ಸದಾ ಕ್ವಾಟೆ, ಜಗಳ, ಟಾಸ್ಕ್, ಮೋಜು-ಮಸ್ತಿಯಿಂದ ಕೂಡಿರುತ್ತಿದ್ದ ಬಿಗ್ ಬಾಸ್ ಮನೆ ಈಗ ಸೈಲೆಂಟ್ ಆಗಿದೆ. ಮನೆಗೆ ವಿಲನ್ ಎಂಟ್ರಿಯಾಗಿದ್ದು, ಮನೆಮಂದಿ ಭಯಭೀತರಾಗಿದ್ದಾರೆ.
ಮನೆಯಲ್ಲಿ ಬಿಗ್ ಬಾಸ್ ವಾಯ್ಸ್ ಕೇಳುತ್ತಿಲ್ಲ. ಭಯ ಹುಟ್ಟಿಸುವ ವಿಲನ್ ವಾಯ್ಸ್ ಕೇಳುತ್ತಿದೆ. ‘ಎಚ್ಚರ.. ನಾಳೆ ಬಾ’ ಎಂಬಂತಹ ಬರಹಗಳು ಆತಂಕ ಹುಟ್ಟಿಸಿವೆ. ಬೆಚ್ಚಿಬೀಳಿಸುವ ಮುಖವಾಡ, ಪ್ರತಿಕೃತಿಗಳು ಮನೆ ಸೇರಿವೆ. ಯಾರು ಈ ವಿಲನ್ ಎಂಬ ಆತಂಕ ಉಂಟಾಗಿದೆ.
ವಿಲನ್ ಬಂದಾಯ್ತು; ಭಯ ಶುರುವಾಯ್ತು
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/AOmDnRLeqE
— Colors Kannada (@ColorsKannada) December 8, 2025
ಮನೆಯ ಸ್ಪರ್ಧಿಗಳು ಕೂಡ ವಿಲನ್ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮನೆಯ ವಿಚಿತ್ರ ಬದಲಾವಣೆಗೆ ಹಲವರು ಬೆಚ್ಚಿಬಿದ್ದಿದ್ದಾರೆ. ಮೊದಲೇ ದೆವ್ವಗಳೆಂದರೆ ಭಯಪಡುವ ಚೈತ್ರಾ ಕುಂದಾಪುರ ಅವರು, ವಿಚಿತ್ರ ಸದ್ದಿಗೆ ಚೀರಾಡಿ ಅವಿತುಕೊಳ್ಳುತ್ತಿದ್ದಾರೆ.
ವಿಲನ್ ಮನೆಯಲ್ಲಿ ಏನೇನಾಗ್ತಿದೆ? ಯಾರು ಹೇಗೆ ಕಾಣಿಸಿಕೊಳ್ತಾರೆ? ಮುಂದೇನಾಗುತ್ತೆ ಎಂಬ ಕುತೂಹಲ ವೀಕ್ಷಕರಲ್ಲಿ ಮನೆಮಾಡಿದೆ.

