Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರೀತಿಯ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ – ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಮರ್ಡರ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ಪ್ರೀತಿಯ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ – ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಮರ್ಡರ್!

Chikkaballapur

ಪ್ರೀತಿಯ ವಿಚಾರಕ್ಕೆ ಯುವಕನ ಬರ್ಬರ ಹತ್ಯೆ – ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಮರ್ಡರ್!

Public TV
Last updated: December 6, 2025 8:14 am
Public TV
Share
2 Min Read
Chikkaballapura 2
SHARE

ಚಿಕ್ಕಬಳ್ಳಾಪುರ: ಆತ ತಾಯಿಗೆ ಇದ್ದ ಏಕೈಕ ಆಧಾರ. ಗಂಡ ಮತ್ತು ಹಿರಿಯ ಮಗನನ್ನ ಕಳೆದುಕೊಂಡು, ಚಿಕ್ಕ ಮಗನ ಬಗ್ಗೆ ನೂರಾರು ಕನಸು ಕಂಡಿದ್ದಳು. ಆದ್ರೆ ಮಗ ಪ್ರೀತಿ-ಪ್ರೇಮ (Love) ಅಂತ ಹೋಗಿ ಈಗ ಬೀದಿ ಹೆಣವಾಗಿದ್ದಾನೆ. ಪ್ರೀತಿಯ ವಿಚಾರದಲ್ಲಿ ಹಿಂದೆ ಗಲಾಟೆ ನಡೆದಿತ್ತಂತೆ. ಅದೇ ದ್ವೇಷದಿಂದ ಆಟೋದಲ್ಲಿ (Auto) ಹೋಗುತ್ತಿದ್ದವನನ್ನ ಹಿಂದೆಯಿಂದ ಕಾರಿನಲ್ಲಿ ಅಡ್ಡಗಟ್ಟಿ, ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಕೊಲೆ ಮಾಡಿದ್ದಾರೆ. ಅಷ್ಟಕ್ಕೂ ಕೊಲೆಯಾದವ ಯಾರು? ಎಲ್ಲಿ ಘಟನೆ ನಡೆದಿದ್ದು? ಅಂತಿರಾ ಮುಂದೆ ಓದಿ…

ಹೌದು. ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಯುವಕ, ಮಗನ ಸಾವಿಗೆ ನ್ಯಾಯ ಬೇಕು ಎಂದು ಪೊಲೀಸ್ ಠಾಣೆಯ (Police Station) ಎದುರಿನಲ್ಲಿ ಆಕ್ರೋಶ ಹೊರ ಹಾಕುತ್ತಿರುವ ಕುಟುಂಬಸ್ಥರು, ಇದ್ದ ಒಬ್ಬ ಮಗನನ್ನು ಕಳೆದುಕೊಂಡು ಕುಸಿದು ಬಿದ್ದಿರುವ ತಾಯಿ, ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ (Doddaballapura City Police Station) ಮುಂಭಾಗ. ಇದನ್ನೂ ಓದಿ: ಕಠಿಣ ಕ್ರಮ ಕೈಗೊಳ್ಳುತ್ತೇವೆ: ಇಂಡಿಗೋ ಬಿಕ್ಕಟ್ಟಿನ ಬಗ್ಗೆ ನಾಗರಿಕ ವಿಮಾನಯಾನ ಸಚಿವ ರಿಯಾಕ್ಷನ್‌

Chikkaballapura

ಪವನ್ (28) ಕೊಲೆಯಾದ ದುರ್ದೈವಿ. ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮನೆಯಲ್ಲಿದ್ದವನಿಗೆ ಯಾವುದೋ ಕರೆ ಬಂತು ಎಂದು ಮನೆಯಿಂದ ಹೊರಬಂದಿದ್ದಾನೆ. ಈ ವೇಳೆ ದೊಡ್ಡಬಳ್ಳಾಪುರದ ಡಿ ಕ್ರಾಸ್‌ನಿಂದ ಟಿಬಿ ಸರ್ಕಲ್ ಕಡೆಗೆ ಬರುವ ವೇಳೆ ಕಾರಿನಿಂದ ಬಂದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ: ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಧಗಧಗ; ಹಾವೇರಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಸಜೀವ ದಹನ

ಇನ್ನು, ಮೃತ ಪವನ್ ಮನೆಗೆ ಇದ್ದ ಏಕೈಕ ಆಧಾರ. ತಂದೆ ಮತ್ತು ಹಿರಿಯ ಸೋದರ ಸತ್ತ ನಂತರ ಮನೆಯ ಜವಾಬ್ದಾರಿಯನ್ನು ಆತನೇ ವಹಿಸಿಕೊಂಡಿದ್ದ. ಈಗ ಮಗನನ್ನು ಕಳೆದುಕೊಂಡ ತಾಯಿ ದಿಕ್ಕುದೋಚದ ಸ್ಥಿತಿಗೆ ಹೋಗಿದ್ದಾಳೆ. ಇನ್ನು ಕೊಲೆಯಾದವ ಎರಡು ದಿನದ ಹಿಂದೆಯಷ್ಟೇ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ವಾಪಸ್ ಆಗಿದ್ದ. ಆದರೆ ಈಗ ಪ್ರೀತಿ ವಿಚಾರಕ್ಕೆ ಬೀದಿ ಹೆಣವಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಹುಡುಗಿ ವಿಚಾರವಾಗಿ ಮೃತ ಪವನ್ ಮತ್ತು ಆತನ ಕುಟುಂಬಸ್ಥರು ಹುಡುಗಿಗೆ ಬುದ್ಧಿವಾದ ಹೇಳಿದ್ದರಂತೆ. ಆಗ ಆಕೆ ನಾನು ಇನ್ನೂ ಆತನ ತಂಟೆಗೆ ಬರುವುದಿಲ್ಲ ಎಂದು ಹೇಳಿದ್ದರಂತೆ. ಆದರೆ ಈಗ ಆಕೆಯ ಕಡೆಯವರೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳ ರಚನೆ ಮಾಡಿದ್ದು, ಶೋಧ ಕಾರ್ಯ ಮುಂದುವರೆಸಿದ್ದಾರೆ.

ಒಟ್ಟಾರೆ, ಪ್ರೀತಿ-ಪ್ರೇಮ ಅಂತೇಳಿ, ಮಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರೆ, ಇತ್ತ ಮನೆಯಲ್ಲಿ ಇದ್ದ ಎಲ್ಲಾ ಗಂಡಸರು ಸಾವನಪ್ಪಿದ ಕಾರಣ ತಾಯಿ ದಿಕ್ಕು ದೋಚದ ಸ್ಥಿತಿಗೆ ತಲುಪಿದ್ದಾರೆ. ಆರೋಪಿಗಳನ್ನ ಬಂಧಿಸಿದ ನಂತರ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ. ಪ್ರೀತಿ ವಿಚಾರಕ್ಕೆ ಯುವಕ ಬೀದಿ ಹೆಣವಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

TAGGED:Chikkaballapura PoliceDoddaballapurLove CrimeLove MatterLove storyಚಿಕ್ಕಬಳ್ಳಾಪುರ ಪೊಲೀಸ್ದೊಡ್ಡಬಳ್ಳಾಪುರಬೆಂಗಳೂರುಲವ್‌ ಮ್ಯಾಟರ್‌
Share This Article
Facebook Whatsapp Whatsapp Telegram

Cinema news

rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood

You Might Also Like

ICC Mens T20 World Cup ind vs Namibia Jasprit Bumrahs stunning catch Axar Patel shocked
Cricket

ಬುಮ್ರಾ ಸ್ಟನ್ನಿಂಗ್‌ ಕ್ಯಾಚ್‌ – ಅಕ್ಷರ್‌ ಪಟೇಲ್‌ ಶಾಕ್‌!

Public TV
By Public TV
8 hours ago
kids died accident
Districts

ಶಾಲಾ ಬಸ್ ಹರಿದು ಮಕ್ಕಳು ಸಾವು – ಸ್ವಗ್ರಾಮದಲ್ಲಿ ನೆರವೇರಿದ ಅಂತ್ಯಕ್ರಿಯೆ

Public TV
By Public TV
8 hours ago
Ishan Kishan Hardik Pandya
Cricket

ಕಿಶನ್‌ ದಾಖಲೆಯ ಫಿಫ್ಟಿ, ಪಾಂಡ್ಯ ಆಲ್‌ರೌಂಡರ್‌ ಆಟ – ನಮೀಬಿಯಾ ವಿರುದ್ಧ 93 ರನ್‌ಗಳ ಭರ್ಜರಿ ಜಯ

Public TV
By Public TV
8 hours ago
DK Shivakumar Rahul Gandhi Sonia Gandhi 1 1
Bengaluru City

ಸಿಎಂ ಪಟ್ಟಕ್ಕೆ ಡಿಕೆಶಿ ಪಟ್ಟು – ಸೋನಿಯಾ, ರಾಹುಲ್‌ ಕೊಟ್ಟ ಅಭಯವೇನು?

Public TV
By Public TV
9 hours ago
Chikkamagaluru
Chikkamagaluru

2 ದಿನಗಳ ಬಳಿಕ ಮತ್ತೆ ಕಾಫಿನಾಡಲ್ಲಿ ಅಪರಿಚಿತ ಲಘು ವಿಮಾನ ಹಾರಾಟ

Public TV
By Public TV
9 hours ago
RCB 3
Bengaluru City

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ – ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ಸರ್ಕಾರ ಅನುಮತಿ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?