ಬೆಳಗಾವಿ: ಸುವರ್ಣಸೌಧದ ವಿಪಕ್ಷ ನಾಯಕರ ಕೊಠಡಿಯಲ್ಲಿ ಅಚ್ಚರಿ ವಿದ್ಯಮಾನ ನಡೆದಿದೆ. ಬಿಜೆಪಿ (BJP) ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಮಾತಾಡಿಸಿದ ಬಿ.ವೈ ವಿಜಯೇಂದ್ರ, ಏನಣ್ಣ… ಆರಾಮ ಇದ್ದೀರಾ? ಅಂತಾ ಕೇಳಿ ಕೈ ಕುಲುಕಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕರ ಕೊಠಡಿಯಲ್ಲಿ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ (HD Revanna) ಜೊತೆ ಕುಳಿತು ರಮೇಶ್ ಜಾರಕಿಹೊಳಿ ಮಾತಾಡುತ್ತಿದ್ದರು. ಇದೇ ವೇಳೆ ಆಗಮಿಸಿದ ವಿಜಯೇಂದ್ರ (BY Vijayendra), ರೇವಣ್ಣರನ್ನು ಮಾತಾಡಿಸಿದ ಬಳಿಕ ರಮೇಶ್ ಜಾರಕಿಹೊಳಿಗೆ ಹ್ಯಾಂಡ್ ಶೇಕ್ ಕೊಟ್ಟಿದ್ದು ವಿಶೇಷವಾಗಿತ್ತು.

