ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾಗಿಷ್ಟು ವರ್ಷ ನೆಹರು ದೇಶದ ಸ್ವಾತಂತ್ರ್ಯಕ್ಕಾಗಿ ಜೈಲಿನಲ್ಲಿದ್ದರು ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ತೀವ್ರ ವಾಗ್ದಾಳಿ ನಡೆಸಿದರು.
ವಂದೇ ಮಾತರಂ ಹಾಡಿಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪ್ರಧಾನಿ ಮೋದಿ (PM Modi) ನೆಹರೂ ವಿರುದ್ಧ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದರು. ಮೋದಿ ಪ್ರಧಾನಿಯಾಗಿದ್ದಷ್ಟು ವರ್ಷ ನೆಹರು ಜೈಲಿನಲ್ಲಿದ್ದರು ಎಂದು ಕುಟುಕಿದರು. ಇದನ್ನೂ ಓದಿ: ದೇಶ ಸಮಸ್ಯೆಗಳಿಂದ ಬಳಲುತ್ತಿರುವಾಗ ವಂದೇ ಮಾತರಂ ಚರ್ಚೆ ಅಗತ್ಯವಿತ್ತೇ? – ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
ಪ್ರಧಾನಿ ಮೋದಿ ಗುರಿಯಾಗಿಸಿ ಮಾತನಾಡಿದ ಸಂಸದೆ, ನಮ್ಮ ಪ್ರಧಾನಿ 12 ವರ್ಷಗಳ ಕಾಲ ಹುದ್ದೆಯಲ್ಲಿದ್ದಾರೆ. ಆದ್ರೆ ಪಂಡಿತ್ ನೆಹರು (Nehru) ಬಹುತೇಕ ಅಷ್ಟೇ ವರ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಜೈಲಿನಲ್ಲಿ ಕಳೆದರು. ನಂತರ 17 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ರು ಅಂತ ಸ್ಮರಿಸಿದರು. ಇದನ್ನೂ ಓದಿ: ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ವಂದೇ ಮಾತರಂ ಹಾಡನ್ನು ಒಡೆದು ತುಂಡು ಮಾಡಿತು: ನರೇಂದ್ರ ಮೋದಿ
ದೇಶ ಸೇವೆಗಾಗಿ ನಿಧನ
ನೆಹರು ಇಸ್ರೋ ಸ್ಥಾಪಿಸದಿದೇ ಇದ್ದಿದ್ದರೇ, ಇಂದು ಬಂಗಾಳ ಅಸ್ತಿತ್ವದಲ್ಲಿರುತ್ತಿರಲಿಲ್ಲ. ಡಿಆರ್‌ಡಿಒ ರಚಿಸದಿದ್ದರೇ, ತೇಜಸ್ ನಿರ್ಮಿಸುತ್ತಿರಲಿಲ್ಲ. ಏಮ್ಸ್ ನಿರ್ಮಿಸದಿದ್ದರೆ, ಕೋವಿಡ್ ಸಮಯದಲ್ಲಿ ಜನರನ್ನ ಹೇಗೆ ನಡೆಸಿಕೊಳ್ಳುತ್ತಿದ್ದರು? ನೆಹರು ದೇಶ ಸೇವೆಗಾಗಿ ನಿಧನರಾದರು ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ರಾಷ್ಟ್ರವನ್ನು ಒಗ್ಗೂಡಿಸಿದ್ದರಿಂದ ಜನರು ವಂದೇ ಮಾತರಂಗೆ ಋಣಿಯಾಗಿರಬೇಕು: ಮೋದಿ
ಮುಂದುವರಿದು… ಆದ್ರೆ ಬಿಜೆಪಿ ಇಂದು ನೆಹರು ಅವರನ್ನ ಅವಮಾನಿಸುತ್ತಿದೆ. ನೆಹರು ಬಗ್ಗೆ ಚರ್ಚಿಸುವ ಮುನ್ನ ನಮ್ಮನ್ನ ಇಲ್ಲಿಗೆ ಕಳುಹಿಸಿರುವ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿ. ನಿರುದ್ಯೋಗ, ಬಡತನ, ವಾಯುಮಾಲಿನ್ಯದಂತಹ ವಿಷಯಗಳ ಬಗ್ಗೆ ಏಕೆ ಸಂಸತ್ತಿನಲ್ಲಿ ಚರ್ಚೆ ಆಗ್ತಿಲ್ಲ? ಎಂದು ಪ್ರಶ್ನಿಸಿದ್ರು.


