ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಮೊದಲ ಬಾರಿಗೆ ಜೋಡಿ ಕ್ಯಾಪ್ಟನ್‌ಶಿಪ್ ಕೊಡಲಾಗಿದೆ. ಟಾಸ್ಕ್ ಆಡದಿದ್ದರೂ ಸ್ಪಂದನಾ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ಕ್ಯಾಪ್ಟನ್‌ಶಿಪ್‌ಗಾಗಿ ಈ ವಾರ ನಡೆದ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಜೋಡಿಯಾಗಿ ಪಾಲ್ಗೊಂಡಿದ್ದರು. ಇದರಲ್ಲಿ ಅಭಿ-ಸ್ಪಂದನಾ ಜೋಡಿ ಟಾಸ್ಕ್‌ಗಳಲ್ಲಿ ಗೆದ್ದು ಕ್ಯಾಪ್ಟನ್ ಆಗಿದ್ದಾರೆ. ಇದನ್ನೂ ಓದಿ: ಆದಿ ಲಕ್ಷ್ಮಿ ಪುರಾಣ ಧಾರಾವಾಹಿ – ಒಡಹುಟ್ಟಿದವರ ಕಥನ
ಗಿಲ್ಲಿ-ಕಾವ್ಯ, ಅಶ್ವಿನಿ-ರಘು, ರಕ್ಷಿತಾ-ಮಾಳು, ಸೂರಜ್-ರಾಷಿಕಾ, ಅಭಿ-ಸ್ಪಂದನಾ, ರಜತ್-ಚೈತ್ರಾ ಕುಂದಾಪುರ ಜೋಡಿಗಳು ಕಣದಲ್ಲಿದ್ದರು. ಜೋಡಿ ಆಯ್ಕೆಯಲ್ಲಿ ಮಹಿಳಾ ಸ್ಪರ್ಧಿಗಳು ಯಾರು ಕೂಡ ಧ್ರುವಂತ್ ಆಯ್ಕೆ ಮಾಡಿಕೊಳ್ಳಲಿಲ್ಲ. ಆದ್ದರಿಂದ ಕ್ಯಾಪ್ಟನ್ ಧನು ಜೊತೆ ಧ್ರುವಂತ್ ಕೂಡ ಟಾಸ್ಕ್‌ಗಳ ಉಸ್ತುವಾರಿ ವಹಿಸಿಕೊಂಡಿದ್ದರು.
ಜೋಡಿ ಕಂಟೆಸ್ಟೆಂಟ್‌ಗಳಿಗೆ ಹಲವು ಸುತ್ತಿನ ಟಾಸ್ಕ್‌ಗಳನ್ನು ನೀಡಲಾಗಿತ್ತು. ಉತ್ತಮ ಪ್ರದರ್ಶನ ನೀಡಿ ಅಂತಿಮ ಟಾಸ್ಕ್‌ನಲ್ಲಿ ಗೆದ್ದ ಜೋಡಿ ಈ ವಾರದ ಮನೆಯ ಕ್ಯಾಪ್ಟನ್ ಆಗ್ತಾರೆ ಅಂತ ಬಿಗ್ ಬಾಸ್ ಘೋಷಿಸಿದ್ದರು. ಮೊದಲ ಟಾಸ್ಕ್‌ನಲ್ಲಿ ರಕ್ಷಿತಾ-ಮಾಳು ಜೋಡಿ ಉತ್ತಮ ಪ್ರದರ್ಶನ ನೀಡಿತು. ಇವರು ತಮಗೆ ಸಿಕ್ಕ ಅಧಿಕಾರದನ್ವಯ, ರಜತ್-ಚೈತ್ರಾ ಜೋಡಿಯನ್ನು ನಾಮಿನೇಟ್ ಮಾಡಿ ಉಳಿದ ಟಾಸ್ಕ್‌ಗಳನ್ನು ಆಡದಂತೆ ನೋಡಿಕೊಂಡರು.
ಮತ್ತೆ ಎರಡನೇ ಟಾಸ್ಕ್‌ನಲ್ಲಿ ಆಡುವಾಗ ಸ್ಪಂದನಾ ಕಾಲಿಗೆ ಪೆಟ್ಟಾಯಿತು. ಹೆಚ್ಚಿನ ವಿಶ್ರಾಂತಿ ಬೇಕಾಗಿದ್ದರಿಂದ ಒಂಟಿ ಸ್ಪರ್ಧಿಯಾಗಿದ್ದ ಅಭಿಷೇಕ್‌ಗೆ ಸ್ಪಂದನಾ ಬದಲಿ ಜೋಡಿಯಾಗಿ ಚೈತ್ರಾ ಕುಂದಾಪುರ ಬರುತ್ತಾರೆ. ಮತ್ತೊಂದು ಟಾಸ್ಕ್ ಬರುತ್ತದೆ. ಅದರಲ್ಲಿ ಸೂರಜ್ ಯಡವಟ್ಟಿನಿಂದಾಗಿ ಪ್ರಮುಖ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಜೋಡಿ ಕಳೆದುಕೊಳ್ಳುತ್ತದೆ. ರಿಂಗ್ ಹಿಡಿಯುವ ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸುವ ಅಶ್ವಿನಿ-ರಘು ಜೋಡಿ ಚಾಣಾಕ್ಷತನದ ನಿರ್ಧಾರ ಕೈಗೊಳ್ಳುತ್ತದೆ. ಟಾಸ್ಕ್‌ಗಳಲ್ಲಿ ಟಫ್ ಆಗಿದ್ದ ಸೂರಜ್-ರಾಷಿಕಾ ಜೋಡಿಯನ್ನೇ ನಾಮಿನೇಟ್ ಮಾಡಿ ಉಳಿದ ಟಾಸ್ಕ್‌ಗಳನ್ನು ಆಡದಂತೆ ನೋಡಿಕೊಳ್ತಾರೆ. ಇದನ್ನೂ ಓದಿ: ಜಪಾನ್‌ನಲ್ಲಿ `ಬಾಹುಬಲಿ ದಿ ಎಪಿಕ್’ ರಿಲೀಸ್ – ಯಾವಾಗ ಗೊತ್ತಾ..?
ಕೊನೆಯ ಎರಡು ಟಾಸ್ಕ್‌ಗಳಲ್ಲಿ ಅಭಿ-ಚೈತ್ರಾ ಜೋಡಿ ಗೆಲುವು ಸಾಧಿಸಿ ಕ್ಯಾಪ್ಟನ್‌ಶಿಪ್‌ಗೆ ಅರ್ಹತೆ ಪಡೆದುಕೊಳ್ತಾರೆ. ಅಭಿಗೆ ಜೋಡಿಯಾಗಿದ್ದ ಸ್ಪಂದನಾ ಟಾಸ್ಕ್ ಆಡದಿದ್ದರೂ ಕ್ಯಾಪ್ಟನ್ ಆಗ್ತಾರೆ.


