ಹಾವೇರಿ: ವಂಚಕನೊಬ್ಬ (Karwar) ಕಾರವಾರ – ಅಂಕೋಲಾ ರಸ್ತೆಯ ಪಕ್ಕದಲ್ಲಿ ಉದ್ಯಮಿಯೊಬ್ಬರಿಗೆ ಜಾಗ ತೋರಿಸಿ ಸುಮಾರು 25 ಲಕ್ಷ ರೂ. ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ.
ಕಾರವಾರ ಮೂಲದ ಸಾಯಿನಾಥ್ ಎಂಬಾತ ಹಾವೇರಿಯ (Haveri) ಶಿಗ್ಗಾಂವಿ ಮೂಲದ ಇರ್ಷಾದ್ ಖಾನ್‌ಗೆ ಇಲ್ಲಸಲ್ಲದ ಆಮಿಷ ತೋರಿಸಿ 25 ಲಕ್ಷ ರೂ. ಹಣವನ್ನ ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಸಾಯಿನಾಥ್ ಮೂಲತಃ ಕಾರವಾರ ನಗರದ ನಿವಾಸಿ. ಅಲ್ಲಿಯೇ ಪೊಲೀಸ್ (Police) ಕಾನ್ಸ್‌ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಈಗ ಕೆಲಸಕ್ಕೆ ರಾಜೀನಾಮೆ ಕೊಟ್ಟು ಜನರಿಗೆ ಪಂಗನಾಮ ಹಾಕುವ ಕೆಲಸ ಮಾಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 1,000 ಅಡಿ ಪ್ರಪಾತಕ್ಕೆ ಉರುಳಿದ ಟ್ರಕ್ – ಅಸ್ಸಾಂನ 18 ಕಾರ್ಮಿಕರ ದುರ್ಮರಣ
ಇರ್ಷಾದ್ ಖಾನ್, ರಸ್ತೆ ಬಳಿ ಹೋಟೆಲ್ ನಿರ್ಮಿಸಲು ಕಮರ್ಷಿಯಲ್ ಪ್ರಾಪರ್ಟಿ ಹುಡುಕ್ತಿದ್ದರು. ಹೀಗೆ ಪರಿಚಯವಾದವನೇ ಸಾಯಿನಾಥ್. ಕಾರವಾರ – ಅಂಕೋಲಾ ರಸ್ತೆ ಪಕ್ಕ ಯಾರದ್ದೋ ಜಾಗ ತೋರಿಸಿದ್ದಾನೆ. ಕಮರ್ಷಿಯಲ್ ಪ್ರಾಪರ್ಟಿ ಕೊಡಿಸೋದಾಗಿ ಬಣ್ಣದ ಮಾತು ಹೇಳಿ ಸಾಯಿನಾಥ್ ನಂಬಿಸಿದ್ದಾನೆ. ಬಳಿಕ ನಿಮ್ಮ ಅಕೌಂಟ್ ಮೂಲಕ ಬೇಡ, ನನ್ನ ಅಕೌಂಟ್‍ಗೆ ಹಾಕಿಸಿ ಆರ್‌ಟಿಸಿ ಮಾಡುತ್ತೇನೆ ಎಂದು 25 ಲಕ್ಷ ರೂ. ತೆಗೆದುಕೊಂಡು ಹೋಗಿದ್ದಾನೆ.
ಸಾಯಿನಾಥ್‍ಗೆ ಹಣ ಕೊಟ್ಟ ವಿಡಿಯೋ ಮಾಡಿಕೊಂಡಿದ್ದು, ಇದೀಗ ಹಣನೂ ಇಲ್ಲ. ಜಾಗನೂ ಇಲ್ಲದೇ ಇರ್ಷಾದ ಖಾನ್ ಪರದಾಡುತ್ತಿದ್ದಾರೆ. ಈ ಬಗ್ಗೆ ಸಾಯಿನಾಥ್‍ಗೆ ಕೇಳಿದರೆ ಹಣ ಕೊಡಲ್ಲ, ಯಾವಾಗ ಕೊಟ್ಟಿದ್ದಿಯಾ? ಪೊಲೀಸ್ ಕಂಪ್ಲೆಂಟ್ ಮಾಡೋದಾದರೆ ಮಾಡು ಎಂದು ಅವಾಜ್ ಹಾಕ್ತಾನಂತೆ. ಇರ್ಷಾದ್ ಇದೀಗ ಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಕುರಿ ತೊಳೆಯುತ್ತಿದ್ದ ಇಬ್ಬರು ಯುವಕರು ಚೆಕ್ ಡ್ಯಾಂನಲ್ಲಿ ಮುಳುಗಿ ಸಾವು

