ಲೋಕೇಶ್ ಕನಕರಾಜ್ (Lokesh Kanagaraj) ನಿರ್ದೇಶನದ ಕೂಲಿ ಚಿತ್ರದಲ್ಲಿ ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರಕ್ಕಾಗಿ ಆಮಿರ್ ಖಾನ್ ಟೀಕೆಗೆ ಒಳಗಾಗಿರುವುದೂ ಇದೆ. ಆದರೆ ಅದೇ ಲೋಕೇಶ್ ಜೊತೆ ಮುಂದೆ ಆಮಿರ್ ಖಾನ್ ಚಿತ್ರ ಮಾಡೋದಾಗಿ ಘೋಷಿಸಿದ್ದರು. ಆದರೆ ಕೂಲಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ನಿರಾಶದಾಯಕ ರೆಸ್ಪಾನ್ಸ್ ಪಡೆದ ಬಳಿಕ ಪ್ರಾಜೆಕ್ಟ್ ಡ್ರಾಪ್ ಆಗಿದೆ ಎಂಬ ವದಂತಿ ಇತ್ತು. ಆದರೆ ಈಗ, ಸ್ವತಃ ಆಮಿರ್ ಖಾನ್ ಎಲ್ಲಾ ಊಹಾಪೋಹಗಳನ್ನ ತಳ್ಳಿಹಾಕಿದ್ದಾರೆ. ಲೋಕೇಶ್ ಕನಕರಾಜ್ ಜೊತೆ ಮುಂದಿನ ಸಿನಿಮಾ ಫಿಕ್ಸ್ ಅನ್ನೋದಾಗಿ ಹಿಂದಿ ಮಾಧ್ಯಮಕ್ಕೆ ಆಮಿರ್ ಖಾನ್ ಮಾಹಿತಿ ಹಂಚಿಕೊಂಡಿದ್ದಾರೆ.
ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮುಂದಿನ ಚಿತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಆಮಿರ್ ಖಾನ್ ಉತ್ತರಿಸಿದ್ದಾರೆ. ಈ ವೇಳೆ ಮುಂದಿನ ಸಿನಿಮಾ ಕುರಿತಾಗಿ ಮಾತನಾಡಿದ್ದಾರೆ. ಲೋಕೇಶ್ ಕಾಂಬಿನೇಷನ್ ಸಿನಿಮಾ ಕುರಿತು ಮಾತನಾಡಿರುವ ಆಮಿರ್ ಖಾನ್, `ಸಿನಿಮಾ ಚಿತ್ರೀಕರಣಕ್ಕೆ ಸಜ್ಜಾಗುವ ಹಂತದಲ್ಲಿದೆ ಜೊತೆಗೆ ಶೀಘ್ರದಲ್ಲೇ ಪೂರ್ತಿ ನಿರೂಪಣೆಯನ್ನು ಕೇಳಲಿದ್ದೇನೆ ಎಂದಿದ್ದಾರೆ. ಲೋಕೇಶ್ ಮತ್ತು ನಾನು ಶೀಘ್ರವೇ ಇನ್ನೊಂದು ಭೇಟಿಯಾಗಬೇಕು. ಕಳೆದ ತಿಂಗಳು ನಾವು ಮಾತನಾಡಿದ್ದೇವೆ, ಅವರು ಮುಂಬೈಗೆ ಬರೋದಾಗಿ ಹೇಳಿದ್ದಾರೆ. ನಾವು ಸ್ಕ್ರಿಪ್ಟ್ ಮೂಲಕ ಹೋಗುತ್ತೇವೆ. ಈಗ ಅದೇ ನನ್ನ ಲಿಸ್ಟ್‌ನಲ್ಲಿರುವ ಸಿನಿಮಾ’ ಎಂದಿದ್ದಾರೆ.
ಲಾಲ್‌ಸಿಂಗ್ ಚಡ್ಡಾ ಬಳಿಕ ಆಮಿರ್ ಖಾನ್ ಫುಲ್‌ಫ್ಲೆಜ್ಡ್ ಮಾಸ್ ಅವತಾರದಲ್ಲಿ ಕಾಣಿಸ್ಕೊಂಡಿಲ್ಲ. ಸಿತಾರೆ ಜಮೀನ್ ಪರ್ ಕಲಾತ್ಮಕ ಸಿನಿಮಾ ಶೈಲಿಯ ಚಿತ್ರವಾಗಿತ್ತು. ಈಗಾಗಿ ಅಭಿಮಾನಿಗಳ ಆಸೆಯನ್ನ ಆಮಿರ್ ಪೂರೈಸಲು ಮಾಸ್ ಡೈರೆಕ್ಟರ್ ಲೋಕೇಶ್ ಜೊತೆ ಚಿತ್ರ ಮಾಡೋದಾಗಿ ಘೋಷಿಸಿದ್ದರು. ಕೂಲಿ ಬಳಿಕ ಸೌಂಡ್ ಕಮ್ಮಿಯಾಗಿತ್ತು. ಇದೀಗ ವದಂತಿಗೆ ತೆರೆ ಎಳೆದ ಆಮಿರ್ ಖಾನ್ ಮುಂದಿನ ಚಿತ್ರ ಲೋಕೇಶ್ ಜೊತೆ ಅನ್ನೋದಾಗಿ ಘೋಷಿಸಿದ್ದಾರೆ.

