Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಂಪ್ರದಾಯ ಮೀರಿ ನಡೀತಾ ಹರಕೆ ನೇಮೋತ್ಸವ? – ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಅಪಸ್ವರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಸಂಪ್ರದಾಯ ಮೀರಿ ನಡೀತಾ ಹರಕೆ ನೇಮೋತ್ಸವ? – ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಅಪಸ್ವರ

Cinema

ಸಂಪ್ರದಾಯ ಮೀರಿ ನಡೀತಾ ಹರಕೆ ನೇಮೋತ್ಸವ? – ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಅಪಸ್ವರ

Public TV
Last updated: December 9, 2025 1:33 pm
Public TV
Share
1 Min Read
Rishab Shetty Kantara
SHARE

ಮಂಗಳೂರು: ಕಾಂತಾರ ಚಾಪ್ಟರ್ 1 (Kantara Chapter 1) ಯಶಸ್ವಿ ಬೆನ್ನಲ್ಲೇ ಮಂಗಳೂರಿನ (Mangaluru) ಬಾರೆಬೈಲು ಜಾರಂದಾಯ ಬಂಟ ಹಾಗೂ ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ನಡೆದ ಹರಕೆ ನೇಮೋತ್ಸವ ವೇಳೆ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಕೇಳಿಬಂದಿದೆ.

ನಟ ರಿಷಬ್ ಶೆಟ್ಟಿ (Rishab Shetty) ಹಾಗೂ ಹೊಂಬಾಳೆ ಫಿಲಂಸ್ (Hombale Films) ವತಿಯಿಂದ ಹರಕೆ ನೇಮೋತ್ಸವ ನಡೆದಿತ್ತು. ನೇಮೋತ್ಸವ ಆರಂಭಕ್ಕೂ ಮುನ್ನ ದೈವಸ್ಥಾನದಲ್ಲಿ ದೈವ ಎಣ್ಣೆಬೂಳ್ಯ ನೀಡುವ ವಾಡಿಕೆ ಸಂಪ್ರದಾಯವಿದೆ. ಈ ವೇಳೆ ದೈವ ನರ್ತಕರು ತುಳುನಾಡಿನ ದೈವಾರಾಧನೆ ಸಂಪ್ರದಾಯ ಮೀರಿ ವರ್ತಿಸಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದನ್ನೂ ಓದಿ: ದೈವದ ಅಭಯ: ರಿಷಬ್ ಟೀಮ್‌ನಲ್ಲಿ ಸಂಚಲನ

ನಟ ರಿಷಬ್ ಶೆಟ್ಟಿಯ ಎರಡೂ ಕಾಂತಾರ ಸಿನಿಮಾಗಳಲ್ಲಿ ಮಾರ್ಗದರ್ಶಕರಾಗಿದ್ದವರೇ ಹರಕೆ ನೇಮೋತ್ಸವದ ವೇಳೆ ಎಣ್ಣೆಬೂಳ್ಯ ಸ್ವೀಕರಿಸಿದ್ದರು. ಈ ವೇಳೆ ದೈವ ನಟ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ಭಾವುಕ ಸನ್ನಿವೇಶ ನಡೆದಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತುಳುನಾಡ ದೈವಾರಾಧಕರ ಪರ-ವಿರೋಧ ಚರ್ಚೆ ನಡೆದಿದೆ. ತುಳುನಾಡಿನ ದೈವಾರಾಧನಾ ಪರಂಪರೆಯಲ್ಲಿ ದೈವ ನರ್ತನ ನಿಯಮ ಮೀರಿ ವರ್ತಿಸಬಾರದು. ದೈವಾರಾಧನೆಯ ಕಟ್ಟಲೆಗಳನ್ನು ಮೀರಿ ದೈವ ಕೋಲದ ಸಂಪ್ರದಾಯ ಮರೆತು ವರ್ತಿಸಿದ್ದಾರೆ. ಸದ್ಯ ದೈವ ನರ್ತಕರ ನಡೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಪರ-ವಿರೋಧ ಚರ್ಚೆಯಾಗುತ್ತಿದೆ.

ಇನ್ನೂ ಹರಕೆ ನೇಮೋತ್ಸವದ ವೇಳೆ ದೈವ ನರ್ತಕರಾಗಿದ್ದವರೇ ಕಾಂತಾರ ಎರಡು ಸಿನಿಮಾಗಳಲ್ಲಿಯೂ ಮಾರ್ಗದರ್ಶನ ನೀಡಿದ್ದರು. ಅಲ್ಲದೇ ಕಾಂತಾರ ಮೊದಲ ಸಿನಿಮಾಗೆ ಸೈಮಾ ಪ್ರಶಸ್ತಿ ಬಂದಾಗಲೂ ಇವರೇ ಪ್ರಶಸ್ತಿ ಸ್ವೀಕರಿಸಿದ್ದರು.ಇದನ್ನೂ ಓದಿ: ತುಳುನಾಡಿಗೆ ಬಂದು ಹರಕೆ ನೇಮೋತ್ಸವ ಸಲ್ಲಿಸಿದ ಕಾಂತಾರ ಚಿತ್ರತಂಡ

TAGGED:KantaraMangalururishab shettyಕಾಂತಾರನೇಮೋತ್ಸವಮಂಗಳೂರುರಿಷಬ್ ಶೆಟ್ಟಿಹರಕೆ
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Narendra Modi 1 2
Latest

ಕಾಂಗ್ರೆಸ್‌ ಮಿತ್ರ ಪಕ್ಷಗಳಿಂದ ಭ್ರೂಣ ಹತ್ಯೆ – ದೇಶದ ಮಹಿಳೆಯರಲ್ಲಿ ಕ್ಷಮೆ ಕೇಳಿದ ಮೋದಿ

Public TV
By Public TV
31 minutes ago
Iranian Envoy
Latest

ಭಾರತದ 2 ತೈಲ ಟ್ಯಾಂಕರ್‌ ಮೇಲೆ ಗುಂಡಿನ ದಾಳಿ – ಇರಾನ್‌ ರಾಯಭಾರಿಗೆ ಭಾರತ ಸಮನ್ಸ್‌

Public TV
By Public TV
52 minutes ago
fairoz pathan
Dharwad

ಕೈ ಯುವ ನಾಯಕ ಫೈರೋಜ್ ಹತ್ಯೆ| ಮತ್ತೆ ಮೂವರ ಬಂಧನ – ಬಂಧಿತರ ಸಂಖ್ಯೆ 12ಕ್ಕೆ ಏರಿಕೆ

Public TV
By Public TV
1 hour ago
Tristan Stubbs David Miller
Cricket

ಕೊನೆಯ 3 ಎಸೆತದಲ್ಲಿ ಹೋಯ್ತು 16 ರನ್‌ – ತವರಲ್ಲಿ ಆರ್‌ಸಿಬಿಯನ್ನು ಕೆಡವಿದ ಡೆಲ್ಲಿ

Public TV
By Public TV
2 hours ago
Lakshmi Hebbalkar
Bengaluru City

ಚಿರತೆಯಿಂದ ಅತ್ತೆ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಲಕ್ಷ್ಮಿ ಹೆಬ್ಬಾಳ್ಕರ್‌ ಭರವಸೆ

Public TV
By Public TV
2 hours ago
one of three people who went swimming in bhadra backwaters goes missing search underway for body
Chikkamagaluru

ಸಿದ್ದರಾಮಯ್ಯ ಸೇತುವೆ ಬಳಿ ಈಜಲು ತೆರಳಿದ್ದ ಮೂವರಲ್ಲಿ ಓರ್ವ ನಾಪತ್ತೆ – ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?