ಚಂಡೀಗಢ: ದೆಹಲಿ (Delhi) ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಗಳಲ್ಲಿ ವಾಯು ಮಾಲಿನ್ಯವು ಭಾನುವಾರ ಮತ್ತಷ್ಟು ತೀವ್ರಗೊಂಡಿದ್ದು, ವಿಷಕಾರಿ ಹೊಗೆ ನಗರವನ್ನ ಸುತ್ತುವರಿದಿದೆ. ಇದರೊಂದಿಗೆ ಈವರ್ಷ ಕೊರೆಯುವ ಚಳಿ ಇನ್ನಷ್ಟು ವಾಯುಗುಣಮಟ್ಟ ಕುಸಿಯುವಂತೆ ಮಾಡಿದೆ. ಇದರ ಜೊತೆಗೆ ಚಳಿಯಿಂದಾಗಿ ಮಂಜಿನ ವಾತವರಣ ಸೃಷ್ಟಿಯಾಗಿದ್ದು, ಗೋಚರತೆ ಕಡಿಮೆಯಾಗಿದ್ದು, ರಸ್ತೆ ಅಪಘಾತಗಳ (Road Accident) ಸಂಖ್ಯೆಯೂ ಹೆಚ್ಚುತ್ತಿದೆ.
📍Rohtak | Dozens Of Trucks In Massive Pile-Up Due To Dense Fog, Many Injured pic.twitter.com/pNHHBIyY3d
— NDTV (@ndtv) December 14, 2025
ಹರಿಯಾಣದ ರೋಹ್ಟಕ್ ಹೆದ್ದಾರಿಯಲ್ಲಿಂದು ಟ್ರಕ್‌ಗಳು (Dozens Of Trucks), ಬಸ್‌ಗಳು ಸೇರಿದಂತೆ 30ಕ್ಕೂ ಹೆಚ್ಚು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಹಲವು ಚಾಲಕರು (Drivers) ಗಾಯಗೊಂಡಿದ್ದಾರೆ. ವಾಹನಗಳಿಗೆ ಭಾರೀ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: ವೋಟ್ ಚೋರಿ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಕಹಳೆ – ಸಿದ್ದರಾಮಯ್ಯ, ಡಿಕೆಶಿ, ಸಚಿವರು, ಶಾಸಕರು ಭಾಗಿ
ಘಟನೆ-1
ರೋಹ್ಟಕ್‌ನ ಮೆಹಮ್ ಪ್ರದೇಶದಲ್ಲಿ 152 D ಹೆದ್ದಾರಿ ಛೇದಕದಲ್ಲಿ ಸುಮಾರು 35-40 ವಾಹನಗಳು, ಮುಖ್ಯವಾಗಿ ಟ್ರಕ್‌ಗಳು ಡಿಕ್ಕಿ ಹೊಡೆದ ಒಂದಕ್ಕೊಂದು ಡಿಕ್ಕಿ ಹೊಡೆದು ಸರಣಿ ಅಪಘಾತವಾಗಿದ್ದು, ಪರಿಣಾಮ ಹಲವರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಒಂದು ಟ್ರಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಜನ ಧಾವಿಸಿದ್ದಾರೆ. ಗಾಯಾಳುಗಳನ್ನ, ಆಸ್ಪತ್ರೆಗೆ ಸಾಗಿಸಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.
Buses, Cars, Damaged In Vehicle Pile-Ups in Haryana Amid Dense Fog pic.twitter.com/KltTDyrDqe
— NDTV (@ndtv) December 14, 2025
ಘಟನೆ-2
ಇದರೊಂದಿಗೆ ಹಿಸಾರ್‌ನ ರಾಷ್ಟ್ರೀಯ ಹೆದ್ದಾರಿ-52ರ ಧಿಕ್ತಾನಾ ಮೋಡಾದಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಎರಡು ಬಸ್ ಇತರ ವಾಹನಗಳಿಗೆ ಡಿಕ್ಕಿ ಹೊಡೆದಿವೆ. ಕೈತಾಲ್ ರಸ್ತೆ ಮಾರ್ಗದ ಬಸ್ ಡಂಪರ್ ಟ್ರಕ್‌ಗೆ ಡಿಕ್ಕಿ ಹೊಡೆದ ಬಳಿಕ ಹಿಂದಿನಿಂದ ಬಂದ ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿವೆ. ನಂತರ ಒಂದು ಕಾರು ಮತ್ತು ನಂತರ ಒಂದು ಮೋಟಾರ್ ಸೈಕಲ್ ಕೂಡ ಈ ರಾಶಿಗೆ ಸೇರಿಕೊಂಡಿದೆ. ಅಪಘಾತದಲ್ಲಿ ಹಲವು ಮಂದಿ ಚಾಲಕರು ಗಾಯಗೊಂಡಿದ್ದಾರೆ. ಆದ್ರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದನ್ನೂ ಓದಿ: 1 ಗಂಟೆಯ ಕಾರ್ಯಕ್ರಮ, 22 ನಿಮಿಷಕ್ಕೆ ಮೆಸ್ಸಿ ಹೊರಟಿದ್ದೇಕೆ? – ಇಲ್ಲಿದೆ ಅಸಲಿ ಕಾರಣ
ಘಟನೆ-3
ಮತ್ತೊಂದು ಪ್ರಕರಣದಲ್ಲಿ ರೇವಾರಿಯ ರಾಷ್ಟ್ರೀಯ ಹೆದ್ದಾರಿ-352 ರಲ್ಲಿ ಕಡಿಮೆ ಗೋಚರತೆಯಿಂದಾಗಿ ಸುಮಾರು 3-4 ಬಸ್‌ಗಳು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಾಳುಗಳನ್ನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.
ಕಳೆದ ಕೆಲವು ದಿನಗಳಿಂದ ಹರಿಯಾಣದಲ್ಲಿ ತೀವ್ರ ಶೀತಗಾಳಿ ಉಂಟಾಗುತ್ತಿದ್ದು, ಹೆಚ್ಚಿನ ಜಿಲ್ಲೆಗಳಲ್ಲಿ ತಾಪಮಾನವು 4-6 ಡಿಗ್ರಿ ಸೆಲ್ಸಿಯಸ್ ಕುಸಿದಿದೆ. ಇದನ್ನೂ ಓದಿ: ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್ – ಗ್ರಾಪಂ, ಬ್ಲಾಕ್, ಪುರಸಭೆಯಲ್ಲಿ ಯುಡಿಎಫ್ ಮೈತ್ರಿಕೂಟಕ್ಕೆ ದೊಡ್ಡ ಜಯ


