ಬೆಂಗಳೂರು: ಸಿಲ್ಕ್ ಬೋರ್ಡ್ (Silk Board) ಭಾಗದ ಸವಾರರು ಕಳೆದ ಹಲವು ವರ್ಷಗಳಿಂದ ಟ್ರಾಫಿಕ್ ಸಮಸ್ಯೆ (Traffic Problem) ಎದುರಿಸುತ್ತಲೇ ಬಂದಿದ್ದಾರೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ಈ ಮಾರ್ಗದಲ್ಲಿ ಫ್ಲೈಓವರ್‌ಗಳು ಬಂದರೂ ಸಮಸ್ಯೆ ಬಗೆಹರಿದಿರಲಿಲ್ಲ. ಆದರೆ ಈ ಮಾರ್ಗದ ಬಹುನೀರಿಕ್ಷಿತ ಡಬ್ಬಲ್ ಡೆಕ್ಕರ್ ಫ್ಲೈಓವರ್ ಮತ್ತೊಂದು ಬದಿಯ ಸಂಚಾರ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ (BMRCL) ಮುಂದಾಗಿದ್ದು, ಶೀಘ್ರವೇ ಮುಕ್ತವಾಗಲಿದೆ.
ಕಳೆದ ವರ್ಷ ರಾಗಿಗುಡ್ಡ (RagiGudda) ಮತ್ತು ಹೆಚ್‌ಎಸ್‌ಆರ್ ಲೇಔಟ್ (HSR Layout) ಮಾರ್ಗದ ಡಬ್ಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ಒಂದು ಬದಿಯಲ್ಲಿ ಸಂಚಾರ ಮುಕ್ತ ಮಾಡಲಾಗಿತ್ತು. ಪರಿಣಾಮ ಈ ಮಾರ್ಗದ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಳಿ ಹೆಚ್ಚಾಗುತ್ತಿದ್ದ ಟ್ರಾಫಿಕ್ ಸಮಸ್ಯೆ ಒಂದು ಹಂತಕ್ಕೆ ಕಡಿಮೆಯಾಗಿತ್ತು. ಆದರೆ ಮತ್ತೊಂದು ಬದಿ ಮಾರ್ಗದ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮಾರ್ಗ ಓಪನ್ ಆಗಿರಲಿಲ್ಲ. ಇದನ್ನೂ ಓದಿ: ಕಠಿಣ ಕ್ರಮ ಕೈಗೊಳ್ಳುತ್ತೇವೆ: ಇಂಡಿಗೋ ಬಿಕ್ಕಟ್ಟಿನ ಬಗ್ಗೆ ನಾಗರಿಕ ವಿಮಾನಯಾನ ಸಚಿವ ರಿಯಾಕ್ಷನ್
ಈಗಲೂ ಹೆಚ್‌ಎಸ್‌ಆರ್ ಲೇಔಟ್ ಕಡೆಯಿಂದ ರಾಗಿಗುಡ್ಡ ಮಾರ್ಗಕ್ಕೆ ಸಂಚಾರ ಮಾಡುವ ಸವಾರರು ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್ ಜಂಕ್ಷನ್ ಸೇರಿದಂತೆ ಮಾರ್ಗದ ಹಲವು ಕಡೆ ನಿತ್ಯ ಟ್ರಾಫಿಕ್ ಜಂಜಾಟದಲ್ಲೇ ಸಂಚರಿಸುವಂತಾಗಿದೆ. ಆದರೆ ಮುಂದಿನ ಜನವರಿ ಅಂತ್ಯಕ್ಕೆ ಬ್ರೇಕ್ ಹಾಕಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ಸವಾರರಿಗೆ ಗುಡ್‌ನ್ಯೂಸ್ ನೀಡಲು ತಯಾರಿ ನಡೆಸಿದೆ. ಇದನ್ನೂ ಓದಿ: KSDL ನಲ್ಲಿ 1,000 ಕೋಟಿ ಅವ್ಯವಹಾರ ನಡೆದಿದೆ – ಜೆಡಿಎಸ್ ಶಾಸಕ ಹೆಚ್.ಟಿ ಮಂಜು ಬಾಂಬ್
ಹಲವು ವರ್ಷಗಳಿಂದ ಟ್ರಾಫಿಕ್‌ನಿಂದ ಕಂಗೆಟ್ಟಿದ್ದ ಜನಕ್ಕೆ ಕೊನೆಗೂ ಸಮಸ್ಯೆಗೆ ಪರಿಹಾರ ಸಿಗುತ್ತಿದೆ. ನಿಗದಿ ಪಡಿಸಿದ ದಿನಾಂಕದ ಒಳಗಡೆ ಎಲ್ಲಾ ಪರೀಕ್ಷೆಗಳು ನಡೆದರೆ ಜನವರಿ ಅಂತ್ಯಕ್ಕೆ ಫ್ಲೈ ಓವರ್ ಸಂಚಾರ ಮುಕ್ತವಾಗಲಿದೆ.


