– ಕುಮ್ಮಕ್ಕು ಕೊಟ್ಟವರ ಹೆಸರು ಉಲ್ಲೇಖ ಆಗಬೇಕು; ಎಸ್.ಆರ್ ವಿಶ್ವನಾಥ್ ಒತ್ತಾಯ
ಬೆಳಗಾವಿ: ಧರ್ಮಸ್ಥಳ ಪ್ರಕರಣದಲ್ಲಿ ಬುರುಡೆ ಗಾಂಗ್ (Dharmasthala Burude Gang) ಬಗ್ಗೆ ಎಸ್ಐಟಿ ಕೋರ್ಟ್‌ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಆರು ಜನ ಷಡ್ಯಂತ್ರ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಹಿಂದೂ ಧರ್ಮದ ಭಾವನೆ ಹಾಗೂ ಧಾರ್ಮಿಕ ಭಾವನೆ ಜೊತೆಗೆ ಚೆಲ್ಲಾಟ ಆಡಿದ್ದಾರೆ. ಇವರು ಪಾತ್ರದಾರಿಗಳು ಆದರೆ ಸೂತ್ರಧಾರಿಗಳು ಸಿಎಂ ಸೂತ್ತ ಇರುವರೆ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಬೆಳಗಾವಿ ಸುವರ್ಣಸೌಧದ (Balagavi Suvarna Soudha) ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಈ ಸರ್ಕಾರ ಜನರ ಭಾವನೆ ಜೊತೆ ಚೆಲ್ಲಾಟ ಆಡಿದೆ. ಹಾದಿ ಬೀದಿಯಲ್ಲಿ ಹೋಗುವರ ಮಾತುಗಳನ್ನ ಕೇಳಿ ಎಸ್ಐಟಿ ರಚನೆ ಮಾಡಿದೆ. ಇದರಿಂದ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಬುರುಡೆ ಗಾಂಗ್ ಶಾಮೀಲು ಎಂಬ ವರದಿ ಬಂದಿದೆ. ಸೂತ್ರಧಾರಿಗಳು ಬೆರೆಯೇ ಇದ್ದಾರೆ. ಸೂತ್ರಧಾರಿಗಳು ಕೂಡ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಸುತ್ತಲೂ ಇದ್ದಾರೆ ಎಂದು ಜನರು ಮಾತನಾಡುತ್ತಿದ್ದಾರೆ ಎಂದರು.

ಕುಮ್ಮಕ್ಕು ಕೊಟ್ಟವರ ಹೆಸರು ಉಲ್ಲೇಖ ಆಗಬೇಕು
ಇನ್ನೂ ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಆರು ಜನ ಭಾಗಿಯಾಗಿದ್ದಾರೆ ಅಂತ ಗೊತ್ತಾಗಿದೆ. ಆದರೆ ಕೇವಲ ಅವರಷ್ಟೇ ಅಲ್ಲ, ಕುಮ್ಮಕು ಕೊಟ್ಟವರ ಹೆಸರು ಉಲ್ಲೇಖ ಮಾಡಿಲ್ಲ. ಅವರ ಬಗ್ಗೆಯೂ ತನಿಖೆ ಆಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ದೆಹಲಿಗೆ ಚಿನ್ನಯ್ಯನನ್ನ ಕರೆದುಕೊಂಡುಹೋಗಿ ಹೇಳಿಕೊಟ್ಟವರು, ಯೂಟ್ಯೂಬ್ ಮಂದಿಗೆ ಹಣಕಾಸಿನ ಸಹಾಯ ಮಾಡಿದವರ ಪತ್ತೆ ಮಾಡಿಲ್ಲ, ಆರು ಮಂದಿ ಎಷ್ಟು ತಪ್ಪು ಮಾಡಿದ್ದಾರೋ ಅವರಿಗೆ ಪ್ರೇರಣೆ ಮಾಡಿದವರಿಗೂ ಶಿಕ್ಷೆ ಆಗಬೇಕು. ಕೂಡಲೇ ವಿಶೇಷ ಕೋರ್ಟ್ ರಚನೆ ಮಾಡಿ ವಿಚಾರಣೆ ನಡೆಯಬೇಕು. ಸರ್ಕಾರದ ಹಣ ವ್ಯಯ ಮಾಡಲಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದೆ ಸರ್ಕಾರದ ಹಣವು ವೆಚ್ಚಾಗಿದೆ. ನಮ್ಮ ಹಿಂದೂ ಧರ್ಮರದ ಅಪಪ್ರಚಾರ ಮಾಡಿದ್ದಾರೆ ಅವರನ್ನ ಹೊರಗೆ ತೆಗೆಯಬೇಕು ಎಂದು ಆಗ್ರಹಿಸಿದರು.

ಸಿಟಿ ರವಿ ಆಕ್ರೋಶ
ಅಪಪ್ರಚಾರ ಮಾಡಿದಾಗಲೇ ಹಿಂದೂ ಧರ್ಮ ಘಾಸಿಯಾಗಿದೆ ಧರ್ಮಸ್ಥಳ ವಿಚಾರ ಬಂದಾಗಲೇ ಅವತ್ತೇ ಇದು ಅಪಪ್ರಚಾರ ಮತ್ತು ಷಡ್ಯಂತ್ರ ಎಂದು ಹೇಳಿದ್ದೆ. ಈಗ ಎಸ್ಐಟಿ ಆರು ಜನ ಶಾಮೀಲು ಇದ್ದಾರೆ ಎಂದು ವರದಿ ನೀಡಿದೆ. ಷಡ್ಯಂತ್ರ ಯಾರೆ ಮಾಡಿದರು ಒಂದು ದುರುದ್ದೇಶದಿಂದ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ನಿಯೋ ಕಮ್ಯುನಿಸ್ಟ್. ನಿಷ್ಠಾವಂತ ಮಾನಸಿಕ ಮಿದುಳು ಕೆಲಸ ಮಾಡುತ್ತಿದೆ. ಅದಕ್ಕೆ ಕೆಲವರು ಗೊಬ್ಬರ ನೀರು ಹಾಕಿದ್ದೆ, ನೆರೆಯ ರಾಜ್ಯದ ಸಂಸದ ಸಹಕಾರ ಮಾಡಿದ್ದಾರೆ ಎಂದು ಆರೋಪ ಇದೆ. ಬುರಡೆ ಗ್ಯಾಂಗ್ ಹಗೆದರು ಅಷ್ಟೇ ಅಲ್ಲಿ ಏನು ಸಿಗ್ಲಿಲ್ಲ. ಸಾಮಾಜಿಕ ಅಪಪ್ರಚಾರ ನಡೆಯಿತು ಎಂದು ಹೇಳಿದರು.

