ಶಾರುಖ್ ಖಾನ್ (Sharukh Khan) ಅಭಿನಯದ ಪಠಾಣ್ ಸಿನಿಮಾ 2023ರಲ್ಲಿ ತೆರೆಕಂಡು ಭರ್ಜರಿ ಸೌಂಡ್ ಮಾಡಿತ್ತು. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪಾಕಿಸ್ತಾನಿ ಐಎಸ್‌ಐ ಏಜೆಂಟ್ ಆಗಿ ನಟಿಸಿದ್ದರು. ಜೊತೆಗೆ ಶಾರುಖ್ ಜೊತೆ ಸಲ್ಮಾನ್ ಖಾನ್ (Salman Khan) ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದಲ್ಲಿ ಸಿನಿಮಾಗೆ ಸಖತ್ ಮೈಲೇಜ್ ತಂದುಕೊಟ್ಟಿತ್ತು.
ಬಾಲಿವುಡ್‌ನ ಬಾಕ್ಸಾಫೀಸ್‌ನ ಸುಲ್ತಾನರೆಂದೇ ಖ್ಯಾತಿ ಹೊಂದಿರೋ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಒಂದೇ ಸಿನಿಮಾದಲ್ಲಿ ನಟಿಸಿದ್ದು, ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ತಂದುಕೊಟ್ಟಿತ್ತು. ಇದೀಗ ಬಾಲಿವುಡ್‌ನಲ್ಲಿ ಸದ್ದಿಲ್ಲದೇ ಪಠಾಣ್-2 ಸಿನಿಮಾಗಾಗಿ ತಯಾರಿಗಳು ನಡೆಯುತ್ತಿವೆ. ಮತ್ತೆ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರಂತೆ. ಈ ಬಾರಿ ಅತಿಥಿ ಪಾತ್ರದಲ್ಲಿ ಅಲ್ಲ, ಬದಲಾಗಿ ಶಾರುಕ್ ಜೊತೆ ಸಹನಟನಾಗಿ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಜೋರಾಗಿದೆ.ಇದನ್ನೂ ಓದಿ:ಕಾಗದದ ಮೇಲೆ ಹುಟ್ಟಿದ ಪಾತ್ರ ಜೀವ ಪಡೆದಾಗ… `ಕಾಂತಾರ’ದ ಆತ್ಮಕಥೆ ಬಿಚ್ಚಿಟ್ಟ ರಿಷಬ್
ಯಶ್‌ರಾಜ್ ಫಿಲಂಸ್ ನಿರ್ಮಾಣದಲ್ಲಿ ಸಿನಿಮಾ ತಯಾರಾಗಲಿದೆ. ವಾರ್-2 ಸಿನಿಮಾ ನಿರ್ಮಾಣ ಮಾಡಿದ್ದ ಯಶ್‌ರಾಜ್ ಫಿಲಂಸ್‌ಗೆ ಭಾರೀ ಮೊತ್ತದ ನಷ್ಟ ಆಗಿದೆ. ಆದರೂ ಸೂಪರ್ ಸ್ಪೈ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ ಸಂಸ್ಥೆ. ಇನ್ನು ಈ ಸಿನಿಮಾದಲ್ಲಿ ದೀಪಿಕಾ ಮದಲಾಗಿ ಹೊಸ ನಾಯಕಿಗೆ ಅವಕಾಶ ಕೊಡಲಾಗಿದೆ ಎನ್ನಲಾಗ್ತಿದೆ. ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಪಠಾಣ್-2 ಚಿತ್ರದಲ್ಲಿ ಫುಲ್ ಪ್ಲೆಡ್ಜ್ ಸಹನಟರಾಗಿ ಕಾಣಿಸಿಕೊಳ್ತಿರೋದು ಅವರ ಅಭಿಮಾನಿಗಳಿಗೆ ಮತ್ತಷ್ಟು ಸಂಭ್ರಮ ತಂದಿದೆ. 2026ರ ಹೊಸ ವರ್ಷದ ವೇಳೆಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬೀಳಲಿದೆ.

