ ಶಿಫಾರಸು ಮಾಡಿದ್ದಾರೆ. ಪ್ರದೀಪ್ ವಿಷಯ ಗೊತ್ತಿದ್ದರೂ ಮೇಲಾಧಿಕಾರಿಗಳಿಗೆ ತಿಳಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಜಯಲಕ್ಷ್ಮೀ ಹಾಗೂ ಶುಶ್ರೂಷಾ ನಿರ್ವಾಹಕಿ ಶಶಿಕಲಾವತಿ ಅವರನ್ನು ಬದಲಾವಣೆ ಮಾಡಿ ಇಬ್ಬರ ಜಾಗಕ್ಕೂ ಬೇರೆಯವರನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಷಿನ್, ವೆಂಟಿಲೇಟರ್ ಸೇರಿ 24 ಲಕ್ಷ ಬೆಲೆ ಬಾಳುವ ಯಂತ್ರಗಳು ನಾಪತ್ತೆ!
ಜಯಲಕ್ಷ್ಮೀ ಹಾಗೂ ಶಶಿಕಲಾವತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಡಿಹಚ್‌ಓ ವರದಿ ಸಲ್ಲಿಸಲಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಆಸ್ಪತ್ರೆಯ ಕೆಲ ವೈದ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಬಗ್ಗೆ ತನಿಖೆ ಮುಂದುವರೆಯಲಿದೆ. ಇದನ್ನೂ ಓದಿ: ಹಾಸನ | ಹೃದಯಾಘಾತಕ್ಕೆ ಶಿಕ್ಷಕಿ ಸೇರಿ ಇಬ್ಬರು ಬಲಿ

