ನವದೆಹಲಿ: ಪ್ರಧಾನಿ ಮೋದಿ (PM Narendra Modi) ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಬಿಳಿ ಬಣ್ಣದ ಟೊಯೋಟಾ ಫಾರ್ಚೂನರ್ (Fortuner) ಕಾರಿನಲ್ಲಿ ಜೊತೆಯಾಗಿ ಹೋಗಿದ್ದು ಯಾಕೆ ಎಂಬ ಪ್ರಶ್ನೆಯನ್ನು ಈಗ ನೆಟ್ಟಿಗರು ಕೇಳುತ್ತಿದ್ದಾರೆ.
ಈ ಪ್ರಶ್ನೆಗೆ ಭಾರತ ಸರ್ಕಾರ ಮತ್ತು ರಷ್ಯಾ ಯಾವುದೇ ಅಧಿಕೃತ ಉತ್ತರ ನೀಡದೇ ಇದ್ದರೂ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಪುಟಿನ್ ಯಾವುದೇ ದೇಶಕ್ಕೆ ಹೋದರೂ ಔರಾಸ್ ಸೆನಾಟ್ ಕಾರಿನಲ್ಲೇ ಸಂಚರಿಸುತ್ತಾರೆ. ಅದರಲ್ಲೂ ರಷ್ಯಾ ಉಕ್ರೇನ್ ಯುದ್ಧ ಆರಂಭವಾದ ಬಳಿಕ ಪುಟಿನ್ ಅವರ ವಿದೇಶ ಪ್ರಯಾಣ ಕಡಿಮೆಯಾಗಿದೆ ಮತ್ತು ಭಾರೀ ಭದ್ರತೆಯನ್ನು ನೀಡಲಾಗುತ್ತಿದೆ. ಪುಟಿನ್ ಭಾರತಕ್ಕೆ ಬರುವ ಮೊದಲೇ ಔರಾಸ್ ಸೆನಾಟ್ ದೆಹಲಿಗೆ ಲ್ಯಾಂಡ್ ಆಗಿತ್ತು. ಪುಟಿನ್ ಬಂದಾಗ ವಿಮಾನ ನಿಲ್ದಾಣಕ್ಕೂ ಈ ಔರಾಸ್ ಕಾರು ಬಂದಿತ್ತು.
ಮೋದಿ ಅವರು ಪುಟಿನ್ ಅವರನ್ನು ಸ್ವಾಗತ ಮಾಡಲು ತಮ್ಮ ಎಂದಿನ ರೇಂಜ್ ರೋವರ್ ಕಾರಿನಲ್ಲಿ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಹೀಗಿದ್ದರೂ ರೇಂಜ್ ರೋವರ್ ಕಾರಿನಲ್ಲಿ ಪ್ರಯಾಣಿಸದೇ ಫಾರ್ಚೂನರ್ ಕಾರಿನಲ್ಲಿ ಜೊತೆಯಾಗಿ ಪ್ರಯಾಣಿಸುವ ಮೂಲಕ ಇಬ್ಬರು ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಭಾರತವನ್ನು ಬೆಂಬಲಿಸಿ ಟ್ರಂಪ್ ಬೂಟಾಟಿಕೆಯನ್ನು ಬಯಲು ಮಾಡಿದ ಪುಟಿನ್
ಯಾಕೆ ಫಾರ್ಚೂನರ್?
ಸಾಧಾರಣವಾಗಿ ಭಾರತದಲ್ಲಿ ವಿದೇಶ ಅಧ್ಯಕ್ಷರಿಗೆ ರೇಂಜ್ ರೋವರ್ ಮತ್ತು ಮರ್ಸಿಡೀಸ್ ಕಂಪನಿಯ ಕಾರನ್ನು ನೀಡಲಾಗುತ್ತದೆ. ರೇಂಜ್ ರೋವರ್ ಮಾಲೀಕತ್ವ ಈಗ ಟಾಟಾ ಮೋಟಾರ್ಸ್ ಹೊಂದಿದ್ದರೂ ಮೂಲತ: ಯುಕೆ ಕಂಪನಿಯಾಗಿದೆ. ಮರ್ಸಿಡೀಸ್ ಜರ್ಮನಿ ಮೂಲದ ಅಟೋಮೊಬೈಲ್ ಕಂಪನಿಯಾಗಿದೆ. ಇದನ್ನೂ ಓದಿ: ಟ್ರಂಪ್ ತಂಗಿದ್ದ ಹೋಟೆಲಿನಲ್ಲಿ ಪುಟಿನ್ ವಾಸ್ತವ್ಯ – ಈ ಸೂಟ್ ವಿಶೇಷತೆ ಏನು? 1 ರಾತ್ರಿಗೆ ದರ ಎಷ್ಟು?
ಟೊಯೋಟಾ ಫಾರ್ಚೂನರ್ ಸಿಗ್ಮಾ 4 MT ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದೆ. BS-VI ಎಂಜಿನ್ ಹೊಂದಿದ್ದು ಏಪ್ರಿಲ್ 2024 ರಲ್ಲಿ ನೋಂದಾಯಿಸಲಾಗಿದೆ. ಫಾರ್ಚೂನರ್‌ನ ಫಿಟ್‌ನೆಸ್ ಪ್ರಮಾಣಪತ್ರವು ಏಪ್ರಿಲ್ 2039 ರವರೆಗೆ ಮಾನ್ಯವಾಗಿರುತ್ತದೆ . ಇದನ್ನೂ ಓದಿ: ಒಂದೇ ಕಾರಿನಲ್ಲಿ ಪುಟಿನ್-ಮೋದಿ | ಪುಟಿನ್‌ನ ʻಔರಸ್ ಸೆನಾಟ್ ಲಿಮೋಸಿನ್ʼ Vs ಟ್ರಂಪ್‌ನ ʻಬೀಸ್ಟ್ʼ, ಯಾವುದು ಎಷ್ಟು ಬಲಿಷ್ಠ?
ಪ್ರಧಾನ ಮಂತ್ರಿಯವರ ನಿಯಮಿತವಾಗಿ ಸಂಚರಿಸುವ ಕಾರಿನಲ್ಲಿ ಫಾರ್ಚೂನರ್ ಇರುವುದಿಲ್ಲ. ಪುಟಿನ್ ಅವರ ಔರಾಸ್ ಲಿಮೋಸಿನ್ ಶಸ್ತ್ರಸಜ್ಜಿತ ಕಾರ್ ಆಗಿದ್ದು ಬೇರೆ ಕಾರಿನಲ್ಲಿ ಸಂಚರಿಸುವುದಿಲ್ಲ. ಈ ಹಿಂದೆ ಪುಟಿನ್ ಕಾರನ್ನು ಸ್ಫೋಟ ಮಾಡುವ ಮೂಲಕ ರಷ್ಯಾದಲ್ಲೇ ಹತ್ಯೆಗೆ ಸಂಚು ರೂಪಿಸಿದ್ದ ಸುದ್ದಿಗಳು ಪ್ರಕಟವಗಿದ್ದವು. ಹೀಗಿದ್ದರೂ ಇಬ್ಬರು ನಾಯಕರು ಭಾರೀ ಭದ್ರತಾ ಸುರಕ್ಷತೆ ಇರುವ ಕಾರನ್ನು ಬಿಟ್ಟು ಫಾರ್ಚುನರ್ ಕಾರಿನಲ್ಲಿ ಸಂಚರಿಸಿ ವಿಶ್ವಕ್ಕೆ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ಮಾಸ್ಕೋ ನಡು ಬೀದಿಯಲ್ಲಿ ಪುಟಿನ್ ಕಾರು ಸ್ಫೋಟ – ಹತ್ಯೆಗೆ ಯತ್ನ?
ಪುಟಿನ್ ವಿಮಾನದಿಂದ ಇಳಿದ ಕೂಡಲೇ ಅವರಿಗೆ ನೃತ್ಯ ಸ್ವಾಗತ ನೀಡಲಾಯಿತು. ನೃತ್ಯ ಸ್ವಾಗತ ನಡೆಯುತ್ತಿದ್ದಾಗ ಬಿಳಿ ಬಣ್ಣದ ಫಾರ್ಚೂನರ್ ಇಬ್ಬರ ಬಳಿ ಬಂದು ನಿಂತುಕೊಂಡಿತು. ನಂತರ ಪುಟಿನ್ ಅವರನ್ನು ಮೋದಿ ಕಾರಿನ ಬಳಿ ಕರೆದುಕೊಂಡು ಹೋಗಿ ಕುಳಿತುಕೊಳ್ಳುವಂತೆ ಹೇಳಿದರು. ಮೋದಿ ಕುಳಿತುಕೊಂಡ ಬಳಿಕ ಕಾರು ನೇರವಾಗಿ ಪ್ರಧಾನಿ ನಿವಾಸಕ್ಕೆ ತೆರಳಿತು. ಅಲ್ಲಿ ಖಾಸಗಿ ಡಿನ್ನರ್‌ನಲ್ಲಿ ಪುಟಿನ್ ಭಾಗಿಯಾದ ಬಳಿಕ ಐಟಿಸಿ ಮೌರ್ಯ ಹೋಟೆಲಿಗೆ ತೆರಳಿದರು.


