ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ಅಲ್ಲು ಅರ್ಜು (Allu Arjun)ನ್ ನಟನೆಯ ಪುಷ್ಪ ಹಾಗೂ ಪುಷ್ಪ-2 ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡಿದೆ. ಬಾಕ್ಸಾಫೀಸ್‌ನಲ್ಲಿ ತನ್ನದೇ ಹೊಸ ದಾಖಲೆ ಸೃಷ್ಟಿಸಿದ ಪುಷ್ಪ-2 ಸಿನಿಮಾ ತೆರೆಕಂಡು ಇಂದಿಗೆ (ಡಿ.5) ಒಂದು ವರ್ಷವಾಗಿದೆ. ಒಂದು ವರ್ಷದ ಸಂಭ್ರಮದಲ್ಲಿ ನಟ ಅಲ್ಲು ಅರ್ಜುನ್ ಅಭಿಮಾನಿಗಳಿಗೆ (Allu Arjun Fans) ಧನ್ಯವಾದ ಹೇಳಿದ್ದಾರೆ.

ನಿರ್ದೇಶಕ ಸುಕುಮಾರ್ (Sukumar) ಜೊತೆಗಿನ ಪುಷ್ಪ-2 ಸೆಟ್‌ನ ಫೋಟೋ ಹಂಚಿಕೊಂಡು ಕೃತಜ್ಞತೆಯ ಸಾಲುಗಳನ್ನ ಬರೆದುಕೊಂಡಿದ್ದಾರೆ. ಪುಷ್ಪ ನಮ್ಮ ಜೀವನದಲ್ಲಿ ಐದು ವರ್ಷಗಳ ಮರೆಯಲಾಗದ ಪ್ರಯಾಣ. ಹೊಸ ಬಗೆಯ ಪ್ರಯತ್ನಕ್ಕೆ ಬೆನ್ನು ತಟ್ಟಿ, ಮತ್ತೊಂದು ಇಂತಹ ಪ್ರಯತ್ನ ಮಾಡಲು ಧೈರ್ಯ. ಶಕ್ತಿ, ಪ್ರೇರಣೆ ನೀಡಿದ ಪ್ರೇಕ್ಷಕರು ಹಾಗೂ ನಮ್ಮ ಅಭಿಮಾನಿಗಳಿಗೆ ಧನ್ಯವಾದಗಳು ಎಂದಿದ್ದಾರೆ. ಜೊತೆಗೆ ತಮ್ಮ ಗುರುಗಳಾದ ನಿರ್ದೇಶಕ ಸುಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಅಂದಹಾಗೆ ಪುಷ್ಪ-2 ಸಿನಿಮಾ 2024ರ ಡಿಸೆಂಬರ್ 5 ರಂದು ತೆರೆಕಂಡು ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಸಿನಿಮಾದ ಪ್ರೀಮಿಯರ್ ಸಂದರ್ಭದಲ್ಲಿ ಕಾಲ್ತುಳಿತ ಪ್ರಕರಣ ನಟನಿಗೆ ಜೈಲು ದರ್ಶನ ಮಾಡಿಸಿತ್ತು. ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದ್ದರು. ಸಿನಿಮಾದ ಪ್ರೀಮಿಯರ್‌ಗೆ ಬಂದ ನಟನಿಗೆ ಸಂಕಷ್ಟ ಎದುರಾಗಿತ್ತು. ಒಂದು ಕಡೆ ಸಿನಿಮಾ ಯಶಸ್ವಿ ಪ್ರದರ್ಶನ.. ಮತ್ತೊಂದು ಕಡೆ ಅಭಿಮಾನಿ ಸಾವಿನಿಂದ ಅಲ್ಲು ಅರ್ಜುನ್ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಸದ್ಯ ಪುಷ್ಪ-2 ಸಿನಿಮಾ ಬಳಿಕ ಅಟ್ಲಿ ಜೊತೆ ಸೂಪರ್ ಮ್ಯಾನ್ ಕಾನ್ಸೆಪ್ಟ್ನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಲ್ಲು ಅರ್ಜುನ್.

