ಟಾಲಿವುಡ್‌ನ ನಟ ನಾಗ ಚೈತನ್ಯ (Naga Chaitanya), ಸಮಂತಾರಿಂದ ವಿಚ್ಛೇದನ ಪಡೆದ ಬಳಿಕ ಶೋಭಿತಾ ಧುಲಿಪಲಾ (Sobhita Dhulipala) ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. 2024ರ ಡಿಸೆಂಬರ್ 04 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಹಸೆಮಣೆ ಏರಿ ಇಂದಿಗೆ (ಡಿ.04) ಒಂದು ವರ್ಷವಾಗಿದೆ. ಈ ಹಿನ್ನೆಲೆ ಮದುವೆಯ ವಿಡಿಯೋವನ್ನ ಜಾಲತಾಣದಲ್ಲಿ ಹಂಚಿಕೊಂಡು ವಿಶೆಷವಾಗಿ ಶುಭ ಹಾರೈಸಿದ್ದಾರೆ ಶೋಭಿತಾ.
View this post on Instagram
ನಾಗಚೈತನ್ಯ ಹಾಗೂ ಶೋಭಿತಾ ಮದ್ವೆಯಾಗಿ ಒಂದುವರ್ಷ (Wedding Anniversary) ತುಂಬುವಷ್ಟರಲ್ಲೇ ನಾಗಚೈತನ್ಯ ಮಾಜಿ ಪತ್ನಿ ಸಮಂತಾ ರುತ್‌ಪ್ರಭು ಎರಡನೇ ಮದ್ವೆಯಾಗಿದ್ದಾರೆ. ಒಂಟಿಯಾಗಿದ್ದ ಬಾಳಿಗೆ ನಿರ್ದೇಶಕ ರಾಜ್ ನಿಡಿಮೋರು ಜಂಟಿಯಾಗಿದ್ದಾರೆ. ಫ್ಯಾಮಿಲಿಮ್ಯಾನ್, ಸಿಟಡೆಲ್ ಹನಿಬನಿ ಸಿನಿಮಾದ ನಿರ್ದೇಶಕ ರಾಜ್ ಜೊತೆ ಸಪ್ತಪದಿ ತುಳಿದಿದ್ದಾರೆ ಸಮಂತಾ. ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ಗಂಟೆಗಟ್ಟಲೆ ನಿದ್ರೆ ಮಾಡ್ತಾರೆ ರಕ್ಷಿತಾ – ಬಿಗ್ ಬಾಸ್ ಎಚ್ಚರಿಸಿದ್ದು ಹೇಗೆ?
ವೈವಾಹಿಕ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಮದ್ವೆಯ ವಿಡಿಯೋ ಹಂಚಿಕೊಂಡ ಶೋಭಿತಾಗೆ ಜಾಲತಾಣದಲ್ಲಿ ವಿವಿಧ ರೀತಿಯ ಕಾಮೆಂಟ್ಸ್ ಬರುತ್ತಿವೆ. ಇನ್ನು ನಾಗಚೈತನ್ಯ ಈ ವಿಡಿಯೋಗೆ ಕಾಮೆಂಟ್ ಹಾಕಿದ್ದಾರೆ. ನಿನ್ನ ಜೀವನದ ಭಾಗ ಆಗೋದಕ್ಕೆ ನಾನು ಅದೃಷ್ಟ ಮಾಡಿದ್ದೆ ಎಂದು ಶೋಭಿತಾ ವಿಡಿಯೋಗೆ ನಾಗಚೈತನ್ಯ ಕಮೆಂಟ್ ಹಾಕಿದ್ದಾರೆ. ಈ ಕಾಮೆಂಟ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ. ಇದನ್ನೂ ಓದಿ: ಶಾರುಖ್ ಪುತ್ರನ ಜೊತೆ ಧನ್ಯಾ ರಾಮ್‌ಕುಮಾರ್; ಬಾಲಿವುಡ್ ಪ್ಲ್ಯಾನ್‌ನಲ್ಲಿದ್ದಾರಾ?


