ಕ್ಯಾಪ್ಟನ್ ಆಗಿದ್ದುಕೊಂಡೇ ಬಿಗ್ ಬಾಸ್ ಮನೆಯಿಂದ ಅಭಿಷೇಕ್ ಔಟ್ ಆಗಿದ್ದಾರೆ. ಅಭಿ ಮನೆಯಿಂದ ಹೊರಬಂದಿದ್ದು ವೀಕ್ಷಕರಿಗೆ ಶಾಕ್ ಕೊಟ್ಟಿದೆ. ನಂಬರ್ ಲಕ್ ಮೇಲೆ ನಂಬಿಕೆ ಇಟ್ಟಿದ್ದ ಅಭಿಗೆ ಅದೃಷ್ಟ ಕೈಕೊಟ್ಟಿದೆ.
ಇಂದು ಕಿಚ್ಚನ ಪಂಚಾಯ್ತಿಯಲ್ಲಿ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅಭಿ, ಸೂರಜ್ ಮತ್ತು ಮಾಳು ಇದ್ದರು. ಮೂವರನ್ನೂ ಆಕ್ಟಿವಿಟಿ ರೂಮ್‌ಗೆ ಸುದೀಪ್ ಕಳಿಸಿದರು. ಅಲ್ಲಿ ಮೂವರದ್ದು ಸೂಟ್‌ಕೇಸ್‌ಗಳಿದ್ದವು. ಎಲಿಮಿನೇಟ್ ಆದ ಅಭಿ ಸೂಟ್‌ಕೇಸ್‌ನಲ್ಲಿ ‘The End’ ಬರಹದ ಪ್ಲೆಕಾರ್ಡ್ ಇತ್ತು. ಅಲ್ಲಿಗೆ ಸೂರಜ್ ಮತ್ತು ಮಾಳು ಸೇಫ್ ಆಗಿ ಮನೆಯಲ್ಲಿ ಜರ್ನಿ ಮುಂದುವರಿಸಿದರು. ಇದನ್ನೂ ಓದಿ: ಜುಂ ಜುಂ ಮಾಯಾ.. ಹಾಡಿಗೆ ಗಿಲ್ಲಿ-ಅಶ್ವಿನಿ ಗೌಡ ಸಖತ್ ಸ್ಟೆಪ್
ಟಾಸ್ಕ್‌ಗಳನ್ನು ತುಂಬಾ ಅಚ್ಚುಕಟ್ಟಾಗಿ, ಬುದ್ದಿವಂತಿಕೆಯಿಂದ ಅಭಿ ಆಟವಾಡುತ್ತಿದ್ದರು. ಆ ಸಕ್ಸಸ್‌ನಿಂದಲೇ ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದರು. ಆದರೂ, ಮನೆಯಿಂದ ಔಟ್ ಆಗಿದ್ದಾರೆ.
ಅಭಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಮಾತನಾಡಬೇಕಿತ್ತು. ಸೈಲೆಂಟ್ ಆಗಿ ಇರಬಾರದಿತ್ತು. ಅದೇ ಆತನ ಸೋಲಿಗೆ ಕಾರಣ ಅಂತ ಸಹೋದರ ಪ್ರತಿಕ್ರಿಯೆ ನೀಡಿದ್ದಾರೆ. ಅಭಿ ಮನೆಯಲ್ಲೂ ಸೈಲೆಂಟ್.. ಯಾರ ಮನಸ್ಸಿಗೂ ನೋವಾಗುವಂತೆ ನಡೆದುಕೊಳ್ಳಲ್ಲ. ಬಿಗ್ ಬಾಸ್ ಮನೆಯಲ್ಲೂ ಹಾಗೆ ಇದ್ದ ಅಂತ ಅವರ ಅಮ್ಮ ಮಾತನಾಡಿದ್ದಾರೆ. ಇದನ್ನೂ ಓದಿ: ಮನಸ್ತಾಪಕ್ಕೆ ಬ್ರೇಕ್ – ಆಮಿರ್ ಖಾನ್ ಜೊತೆ ಲೋಕೇಶ್ ಕನಕರಾಜ್ ಸಿನಿಮಾ ಫಿಕ್ಸ್

