– ಇ-ಪ್ರವಾಸಿ ವೀಸಾ ಎಂದರೇನು? ಪಡೆಯೋದು ಹೇಗೆ?
ನವದೆಹಲಿ: ಭಾರತವು ಶೀಘ್ರದಲ್ಲೇ ರಷ್ಯಾದ ನಾಗರಿಕರಿಗೆ 30 ದಿನಗಳ ಉಚಿತ ಇ-ಟೂರಿಸ್ಟ್ ವೀಸಾ (E-Tourist Visa) ಮತ್ತು 30 ದಿನಗಳ ಗುಂಪು ಪ್ರವಾಸಿ (ಗ್ರೂಪ್ ಟೂರಿಸ್ಟ್ ವೀಸಾ – Group Tourist Visa) ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದರು.
Addressing the joint press meet with President Putin.@KremlinRussia_E https://t.co/ECjpvWj7CF
— Narendra Modi (@narendramodi) December 5, 2025
ನವದೆಹಲಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮಕ್ಕೆ (Tourism) ಸಂಬಂಧಿಸಿದಂತೆ ಮಹತ್ವದ ಘೋಷಣೆ ಹೊರಡಿಸಿದ್ರು. ರಷ್ಯಾದ ನಾಗರಿಕರಿಗೆ ಇ-ಟೂರಿಸ್ಟ್ ವೀಸಾ ಮತ್ತು ಗುಂಪು ಪ್ರವಾಸಿ ವೀಸಾ ಸೇವೆಗಳನ್ನ ಶೀಘ್ರದಲ್ಲೇ ಪ್ರಾರಂಭಿಸಲಿದ್ದೇವೆ. ಈ ನಿರ್ಧಾರ ಪ್ರಕಟಿಸಲು ನನಗೆ ತುಂಬಾ ಹರ್ಷವಾಗಿದ್ದು, ಮುಂದಿನ 30 ದಿನಗಳಲ್ಲಿ ಸಕ್ರಿಯಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ-ರಷ್ಯಾ ಒಟ್ಟಾಗಿ ಸಾಗಲಿವೆ – ಪಹಲ್ಗಾಮ್ ನರಮೇಧ ಉಲ್ಲೇಖಿಸಿ ಮೋದಿ ಮಾತು
ಉಭಯ ದೇಶದ ನಾಗರಿಕರಿಗೆ ಇದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಈ ನಿರ್ಧಾರವು ಭಾರತ-ರಷ್ಯಾದ ಸಂಬಂಧವನ್ನು ಅದ್ರಲ್ಲೂ ವಿಶೇಷವಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರದಲ್ಲಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇ-ಟೂರಿಸ್ಟ್ ವೀಸಾ ಎಂದರೇನು?
ಇ-ಪ್ರವಾಸಿ ವೀಸಾ ಅಂದ್ರೆ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯುವ ಎಲೆಕ್ಟ್ರಾನಿಕ್ ವೀಸಾ. ಇದು ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ ಆಗಿರುತ್ತದೆ. ಇದನ್ನ ಪಡೆಯಲು ನೀವು ವೀಸಾ ಕಚೇರಿಗೆ ಭೇಟಿ ನೀಡುವ ಅಗತ್ಯ ಇರೋದಿಲ್ಲ. ಪ್ರವಾಸಿಗರು ಮನರಂಜನೆ, ಪ್ರಯಾಣ ಅಥವಾ ಸಂಬಂಧಿಕರನ್ನ ಭೇಟಿ ಮಾಡುವಂತಹ ಉದ್ದೇಶಗಳಿಗಾಗಿ ಇ-ಟೂರಿಸ್ಟ್ ವೀಸಾ ಪಡೆಯಲು ಅರ್ಜಿ ಸಲ್ಲಿಸಬಹುದು. ಇದನ್ನೂ ಓದಿ: ಶಾಂತಿಯುತ ಇತ್ಯರ್ಥಕ್ಕಾಗಿ ರಷ್ಯಾ ಕೆಲಸ ಮಾಡ್ತಿದೆ – ಉಕ್ರೇನ್ ಯುದ್ಧ ನಿಲ್ಲಿಸುವ ಸುಳಿವು ಕೊಟ್ಟ ಪುಟಿನ್
ಅರ್ಜಿ ಸಲ್ಲಿಸಿದ ನಂತರ ಮುಂದೇನು?
ಇ-ಪ್ರವಾಸಿ ವೀಸಾಗಾಗಿ ಅರ್ಜಿ ಸಲ್ಲಿಸಿದ ನಂತರ, ನೀವು ಇಮೇಲ್ ಮೂಲಕ ಎಲೆಕ್ಟ್ರಾನಿಕ್ ಪ್ರಯಾಣ ಅಧಿಕಾರವನ್ನ (ETA) ಅನ್ನು ಸ್ವೀಕರಿಸುತ್ತೀರಿ. ಈ ಅಧಿಕಾರವು ನಿಮ್ಮ ಪಾಸ್‌ಪೋರ್ಟ್‌ಗೆ ಎಲೆಕ್ಟ್ರಾನಿಕ್ ಆಗಿ ಲಿಂಕ್ ಮಾಡಲಾಗಿರುತ್ತದೆ. ಜೊತೆಗೆ ಭಾರತದ ಪ್ರವಾಸ ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಈ ಪ್ರಕ್ರಿಯೆಯು ಸಾಂಪ್ರದಾಯಿಕ ವೀಸಾಗಳಿಗಿಂತ ಹೆಚ್ಚು ಸರಳ ಮತ್ತು ವೇಗವಾಗಿ ನಡೆಯುತ್ತದೆ. ಇದನ್ನೂ ಓದಿ: ನಾವು ತಟಸ್ಥವಾಗಿಲ್ಲ, ಶಾಂತಿಯ ಪರವಾಗಿದ್ದೇವೆ – ಪುಟಿನ್ ಜೊತೆಗಿನ ಸಂವಾದದಲ್ಲಿ ಮೋದಿ ಮಾತು



