– ದರ್ಶನ್ ಮನೆಯಲ್ಲಿ ಜಪ್ತಿ ಮಾಡಿದ್ದ ಹಣ
– ಜೈಲಲ್ಲಿ ದರ್ಶನ್ & ಗ್ಯಾಂಗ್‌ಗೆ ಟಿವಿ ಭಾಗ್ಯ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ (Renukaswamy Murder Case) ವಿಚಾರಣೆ ಇವತ್ತಿನಿಂದ ಸೆಷನ್ಸ್ ಕೋರ್ಟ್‌ನಲ್ಲಿ ಆರಂಭವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ (Darshan), ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ಹಾಜರಾಗಿದ್ದರು.
ಎ-1 ದೂರುದಾರ ವಾಚ್‌ಮ್ಯಾನ್, ಎ-7 ರೇಣುಕಾಸ್ವಾಮಿ ತಂದೆ, ಎ-8 ರೇಣುಕಾಸ್ವಾಮಿ ಪ್ರಾಸಿಕ್ಯೂಷನ್‌ಗೆ ಆರೋಪಿಗಳ ಪರ ವಕೀಲರು ಆಕ್ಷೇಪಿಸಿದ್ರು. ಪಿಕ್ ಅಂಡ್ ಚೂಸ್ ಮಾಡಿ ಸಮನ್ಸ್ ಮಾಡುವುದು ಸರಿಯಲ್ಲ. ಆರ್ಡರ್ ವೈಸ್ ಸಮನ್ಸ್ ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ | ಜಾಮಿಯಾ ಮಸೀದಿ ಹಿಂದೂಗಳದ್ದು, ಹನುಮ ಮಂದಿರ ಮತ್ತೆ ಕಟ್ಟುವೆವು – ಮಾಲಾಧಾರಿಗಳ ಬಿಗಿಪಟ್ಟು
ಆರೋಪಿಗಳ ಪರ ವಕೀಲರು ಹೀಗೆ ಮಾಡಬೇಕು ಅಂತ ಹೇಳಲು ಸಾಧ್ಯವಿಲ್ಲ ಅಂತ ಎಎಸ್‌ಪಿ ವಾದಿಸಿದರು. ಆದರೆ, ಯಾರಿಗೆ ಸಮನ್ಸ್ ಜಾರಿ ಮಾಡಬೇಕು ಎಂಬ ಬಗ್ಗೆ ನಾಳೆ ಆದೇಶ ಮಾಡೋದಾಗಿ ಕೋರ್ಟ್ ಹೇಳಿದೆ. ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ಇಡ್ಲಿ, ನಾಟಿ ಕೋಳಿ ಸಾರು – ಡಿನ್ನರ್‌ಗೆ ಬೆಳ್ಳುಳ್ಳಿ ಕಬಾಬ್ ಇರುತ್ತೇನೋ: ನಿಖಿಲ್ ಲೇವಡಿ
ಈ ಮಧ್ಯೆ, ಜೈಲಿನಲ್ಲಿ ಎಲ್ಲರೂ ಒಂದೇ ಬ್ಯಾರಕ್‌ನಲ್ಲಿದ್ದೀವೆ. ಮೈಂಡ್ ಅಪ್‌ಸೆಟ್ ಆಗ್ತಿದೆ. ಹಾಗಾಗಿ, ಟಿವಿ ಬೇಕು ಅಂತ ದರ್ಶನ್ & ಗ್ಯಾಂಗ್ ಜಡ್ಜ್ ಮುಂದೆ ಮನವಿ ಇಟ್ಟಿದೆ. ಜೈಲರ್‌ಗೆ ಹೇಳೋದಾಗಿ ಜಡ್ಜ್ ಹೇಳಿದ್ದಾರೆ. ಈ ಮಧ್ಯೆ, ದರ್ಶನ್ ಮನೆಯಲ್ಲಿ ಸೀಜ್ ಮಾಡಲಾಗಿರುವ 82 ಲಕ್ಷ ರೂಪಾಯಿಯನ್ನು ಇಡಿ ಸುಪರ್ದಿಗೆ ವಹಿಸಲಾಗಿದೆ.


