ಬೆಂಗಳೂರಿನಲ್ಲಿ ಬುಡಮೇಲಾಗಿ ಬಿತ್ತು ಬೃಹತ್ ಮರ – ಚಲಿಸುತ್ತಿದ್ದ ವಾಹನಗಳು ಜಖಂ, ಡ್ರೈವರ್ ಗಂಭೀರ

Public TV
0 Min Read
WhatsApp Image 2017 06 04 at 4.26.56 PM

ಬೆಂಗಳೂರು: ಇಂದು ಬೆಂಗಳೂರಿನ ಶ್ರೀನಗರದ ಪಿಇಎಸ್ ಕಾಲೇಜು ಬಳಿ ಚಲಿಸುತ್ತಿದ್ದ ವಾಹನಗಳ ಮೇಲೆ ಬೃಹತ್ ಮರ ಬುಡಸಮೇತ ಉರುಳಿಬಿದ್ದಿದೆ.

WhatsApp Image 2017 06 04 at 4.26.57 PM

ಈ ವೇಳೆ ಮರದಡಿಯಿದ್ದ 2 ಆಟೋ, 1 ಕಾರು, 3 ದ್ವಿಚಕ್ರ ವಾಹನ ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಶ್ರೀನಗರದ ನಾಗೇಂದ್ರ ಬ್ಲಾಕ್ ಬಳಿ ಘಟನೆ ನಡೆದಿದ್ದು, ಮೂವರಿಗೆ ಗಾಯಗಳಾಗಿವೆ. ಆಟೋ ಚಾಲಕನ ಸ್ಥಿತಿ ಗಂಭೀರವಾಗಿದೆ. ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

vlcsnap 2017 06 04 20h08m52s821

ಗಿರಿನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಟ್ರಾಫಿಕ್ ಕ್ಲೀಯರ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಿಬಿಎಂಪಿ ಅರಣ್ಯ ಘಟಕದ ಸಿಬ್ಬಂದಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *