ಕಾರವಾರ: ಕಾಡುಕೋಣ ನೋಟಕ್ಕೆ ಬೆದರಿದ ಹುಲಿ ತನ್ನ ಮರಿಯೊಂದಿಗೆ ಬೇಟೆ ಬಿಟ್ಟು ಓಡಿಹೋದು ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕುಳಗಿಯಲ್ಲಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತಾಯಿ ಹುಲಿ ತನ್ನ ಬೇಟೆ ಅರಸಿ ಹೋಗುತ್ತಿರುವಾಗ ಕಾಡುಕೋಣ ಎದುರಾಗಿದೆ. ಇನ್ನೇನು ಹಿಡಿಯಲು ಸಜ್ಜಾದಾಗ ಕಾಡುಕೋಣ ಬುಸುಗುಟ್ಟಿ ನೋಡಿದ್ದು, ಮರಿ ಸಮೇತ ಕಾಲ್ಕಿತ್ತಿದೆ.
ಈ ದೃಶ್ಯ ಜಂಗಲ್ ಸಫಾರಿಗೆ ಬಂದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇತ್ತೀಚೆಗೆ ಜೋಯಿಡಾ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ತಮ್ಮ ಮರಿಗಳೊಂದಿಗೆ ಆಗಾಗ ಜನರಿಗೆ ದರ್ಶನ ನೀಡುತ್ತಿವೆ.

