ವಾಷಿಂಗ್ಟನ್: ಭಾರತದಿಂದ (India) ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 50% ಸುಂಕ ಹೇರಿದ ಟ್ರಂಪ್ ಕ್ರಮವನ್ನು ಖಂಡಿಸಿ ಅಮೆರಿಕದ (USA) ಸಂಸತ್ತಿನಲ್ಲಿ ನಿರ್ಣಯವನ್ನು ಮಂಡಿಸಲಾಗಿದೆ.
ಕೆಳಮನೆಯಲ್ಲಿ ಮೂವರು ಸದಸ್ಯರು 50% ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್ (Donald Trump) ಅವರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆಯನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ನಿರ್ಣಯವನ್ನು ಮಂಡಿಸಿದರು.
ಭಾರತ ಪ್ರಮುಖ ಪಾಲುದಾರ ದೇಶವಾಗಿದೆ. ಈ ಕ್ರಮಗಳು ಕಾನೂನುಬಾಹಿರ ಮತ್ತು ಅಮೇರಿಕನ್ ಕಾರ್ಮಿಕರು, ಗ್ರಾಹಕರು ಮತ್ತು ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಕಾರಕ ಎಂದು ಕರೆದಿದ್ದಾರೆ.
ಪ್ರತಿನಿಧಿಗಳಾದ ಡೆಬೊರಾ ರಾಸ್, ಮಾರ್ಕ್ ವೀಸಿ ಮತ್ತು ರಾಜಾ ಕೃಷ್ಣಮೂರ್ತಿ ಅವರು ಭಾರತ, ಬ್ರೆಜಿಲ್ ಮೇಲಿನ ಹೇರಿರುವ ನಿರ್ಣಯವನ್ನು ಕೊನೆಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಭಾರತ ಜೊತೆ ಸೇರಿ ಹೊಸ ಸೂಪರ್ ಕ್ಲಬ್ – C5 ಒಕ್ಕೂಟಕ್ಕೆ ಟ್ರಂಪ್ ಒಲವು?
Representatives Deborah Ross (NC-02), Marc Veasey (TX-33), and Raja Krishnamoorthi (IL-08) introduced a resolution to terminate President Donald Trump’s national emergency authorizing tariffs of up to 50 percent on imports from India, helping to restore Congress’s constitutional…
— Sharad Dubey (@Sharad9Dubey) December 13, 2025
ಉತ್ತರ ಕೆರೊಲಿನಾದ ಆರ್ಥಿಕತೆಯು ವ್ಯಾಪಾರ, ಹೂಡಿಕೆ ಮತ್ತು ಭಾರತೀಯ ಅಮೆರಿಕನ್ ಸಮುದಾಯದ ಮೂಲಕ ಭಾರತದೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ ಎಂದು ಕಾಂಗ್ರೆಸ್ ಸದಸ್ಯೆ ರಾಸ್ ಹೇಳಿದರು. ಭಾರತೀಯ ಕಂಪನಿಗಳು ರಾಜ್ಯದಲ್ಲಿ ಒಂದು ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಹೂಡಿಕೆ ಮಾಡಿವೆ. ಜೀವ ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಆದರೆ ಉತ್ತರ ಕೆರೊಲಿನಾ ತಯಾರಕರು ವಾರ್ಷಿಕವಾಗಿ ಭಾರತಕ್ಕೆ ನೂರಾರು ಮಿಲಿಯನ್ ಡಾಲರ್‌ಗಳಷ್ಟು ಸರಕುಗಳನ್ನು ರಫ್ತು ಮಾಡುತ್ತಾರೆ ಎಂದರು.
ಭಾರತವು ಒಂದು ಪ್ರಮುಖ ಸಾಂಸ್ಕೃತಿಕ, ಆರ್ಥಿಕ ಮತ್ತು ಕಾರ್ಯತಂತ್ರದ ಪಾಲುದಾರ ದೇಶವಾಗಿದೆ. ಈ ಅಕ್ರಮ ಸುಂಕಗಳು ಈಗಾಗಲೇ ಹೆಚ್ಚುತ್ತಿರುವ ವೆಚ್ಚಗಳೊಂದಿಗೆ ಹೋರಾಡುತ್ತಿರುವ ಜನರ ಮೇಲೆ ಭಾರೀ ತೆರಿಗೆ ಬಿದ್ದಿದೆ ಎಂದು ಟ್ರಂಪ್ ಸರ್ಕಾರದ ನಿರ್ಧಾರವನ್ನು ಮಾರ್ಕ್ ವೀಸಿ ಟೀಕಿಸಿದರು. ಇದನ್ನೂ ಓದಿ: 9 ಕೋಟಿ ಕೊಟ್ರೆ ಅಮೆರಿಕ ವೀಸಾ – ಟ್ರಂಪ್ ಗೋಲ್ಡ್ ಕಾರ್ಡ್ ಬಿಡುಗಡೆ

