ಬೆಳಗಾವಿ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ದಿವ್ಯಾಂಗ ದಂಪತಿ ಭೇಟಿ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ರಾಯಬಾಗ ತಾಲೂಕಿನ ಖನದಾಳ ಗ್ರಾಮದ ಯಲ್ಲಪ್ಪ ನಾಯಿಕ, ಬಾಳವ್ವ ದಂಪತಿ ಇಂದು ಸಿಎಂ ಭೇಟಿಯಾಗಲು ಬಂದಿದ್ದರು. ಆದರೆ ಸಿಎಂ ದಿವ್ಯಾಂಗ ದಂಪತಿಯನ್ನು ಗಮನಿಸದೇ ಹುದಲಿಗೆ ತೆರಳಿದ್ದರು.
ವಿಕಲಾಂಗ ದಂಪತಿ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರ ಜಿಲ್ಲಾಧಿಕಾರಿ, ಎಸ್‌ಪಿಗೆ ಹೇಳಿ ದಿವ್ಯಾಂಗ ಯಲ್ಲಪ್ಪರನ್ನು ಕರೆಯಿಸಿ ಸಮಸ್ಯೆಯನ್ನು ಸಿಎಂ ಆಲಿಸಿದ್ದಾರೆ.
ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದರ ಕುರಿತು ನ್ಯಾಯ ಒದಗಿಸಲು ಸಿಎಂಗೆ ದಂಪತಿ ಮನವಿ ಮಾಡಿದರು. ಇದನ್ನೂ ಓದಿ: ಈ ಬಾರಿ ಭಾನುವಾರ ಕೇಂದ್ರ ಬಜೆಟ್ ಮಂಡಿಸ್ತಾರಾ ನಿರ್ಮಲಾ ಸೀತಾರಾಮನ್?

