ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಕೆಲಸ ಮಾಡುವ ಈ ಅಂತರ್ ಸರ್ಕಾರಿ ಸಮಿತಿಯ ಅಧಿವೇಶನವನ್ನು ಭಾರತ ಇದೇ ಮೊದಲ ಬಾರಿಗೆ ಆಯೋಜಿಸಿದೆ. ಸಮಿತಿಯ 20ನೇ ಅಧಿವೇಶನವು ಡಿ.8ರಿಂದ ಕೆಂಪುಕೋಟೆಯಲ್ಲಿ ನಡೆಯುತ್ತಿದ್ದು, ಡಿ.13ರವರೆಗೆ ನಡೆಯಲಿದೆ.ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಇಂಪ್ಯಾಕ್ಟ್; ನಿತ್ಯ 7 ಕಿಮೀ ನಡೆಯುತ್ತಿದ್ದ ಶಾಲಾ ಮಕ್ಕಳಿಗೆ ಸಿಕ್ತು ಜೀಪ್ ಭಾಗ್ಯ
ದೀಪಾವಳಿ ಹಬ್ಬವನ್ನು ಯುನೆಸ್ಕೋ ಹಬ್ಬಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಘೋಷಿಸಿದಾಗ, ಅಲ್ಲಿ ನೆರೆದಿದ್ದ ಜನಸಮೂಹ ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಘೋಷಣೆಗಳಲ್ಲಿ ಕೂಗಿದರು. ಪ್ರಸ್ತುತ ಕುಂಭಮೇಳ, ಕೋಲ್ಕತ್ತಾದ ದುರ್ಗಾ ಪೂಜೆ, ಗುಜರಾತ್‌ನ ಗರ್ಭ ನೃತ್ಯ, ಯೋಗ, ವೇದ ಪಠಣದ ಸಂಪ್ರದಾಯ ಸೇರಿ 15 ಆಚರಣೆಗಳು ಯೂನೆಸ್ಕೋ ಪಟ್ಟಿಯಲ್ಲಿವೆ
🔴 BREAKING
New inscription on the #IntangibleHeritage List: Deepavali, #India🇮🇳.
Congratulations!https://t.co/xoL14QknFp #LivingHeritage pic.twitter.com/YUM7r6nUai
— UNESCO 🏛️ #Education #Sciences #Culture 🇺🇳 (@UNESCO) December 10, 2025
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ಮತ್ತು ಪ್ರಪಂಚದಾದ್ಯಂತ ಜನರು ಈ ನಿರ್ಧಾರದಿಂದ ಖುಷಿಯಾಗಿದ್ದಾರೆ. ದೀಪಾವಳಿ ನಮ್ಮ ಸಂಸ್ಕೃತಿ ಮತ್ತು ನೀತಿಯೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ. ಇದು ನಮ್ಮ ನಾಗರಿಕತೆಯ ಆತ್ಮ. ಇದು ಬೆಳಕು ಮತ್ತು ಸದಾಚಾರವನ್ನು ಸಂಕೇತಿಸುತ್ತದೆ. ಯುನೆಸ್ಕೋ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ದೀಪಾವಳಿ ಸೇರ್ಪಡೆಯಿಂದಾಗಿ ಈ ಹಬ್ಬದ ಜಾಗತಿಕ ಜನಪ್ರಿಯತೆ ಮತ್ತಷ್ಟು ಹೆಚ್ಚಲಿದೆ. ಭಗವಾನ್ ಶ್ರೀ ರಾಮನ ಆದರ್ಶಗಳು ನಮಗೆ ಶಾಶ್ವತವಾಗಿ ಮಾರ್ಗದರ್ಶನ ನೀಡಲಿ ಎಂದು ಹೇಳಿದರು.ಇದನ್ನೂ ಓದಿ: ‘ಪಬ್ಲಿಕ್ ಟಿವಿ’ ಇಂಪ್ಯಾಕ್ಟ್; ನಿತ್ಯ 7 ಕಿಮೀ ನಡೆಯುತ್ತಿದ್ದ ಶಾಲಾ ಮಕ್ಕಳಿಗೆ ಸಿಕ್ತು ಜೀಪ್ ಭಾಗ್ಯ

