ಮುಂಬೈ: ಭಾರತ ಮತ್ತು ದಕ್ಷಿಣ ಆಫ್ರಿಕಾ (Ind vs SA) ನಡುವಿನ 5 ಪಂದ್ಯಗಳ ಟಿ20 ಸರಣಿಯು ಡಿ.9ರಿಂದ ಶುರುವಾಗಲಿದೆ. ಮೊದಲ ಪಂದ್ಯ ಕಟಕ್‌ನ ಬಾರಾಬತಿ ಕ್ರೀಡಾಂಗಣನಲ್ಲಿ ನಡೆಯಲಿದ್ದು, ರಾತ್ರಿ 7 ಗಂಟೆಗೆ ಶುರುವಾಗಲಿದೆ. ಪಂದ್ಯಕ್ಕೂ ಮುನ್ನ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ (Suryakumar Yadav) ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇಂಜುರಿ ಸಮಸ್ಯೆ ಬಳಿಕ ತಂಡಕ್ಕೆ ಮರಳಿದ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಶುಭಮನ್ ಗಿಲ್‌ರನ್ನ ಸ್ವಾಗತಿಸಿದ್ದಾರೆ. ಬಳಿಕ ಮಾತನಾಡಿ, ಪಾಂಡ್ಯ ಕಂಬ್ಯಾಕ್ ಮಾಡಿದ್ದು ಸಂತಸವಾಗಿದೆ. ಮುಂಬರುವ ಟಿ20 ವಿಶ್ವಕಪ್ ತಯಾರಿಗೆ ಇದು ಅತ್ಯಂತ ನಿರ್ಣಾಯಕ. ಅಲ್ಲದೇ ಗಿಲ್ ಕೂಡ ಫಿಟ್ ಅಂಡ್ ಫೈನ್ ಆಗಿದ್ದು, ತಂಡಕ್ಕೆ ಕಂಬ್ಯಾಕ್ ಮಾಡ್ತಿದ್ದಾರೆ ಎಂದು ತಿಳಿಸಿದ್ರು. ಇದನ್ನೂ ಓದಿ: RCB ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟ ಡಿಕೆಶಿ – 2026ರ IPL ಬೆಂಗಳೂರಿನಲ್ಲೇ ಫಿಕ್ಸ್: ಖುದ್ದು ಡಿಸಿಎಂ ಘೋಷಣೆ
ಸಂಜುಗೆ ಸಾಕಷ್ಟು ಅವಕಾಶ ಕೊಟ್ಟಿದ್ದೇವೆ
ಇನ್ನೂ ಶುಭಮನ್ ಗಿಲ್ (Shubman Gill) ಬದಲಿಗೆ ಆರಂಭಿಕನಾಗಿ ಸಂಜು ಸ್ಯಾಮ್ಸನ್ ಕಣಕ್ಕಿಳಿಯುತ್ತಾರಾ ಅನ್ನೋ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ಶುಭಮನ್ ಗಿಲ್ ತಂಡದಲ್ಲಿದ್ದಾಗ ಸ್ಯಾಮ್ಸನ್ 5ನೇ ಕ್ರಮಾಂಕದಲ್ಲಿ ಅಥವಾ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ತಾರೆ. ಯಾವುದೇ ಆಟಗಾರ ಆರಂಭಿಕ ಹೊರತುಪಡಿಸಿ ಎಲ್ಲಾ ಕ್ರಮಾಂಕದಲ್ಲೂ ಹೊಂದಿಕೊಳ್ಳುವವರಾಗಿರಬೇಕು. ಸಂಜುಗೆ ಸಾಕಷ್ಟು ಅವಕಾಶಗಳನ್ನ ನೀಡಿದ್ದೇವೆ. ಈಗ ಅವರು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋದಕ್ಕೆ ರೆಡಿಯಿದ್ದಾರೆ. ಸಂಜು ಓಪನರ್ ಆಗಿ ಆಡಿದಾಗ ಉತ್ತಮ ಇನ್ನಿಂಗ್ಸ್ ಕಟ್ಟಿದ್ದಾರೆ. ಆದ್ರೆ ಅದಕ್ಕೂ ಮುನ್ನ ಶುಭಮನ್ ಗಿಲ್ ಆರಂಭಿಕನಾಗಿ ಆಡಿದ್ದಾರೆ ಎಂದರು. ಇದನ್ನೂ ಓದಿ: ಮದುವೆ ಮುರಿಯಿತು – ಮೌನ ಮುರಿದು ವದಂತಿಗಳಿಗೆ ತೆರೆ ಎಳೆದ ಸ್ಮೃತಿ ಮಂಧಾನ
ಸಂಜು, ಗಿಲ್ ಇಬ್ಬರೂ ತಂಡದ ಭಾಗವಾಗಿರೋದು ತುಂಬಾ ಸಂತಸ ತಂದಿದೆ. ಒಬ್ಬರು ಓಪನಿಂಗ್ ಮಾಡಿದ್ರೆ ಇನ್ನೊಬ್ಬರು ಕೆಳ ಕ್ರಮಾಂಕದಲ್ಲಿ ಆಡಬಹುದು. ಟಿ20 ಫಾರ್ಮ್ಯಾಟ್‌ನಲ್ಲಿ ಬ್ಯಾಟರ್‌ಗಳಿಗೆ ಯಾವುದೇ ನಿರ್ದಿಷ್ಟ ಸ್ಥಾನಗಳಿಲ್ಲ. ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಬಹುದು, ಉದಾಹರಣೆಗೆ ತಿಲಕ್ ವರ್ಮಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನ ನೋಡಿರಬಹುದು. ಇನ್ನೂ ಶಿವಂ ದುಬೆ ಒಬ್ಬ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಹೋಲಿಸಲು ಆಗಲ್ಲ. ಏಕೆಂದ್ರೆ ಹಾರ್ದಿಕ್ ಪಾಂಡ್ಯ ಫಿನಿಷರ್ ಕೂಡ ಆಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಟೀಂ ಇಂಡಿಯಾ ಏಕದಿನ ಸರಣಿ ಗೆದ್ದ ಬೆನ್ನಲ್ಲೇ ಸಿಂಹಾಚಲಂ ದೇವಸ್ಥಾನಕ್ಕೆ ಕೊಹ್ಲಿ ಭೇಟಿ




