ಬೆಂಗಳೂರು: ತಮ್ಮ ಕೈಯಲ್ಲಿ ಇದ್ದ 24 ಲಕ್ಷದ ಕಾರ್ಟಿಯರ್ ವಾಚನ್ನ ಬಿಚ್ಚಿ ಸಚಿವ ಹೆಚ್.ಕೆ.ಪಾಟೀಲ್ ಕೈಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೊಟ್ಟ ಘಟನೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು.
ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಾರ್ಯಕ್ರಮ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯುತ್ತಿತ್ತು, ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಡಿಕೆಶಿ ಕೈಯಲ್ಲಿ ಇದ್ದ ವಾಚ್ ಬಗ್ಗೆ ಸಚಿವ ಹೆಚ್.ಕೆ.ಪಾಟೀಲ್ ಚರ್ಚೆ ನಡೆಸಿದರು. ಡಿಸಿಎಂ ಡಿಕೆಶಿ ಕೈಯಲ್ಲಿ ಇದ್ದ ಕಾರ್ಟಿಯರ್ ವಾಚ್ ಬಗ್ಗೆ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ಪಡೆದರು. ತಮ್ಮ ಕೈಯಲ್ಲಿ ಇದ್ದ ವಾಚಿನ ಬಗ್ಗೆಯೂ ಮಾತನಾಡಿದ ಹೆಚ್.ಕೆ.ಪಾಟೀಲ್ ಒಂದಷ್ಟು ಮಾಹಿತಿ ನೀಡಿದರು.

3-4 ನಿಮಿಷಗಳ ಕಾಲ ವಾಚಿನ ಬಗ್ಗೆ ಉಭಯ ನಾಯಕರ ಚರ್ಚಿಸಿದರು. ಆಗ ತಮ್ಮ ಕಾರ್ಟಿಯರ್ ವಾಚ್ ಬಿಚ್ಚಿ ಡಿಕೆಶಿ ಅವರು ಹೆಚ್.ಕೆ.ಪಾಟೀಲ್ ಕೈಗೆ ಕೊಟ್ಟರು. ವಾಚನ್ನ ನೋಡಿ ಸಚಿವ ಹೆಚ್.ಕೆ.ಪಾಟೀಲ್ ವಾಪಸ್ ಕೊಟ್ಟರು.
ಸಿಎಂ ಡಿಸಿಎಂ ಒಂದೇ ರೀತಿಯ ದುಬಾರಿ ವಾಚು ಕಟ್ಟುತ್ತಾರೆ ಎಂಬ ಆರೋಪವನ್ನು ವಿಪಕ್ಷಗಳು ಮಾಡಿದ್ದವು. ಸಿಎಂ-ಡಿಸಿಎಂ ವಾಚ್ ವಿವಾದದ ಬೆನ್ನಲ್ಲೇ ಡಿಸಿಎಂ ಡಿಕೆಶಿ ಕೈಯಲ್ಲಿ ಇದ್ದ ಕಾರ್ಟಿಯರ್ ವಾಚನ್ನ ಸಚಿವ ಹೆಚ್.ಕೆ.ಪಾಟೀಲ್ ಪರಿಶೀಲಿಸಿ ಕುತೂಹಲದಿಂದ ನೋಡಿದ ಘಟನೆ ನಡೆಯಿತು.

