– ಅಶ್ವಿನಿ ಗೌಡ ಚಪ್ಪಾಳೆ ತಟ್ಟಿದ್ದು ಯಾರ ಮಾತಿಗೆ?
ಬಿಗ್ ಬಾಸ್ (Bigg Boss) ಮನೆಯಲ್ಲಿ ಟಾಸ್ಕ್ ವಾರ್ ಜೋರಾಗಿದೆ. ಮನೆಯಲ್ಲಿ ಫ್ರೆಂಡ್‌ಗಳಂತಿದ್ದ ರಜತ್ (Rajat) ಮತ್ತು ಗಿಲ್ಲಿ (Gilli), ಸುದೀಪ್ ಎದುರೇ ಕಿತ್ತಾಡಿಕೊಂಡಿದ್ದಾರೆ. ಸವಾಲ್-ಪ್ರತಿ ಸವಾಲ್ ಹಾಕಿದ್ದಾರೆ.
ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್ (Sudeep), ‘ಯಾರ ಪಾಪದ ಕೊಡ ತುಂಬಿದೆ’ ಅಂತ ಟಾಸ್ಕ್ ಕೊಡ್ತಾರೆ. ಸ್ಪರ್ಧಿಗಳನ್ನು ಸಾಲಾಗಿ ನಿಲ್ಲಿಸಿ, ಅವರ ಎದುರು ಗಾಜಿನ ಬೌಲ್‌ಗಳನ್ನು ಇಡಲಾಗಿತ್ತು. ಒಬ್ಬೊಬ್ಬರಾಗಿ ಬಂದು ನೀರು ತೆಗೆದುಕೊಂಡು, ತಾವು ಆಯ್ಕೆ ಮಾಡುವ ಸ್ಪರ್ಧಿಯ ಬೌಲ್‌ಗೆ ನೀರು ಹಾಕಿ ಕಾರಣ ಕೊಡಬೇಕು ಅನ್ನೋದು ಟಾಸ್ಕ್. ಇದನ್ನೂ ಓದಿ: ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ – ಆತ್ಮಹತ್ಯೆ ಶಂಕೆ
ನಿಮ್ಮ ಪ್ರಕಾರ ಯಾರ ಪಾಪದ ಕೊಡ ತುಂಬಿದೆ?
ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/J8h3PYQwxW
— Colors Kannada (@ColorsKannada) December 14, 2025
ಗಿಲ್ಲಿ ಟಾಸ್ಕ್ ವಿಚಾರ ಮುಂದಿಟ್ಟು ರಜತ್‌ನ ಆಯ್ಕೆ ಮಾಡಿಕೊಳ್ತಾರೆ. ಇದಕ್ಕೆ ರಜತ್ ಬೇಸರಗೊಂಡು, ಗಿಲ್ಲಿಗೆ ಟಾಸ್ಕ್ ಆಡೋದಕ್ಕೆ ಬರಲ್ಲ ಅಂತ ಟಾಂಗ್ ಕೊಡ್ತಾರೆ. ಇಬ್ಬರ ನಡುವೆ ವಾಗ್ವಾದ ಆಗುತ್ತದೆ. ಎಲ್ಲರನ್ನೂ ಆಚೆ ಕಳಿಸಿಯೇ ನಾನು ಹೋಗೋದು ಅಂತ ರಜತ್ ಸವಾಲ್ ಹಾಕ್ತಾರೆ. ರಜತ್‌ನ ಆಚೆ ಕಳಿಸಿಯೇ ನಾನು ಆಚೆ ಹೋಗೋದು ಅಂತ ಗಿಲ್ಲಿ ಪ್ರತಿ ಸವಾಲ್ ಹಾಕ್ತಾರೆ.
ಈ ವಾಗ್ವಾದದ ನಡುವೆ ಅಶ್ವಿನಿ ಗೌಡ ಚಪ್ಪಾಳೆ ತಟ್ಟುತ್ತಾರೆ. ಯಾರ ಮಾತಿಗೆ ಅವರು ಚಪ್ಪಾಳೆ ತಟ್ಟುತ್ತಾರೆ ಅನ್ನೋದು ಕುತೂಹಲ. ಇದನ್ನೂ ಓದಿ: ದುರಂಧರ್ ಚಿತ್ರ ಕಂಡು ಕಣ್ಣು ಕೆಂಪು ಮಾಡಿಕೊಂಡ ಪಾಕಿಸ್ತಾನ..ಏನ್ ಕಾರಣ?

