ಟೋಕಿಯೊ: ಜಪಾನ್‌ನ ಉತ್ತರ ಕರಾವಳಿಯಲ್ಲಿಂದು (Japan Coast) ಅವಳಿ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ವರದಿ ಮಾಡಿದೆ.
ಮೊದಲ ಭೂಕಂಪ 7.6 ತೀವ್ರತೆಯಿದ್ದು, ಪೂರ್ವ-ಈಶಾನ್ಯಕ್ಕೆ 84 ಕಿ.ಮೀ ದೂರದಲ್ಲಿ ಸಂಭವಿಸಿದ್ದು, 53.1 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. 2ನೇ ಭೂಕಂಪವು (Earthquake) 5.5 ತೀವ್ರತೆ ಹೊಂದಿದ್ದು, ಹಚಿನೋಹೆಯ ಪೂರ್ವ-ಈಶಾನ್ಯಕ್ಕೆ 96 ಕಿ.ಮೀ ದೂರದಲ್ಲಿ ಸಂಭವಿಸಿದೆ. ಕರಾವಳಿಯಿಂದ 44.3 ಕಿ.ಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ.
ಈ ಬೆನ್ನಲ್ಲೇ ಜಪಾನ್ ಹವಾಮಾನ ಇಲಾಖೆ ಭಾರೀ ಸುಮಾನಿ ಎಚ್ಚರಿಕೆ ನೀಡಿದೆ. ಈಶಾನ್ಯ ಕರಾವಳಿಗೆ ಸುಮಾರು 10 ಎತ್ತರದಷ್ಟು ಸುನಾಮಿ ಅಪ್ಪಳಿಸಿದೆ ಎಂದು ಸೂಚನೆ ನೀಡಿದೆ.
ಹೊಕ್ಕೈಡೊ, ಅಮೋರಿ ಮತ್ತು ಇವಾಟೆ ಪ್ರಾಂತ್ಯಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದ್ದು, ಹಲವಾರು ಬಂದರುಗಳಲ್ಲಿ 20 ರಿಂದ 50 ಸೆಂ.ಮೀ (7 ರಿಂದ 18 ಇಂಚು) ಎತ್ತರದ ಸುನಾಮಿ ಅಪ್ಪಳಿಸಿರುವುದಾಗಿ ಜಪಾನ್ ಹವಾಮಾನ ಇಲಾಖೆ ತಿಳಿಸಿರುವುದಾಗಿ ವರದಿಯಾಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ. ಜೊತೆಗೆ ರಕ್ಷಣಾ ತಂಡಗಳನ್ನೂ ಅಣಿಗೊಳಿಸಿದೆ.


