ಬೆಂಗಳೂರು: ಡಿಸೆಂಬರ್ ಮಾಸದ ಚಳಿಗೆ ಬಿಸಿ ಬಿಸಿಯಾಗಿ ನಾನ್‌ವೆಜ್ (Nonveg) ಮಾಡಿಕೊಂಡು ತಿನ್ನೋರಿಗೆ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಈಗಾಗಲೇ ಮೊಟ್ಟೆ ಬೆಲೆ 8 ರೂ.ಗೆ ತಲುಪಿದೆ. ಈಗ ಇದರ ತಾಯಿ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. ಸದ್ದಿಲ್ಲದೇ ಕೋಳಿ ಮಾಂಸದ ಬೆಲೆ (Chicken Rate) ಏರಿಕೆಯಾಗುತ್ತಿದೆ. ಇನ್ನಷ್ಟು ಬೆಲೆ ಏರಿಕೆಯಾಗಲಿದೆ ಅಂತಿದ್ದಾರೆ ವ್ಯಾಪಾರಿಗಳು.
ಹೌದು, ಡಿಸೆಂಬರ್ ಆರಂಭದಿಂದಲೇ ಕೋಳಿ ಮೊಟ್ಟೆ ಬೆಲೆ 6 ರೂ.ನಿಂದ 8 ರೂ.ಗೆ ತಲುಪಿತ್ತು. ಕ್ರಿಸ್ಮಸ್ ಕೇಕ್‌ಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಹೊರ ದೇಶಗಳಿಗೆ ಕೋಳಿ ಮೊಟ್ಟೆ ರಫ್ತು ಹೆಚ್ಚಾಗಿದೆ. ಜನವರಿಯಲ್ಲಿ ಕಡಿಮೆಯಾಗುವ ನಿರೀಕ್ಷೆ ಕೂಡ ಇತ್ತು. ಈಗ ಕೋಳಿ ಮೊಟ್ಟೆ ಜೊತೆಗೆ ಕೋಳಿ ಮಾಂಸದ ಬೆಲೆಯೂ ಹೆಚ್ಚಾಗಿದೆ. ಇವತ್ತು ರಿಟೇಲ್ ದರವೇ ಜೀವಂತ ಕೋಳಿಗೆ ಕೆಜಿಗೆ 170ರಿಂದ 180ಕ್ಕೆ ತಲುಪಿದೆ. ಇನ್ನೂ ಕೋಳಿ ಮಾಂಸದ ಬೆಲೆ ಕೆಜಿಗೆ 270 ರೂ. ಆಗಿದೆ. ಇದನ್ನೂಓದಿ: ಶಿವಮೊಗ್ಗ | ಮುಂಜಾನೆ ಮೈ ಕೊರೆಯುವ ಚಳಿಯಲ್ಲೇ ಇಂಜಿನಿಯರ್‌ಗೆ ಶಾಕ್ ಕೊಟ್ಟ ಲೋಕಾಯುಕ್ತ
ಇನ್ನೂ ಕೋಳಿ ಬೆಲೆ ಹೀಗೆ ಧಿಡೀರ್ ಹೆಚ್ಚಾಗಲು ಬೇಡಿಕೆ ಹೆಚ್ಚಾಗಿರೋದು ಪ್ರಮುಖ ಕಾರಣವಾದರೆ ಚಳಿಗೆ ಮಾಂಸಾಹಾರ ಸೇವಿಸೋರ ಸಂಖ್ಯೆ ಕೂಡ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಕ್ರಿಸ್ಮಸ್ ಮತ್ತು ನ್ಯೂ ಇಯರ್ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಅದರ ಜೊತೆಗೆ ಕೋಳಿಗೆ ನೀಡುವ ಆಹಾರದ ಬೆಲೆ ಏರಿಕೆಯಾಗುತ್ತಿರುವುದು ಕೂಡ ಕೋಳಿ ಮಾಂಸದ ಬೆಲೆ ಏರಿಕೆಗೆ ಕಾರಣವಾಗ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ 300ರ ಗಡಿ ದಾಟುವ ಸಾಧ್ಯತೆ ಕೂಡ ಇದೆ. ಇದನ್ನೂಓದಿ: ನಡುರಸ್ತೆಯಲ್ಲೇ ಹೃದಯಾಘಾತ; ಜೀವ ಉಳಿಸಲು ಅಂಗಲಾಚಿದರೂ ನೆರವಿಗೆ ಬಾರದ ಜನ – ರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ವ್ಯಕ್ತಿ

