ಬೆಂಗಳೂರು: ಯೆಲ್ಲೋ ಮಾರ್ಗದ ಮೆಟ್ರೋ (Namma Metro) ಪ್ರಯಾಣಿಕರಿಗೆ ಹೊಸ ವರ್ಷದ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರಿಗೆ 6ನೇ ಚಾಲಕ ರಹಿತ ರೈಲು ಬಂದಿದೆ.
ಇಂದು ಸಂಜೆ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಟ್ರೇನ್ ಸೆಟ್ ತಲುಪಿದೆ. ಕಳೆದ ನವೆಂಬರ್ 18 ರಂದು ಕೋಲ್ಕತ್ತಾದ ಟಿಟಾಗರ್‌ನಿಂದ ರೈಲು ಸೆಟ್ ಹೊರಟಿತ್ತು. ಡಿಸೆಂಬರ್ ಅಂತ್ಯಕ್ಕೆ ಹೊಸ ರೈಲು ವಾಣಿಜ್ಯ ಸೇವೆಯನ್ನು ಆರಂಭಿಸಲಿದೆ.
ಸದ್ಯ 15-17 ನಿಮಿಷಕ್ಕೊಂದು ರೈಲು ಸಂಚಾರ ಮಾಡುತ್ತಿವೆ. ಹೊಸ ರೈಲು ಓಡಾಟ ಆರಂಭವಾದರೆ, ರೈಲುಗಳ ನಡುವಿನ ಓಡಾಟದ ಸಮಯವು 12 ನಿಮಿಷಕ್ಕೆ ತಗ್ಗಲಿದೆ.

