ಚಂಡೀಗಢ: ಮುಖ್ಯಮಂತ್ರಿ ಹುದ್ದೆ ಪಡೆಯಲು 500 ಕೋಟಿ ರೂ. ಕೊಡಬೇಕು ಎಂಬ ಕಾಂಗ್ರೆಸ್ (Congress) ನಾಯಕಿ ನವಜೋತ್ ಕೌರ್ ಸಿಧು (Navjot Kaur Sidhu) ಹೇಳಿಕೆ ಪಂಜಾಬ್‌ನಲ್ಲಿ (Punjab) ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾದ ನಂತರ ಅವರ ನೀಡಿದ ಹೇಳಿಕೆ ಬಿಜೆಪಿ (BJP) ಮತ್ತು ಎಎಪಿಯಿಂದ(AAP) ತೀವ್ರ ಟೀಕೆಗೆ ಗುರಿಯಾಗಿದೆ. ಅಷ್ಟೇ ಅಲ್ಲದೇ ಪಕ್ಷದೊಳಗೆ ತೀವ್ರ ಅಸಮಾಧಾನವನ್ನುಂಟುಮಾಡಿವೆ.
ಪಕ್ಷವು 2027ರ ವಿಧಾನಸಭಾ ಚುನಾವಣೆಗೆ ತಮ್ಮ ಪತಿ, ಮಾಜಿ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿದರೆ ಮಾತ್ರ ಅವರು ಸಕ್ರಿಯ ರಾಜಕೀಯಕ್ಕೆ ಮರಳಲು ಪರಿಗಣಿಸುತ್ತಾರೆ ಎಂದು ನವಜೋತ್ ಕೌರ್ ಹೇಳಿದ್ದಾರೆ.
ನನ್ನ ಪತಿಯನ್ನು ಸಿಎಂ ಅಭ್ಯರ್ಥಿಯನ್ನಾಗಿ ಬಿಂಬಿಸುವುದು ಅನುಮಾನ. ರಾಜ್ಯ ಕಾಂಗ್ರೆಸ್‌ನಲ್ಲಿ ತೀವ್ರ ಆಂತರಿಕ ಕಲಹವಿದ್ದು, ಈಗಾಗಲೇ ಹಲವು ನಾಯಕರು ಉನ್ನತ ಹುದ್ದೆಗೆ ಲಾಬಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: 610 ಕೋಟಿ ರೂ. ಮೌಲ್ಯದ ಟಿಕೆಟ್‌ಗಳ ಹಣ ಮರುಪಾವತಿಸಿದ ಇಂಡಿಗೋ
कांग्रेस नेता नवजोत कौर सिद्धू का बड़ा बयान।
अगर कांग्रेस नवजोत सिद्धू को सीएम फेस बनाए तो वो तैयार हैं पंजाब की राजनीति में आने के लिए।
लेकिन कांग्रेस में 5 लोग लगे हुए सीएम बनने की रेस में।
हमारे पास 500 करोड नहीं है कि हम किसी को इतना पैसा दे सकें।
नवजोत कौर… pic.twitter.com/G2Q96TRISU
— Amit Pandey (@amitpandaynews) December 6, 2025
ನಾವು ಯಾವಾಗಲೂ ಪಂಜಾಬ್ ಪರವಾಗಿಯೇ ಮಾತನಾಡುತ್ತೇವೆ. ಆದರೆ ಸಿಎಂ ಕುರ್ಚಿಗೆ ಕುಳಿತುಕೊಳ್ಳಲು 500 ಕೋಟಿ ರೂ. ನೀಡುವುದಿಲ್ಲ. ಅಧಿಕಾರಕ್ಕೆ ಬರಲು ಹಣ ನೀಡುವವರೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
ಆಪ್ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ನಿಜವಾದ ಕಾರ್ಯತಂತ್ರ ಏನು ಎನ್ನುವುದು ಗೊತ್ತಾಗಿದೆ. ಈ ಮೊತ್ತವನ್ನು ಯಾರೂ ಪಾವತಿಸುತ್ತಾರೆ ಮತ್ತು ಯಾರು ಸ್ವೀಕರಿಸುತ್ತಾರೆ ಎನ್ನುವುದು ಬಹಿರಂಗವಾಗಬೇಕಿದೆ ಎಂದು ಆಗ್ರಹಿಸಿದೆ. ಇದನ್ನೂ ಓದಿ: ಮೈಸೂರು ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನ್ಯಾಪ್ ಮಾಡಿ 30 ಲಕ್ಷಕ್ಕೆ ಬೇಡಿಕೆ – ಆರೋಪಿಗಳು ಅರೆಸ್ಟ್
पंजाब कांग्रेस के नेता और पूर्व प्रदेश अध्यक्ष नवजोत सिंह सिद्धू जी की पत्नी नवजोत कौर सिद्धू जी ने गंभीर आरोप लगाया है कि कांग्रेस में मुख्यमंत्री का पद कम से कम 500 करोड़ रुपये अटैची में देने पर ही संभव है। यह आरोप नया नहीं है। इससे पहले कांग्रेस की वरिष्ठ नेता मार्गरेट अल्वा… pic.twitter.com/L3HTyHVi0a
— Dr. Sudhanshu Trivedi (@SudhanshuTrived) December 7, 2025
ಟಿಕೆಟ್ ವಿತರಣೆ ಮತ್ತು ನಾಯಕತ್ವದಲ್ಲಿ ಉನ್ನತ ಹುದ್ದೆ ಪಡೆಯಲು ಹಣ ನೀಡಬೇಕು ಎಂದು ಕಾಂಗ್ರೆಸ್‌ನ ಇತರ ಸದಸ್ಯರು ಮಾಡಿದ್ದ ಆರೋಪಗಳು ಸಿಧು ಅವರ ಹೇಳಿಕೆಯಿಂದ ಮತ್ತೊಮ್ಮೆ ದೃಢಪಟ್ಟಿದೆ ಎಂದು ಬಿಜೆಪಿ ಹೇಳಿದೆ.

