ಈ ಕಾರಣಕ್ಕಾಗಿ ಇತ್ತೀಚೆಗೆ ಭಗವದ್ಗೀತೆ, ಉಪನಿಷತ್‍ಗಳನ್ನ ಓದ್ತಿದ್ದಾರಂತೆ ರಾಹುಲ್ ಗಾಂಧಿ

Public TV
1 Min Read
rahul gandhi chennai

ಚೆನ್ನೈ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಗವದ್ಗೀತೆ ಹಾಗೂ ಉಪನಿಷತ್‍ಗಳನ್ನ ಓದೋಕೆ ಶುರು ಮಾಡಿದ್ದಾರಂತೆ.

ಚೆನ್ನೈನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಆರ್‍ಎಸ್‍ಎಸ್ ಹಾಗೂ ಬಿಜೆಪಿ ವಿರುದ್ಧ ಹೋರಾಡ್ತಿರೋದ್ರಿಂದ ಇತ್ತೀಚೆಗೆ ಭಗವದ್ಗೀತೆ ಹಾಗೂ ಉಪನಿಷತ್‍ಗಳನ್ನ ಓದುತ್ತಿದ್ದೇನೆ ಎಂದಿದ್ದಾರೆ.

ನಾನು ಆರ್‍ಎಸ್‍ಎಸ್‍ನವರನ್ನ ಕೇಳ್ತೀನಿ, ನನ್ನ ಸ್ನೇಹಿತರೇ, ನೀವು ಹೀಗೆಲ್ಲಾ ಮಾಡ್ತಿದ್ದೀರ. ಜನರನ್ನ ತುಳಿಯುತ್ತಿದ್ದೀರ. ಆದ್ರೆ ಉಪನಿಷತ್‍ನಲ್ಲಿ ಎಲ್ಲಾ ಜನರು ಸಮಾನರು ಎಂದು ಬರೆದಿದೆ. ಆದ್ರೆ ನೀವು ನಿಮ್ಮ ಧರ್ಮ ಹೇಳೋದಕ್ಕೆ ವಿರುದ್ಧವಾಗಿದ್ದೀರಲ್ಲ ಹೇಗೆ? ಎಂದು ರಾಹುಲ್ ಗಾಂಧಿ ಹೇಳಿದ್ದಾಗಿ ಪಕ್ಷದ ಮೂಲಗಳು ಪತ್ರಿಕೆಯೊಂದಕ್ಕೆ ತಿಳಿಸಿವೆ.

ಬಿಜೆಪಿ ಮೂಲಭೂತವಾಗಿ ಭಾರತವನ್ನ ಅರ್ಥ ಮಾಡಿಕೊಂಡಿಲ್ಲ. ನಾಗ್ಪುರವನ್ನ (ಆರ್‍ಎಸ್‍ಎಸ್ ಮುಖ್ಯಕಚೇರಿ) ಮಾತ್ರ ಅರ್ಥ ಮಾಡಿಕೊಂಡಿದೆ. ಬ್ರಹ್ಮಾಂಡದ ಎಲ್ಲಾ ಜ್ಞಾನ ಪ್ರಧಾನ ಮಂತ್ರಿಯಿಂದಲೇ ಬಂದಿದೆ ಅಂತ ಬಿಜೆಪಿಯವರು ಅಂದುಕೊಂಡಿದ್ದಾರೆ ಅಂತ ರಾಹುಲ್ ಹೇಳಿದ್ದಾರೆ.

ತಮಿಳುನಾಡಿನ ಜನರು, ಅವರ ಸಂಸ್ಕøತಿ ಹಾಗೂ ಆಹಾರದ ಬಗ್ಗೆ ಹೊಗಳಿದ ರಾಹುಲ್, ತಮಿಳುನಾಡಿನ ಜನರೊಂದಿಗೆ ನನಗೆ ವಿಶೇಷ ಬಾಂಧವ್ಯವಿದೆ ಅಂದ್ರು. ನಾನು ತಮಿಳು ಸಿನಿಮಾಗಳನ್ನ ನೋಡಲು ನಿರ್ಧರಿಸಿದ್ದೇನೆ. ತಮಿಳುನಾಡು ಜನರ ಸಂಸ್ಕøತಿಯ ಬಗ್ಗೆ ಓದಿದ್ದೇನೆ. ನನ್ನ ಅಕ್ಕನಿಗೆ(ಪ್ರಿಯಾಂಕಾ ಗಾಂಧಿ) ಒಂದು ಎಸ್‍ಎಮ್‍ಎಸ್ ಕಳಿಸಿದ್ದೆ. ತಮಿಳುನಾಡಿಗೆ ಬರಲು ನನಗಿಷ್ಟ ಎಂದು ಹೇಳಿದ್ದೆ. ನನಗೆ ಗೊತ್ತಿಲ್ಲ, ಏನೋ ಒಂಥರ ತಮಿಳು ಜನರೊಂದಿಗೆ ನನಗೆ ವಿಶೇಷವಾದ ಬಾಂಧವ್ಯವಿದೆ ಎನಿಸುತ್ತದೆ. ನನಗೆ ತಮಿಳು, ತಮಿಳುನಾಡಿನ ಜನರೆಂದರೆ ಇಷ್ಟ ಎಂದು ಅಕ್ಕನಿಗೆ ಹೇಳಿದೆ. ಆಕೆ ಕೂಡ ನನಗೂ ಅವರು ಇಷ್ಟ ಎಂದರು ಅಂತ ರಾಹುಲ್ ಹೇಳಿದ್ದಾರೆ.

ಈ ಸಭೆಯಲ್ಲಿ ತಮಿಳುನಾಡು ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ತಿರುಣವುಕ್ಕರಸರ್, ಕಾಂಗ್ರೆಸ್ ಸಂಸದೀಯ ಪಕ್ಷದ ಮುಖಂಡರಾದ ಕೆಆರ್ ರಾಮಸ್ವಾಮಿ ಹಾಗೂ ಇತರೆ ಗಣ್ಯರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *