– ದೇಶಾದ್ಯಂತ ವಿವಿಧ ಏರ್‌ಪೋರ್ಟ್‌ಗಳಲ್ಲಿ ಪರಿಸ್ಥಿತಿ ಹೇಗಿದೆ?
ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ (IndiGo) ಉಂಟಾಗಿರುವ ಅಡಚಣೆ ಸತತ 5ನೇ ದಿನಕ್ಕೆ ಕಾಲಿಟ್ಟಿದೆ. ಸಿಬ್ಬಂದಿ ರೋಸ್ಟರಿಂಗ್ ನಿಯಮಗಳು (Flight Duty Time Limitations), ತಾಂತ್ರಿಕ ಸಮಸ್ಯೆ ಹಾಗೂ ಕಾರ್ಯಾಚರಣೆ ದೋಷಗಳಿಂದ ಇಂದು ಕೂಡ ನೂರಾರು ವಿಮಾನಗಳ ರದ್ದುಗೊಳಿಸಲಾಗಿದೆ.
Passenger Advisory issued at 11:10 Hours#DelhiAirport #PassengerAdvisory #DELAdvisory pic.twitter.com/dZBdrW5aob
— Delhi Airport (@DelhiAirport) December 5, 2025
ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ (ಇಂದು) ಮಧ್ಯರಾತ್ರಿ ವರೆಗೆ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ (IndiGo Domestic Flights) ಹಾರಾಟವನ್ನ ಸಂಪೂರ್ಣ ರದ್ದುಗೊಳಿಸಿರುವುದಾಗಿ ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. ಹಠಾತ್ತನೇ ಫ್ಲೈಟ್ ರದ್ದಾದ ವಿಷಯ ತಿಳಿದ ಪ್ರಯಾಣಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಪ್ರಯಾಣಿಕರು ಹಾಗೂ ಏರ್‌ಪೋರ್ಟ್ ಸಿಬ್ಬಂದಿ ನಡುವೆ ವಾಗ್ವಾದ ಉಂಟಾದವೂ ಉಂಟಾಗಿದೆ. ಇದನ್ನೂ ಓದಿ: ಇಂಡಿಗೋಗೆ ಮಾತ್ರ ಯಾಕೆ ಸಮಸ್ಯೆ? ಹೊಸ ನಿಯಮಗಳು ಏನು?
ದೆಹಲಿ ಏರ್‌ಪೋರ್ಟ್‌ನ ಟರ್ಮಿನಲ್‌ಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮಧ್ಯರಾತ್ರಿ 11:59ರ ವರೆಗೆ ಎಲ್ಲಾ ಇಂಡಿಗೋ ದೇಶಿಯ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ (IndiGo Flights Cancels). ಅದಕ್ಕೆ ಮುಂಚಿತವಾಗಿ ಇಲ್ಲಿಂದ ನಿರ್ಗಮಿಸಬೇಕಿರುವ ಪ್ರಯಾಣಿಕರು ಏರ್‌ಪೋರ್ಟ್‌ಗೆ ಬಾರದಂತೆ ಮನವಿ ಮಾಡಿದ್ದಾರೆ.
ಒಂದೇ ದಿನ 700 ವಿಮಾನಗಳ ಹಾರಾಟ ರದ್ದು
ಇಂಡಿಗೋ ಇಂದು ಒಂದೇ ದಿನ ಬೆಂಗಳೂರು, ದೆಹಲಿ, ಹೈದರಾಬಾದ್ ಹಾಗೂ ಇತರ ಏರ್‌ಪೋರ್ಟ್‌ಗಳಿಂದ ಒಟ್ಟು 700 ವಿಮಾನಗಳ ಹಾರಾಟವನ್ನ ರದ್ದುಗೊಳಿಸಿದೆ. ಇದನ್ನೂ ಓದಿ: 1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು – ಫೆಬ್ರವರಿ ವೇಳೆಗೆ ಸಮಸ್ಯೆಗೆ ಪರಿಹಾರ ಎಂದ ಇಂಡಿಗೋ
ಇಂದು ದೇಶಾದ್ಯಂತ ವಿವಿಧ ಏರ್‌ಪೋರ್ಟ್‌ಗಳಲ್ಲಿ ಪರಿಸ್ಥಿತಿ ಹೇಗಿದೆ?
* ಮುಂಬೈ ವಿಮಾನ ನಿಲ್ದಾಣದಲ್ಲಿ 53 ನಿರ್ಗಮನ ಮತ್ತು 51 ಆಗಮನ ವಿಮಾನಗಳು ಸೇರಿದಂತೆ ಒಟ್ಟು 104 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
* ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟು 52 ಆಗಮನ ಮತ್ತು 50 ನಿರ್ಗಮನ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
* ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಒಟ್ಟು 43 ಆಗಮನ ಮತ್ತು 49 ನಿರ್ಗಮನ ವಿಮಾನಗಳನ್ನ ರದ್ದುಗೊಳಿಸಲಾಗಿದೆ.
* ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 8 ಗಂಟೆ ವರೆಗೆ ಪುಣೆ ವಿಮಾನ ನಿಲ್ದಾಣದಲ್ಲಿ ಒಟ್ಟು 16 ಆಗಮನ ಮತ್ತು 16 ನಿರ್ಗಮನ ವಿಮಾನಗಳನ್ನ ರದ್ದುಗೊಳಿಸಲಾಗಿದೆ.
* ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ 3 ಆಗಮನ ಮತ್ತು 3 ನಿರ್ಗಮನ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದ್ದು, 2 ಆಗಮನ ಮತ್ತು 2 ನಿರ್ಗಮನ ವಿಮಾನಗಳ ಹಾರಾಟವನ್ನ ರದ್ದುಗೊಳಿಸಲಾಗಿದೆ.
* ಅಷ್ಟೇ ಅಲ್ಲದೇ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 468ಕ್ಕೂ ಹೆಚ್ಚು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. ಒಟ್ಟು 320 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದ್ರೆ, 92 ವಿಮಾನಗಳ ಹಾರಾಟ ರದ್ದಾಗಿದೆ ಎಂದು ವರದಿಗಳು ತಿಳಿಸಿವೆ.



