ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress Highcommand) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಲ್ಲ, ವೇಣುಗೋಪಾಲ್ (KC Venugopal) ಕಾಂಗ್ರೆಸ್ ಹೈಕಮಾಂಡ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ ಮತ್ತು ವೇಣುಗೋಪಾಲ್ ಭೇಟಿ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಷ್ಟು ದಿನ ರಾಜ್ಯದ ಗೊಂದಲಕ್ಕೆ ಎಐಸಿಸಿ ಅಧ್ಯಕ್ಷರು ಎಲ್ಲರನ್ನು ಕರೆದು ಮಾತುಕತೆ ಮಾಡಿ ನನ್ನಿಂದ ಏನು ಆಗಲ್ಲ ಅಂತ ದೆಹಲಿ ಹೋಗಿದ್ದರು. ನನ್ಮ ಕೈಯಲ್ಲಿ ಏನು ಇಲ್ಲ, ಹೈಕಮಾಂಡ್ ಗಮನಕ್ಕೆ ತರುತ್ತೇನೆ ಅಂತ ಹೇಳಿ ಹೋದ್ರು. ಯಾಕೆ ಮಲ್ಲಿಕಾರ್ಜುನ ಖರ್ಗೆ ಹೀಗೆ ಮಾತಾಡಿದ್ರು ಅಂತ ರಾಜ್ಯದ ಜನರಿಗೆ ಗೊಂದಲ ಆಗಿತ್ತು. ಈಗ ಆ ಗೊಂದಲ ಏನು ಅಂತ ಕ್ಲಿಯರ್ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಯಾರು ಅಂದರೆ ವೇಣುಗೋಪಾಲ್ ಅಂತ ಗೊತ್ತಾಯ್ತು. ಎಐಸಿಸಿ ಅಧ್ಯಕ್ಷರಿಗಿಂತ ವೇಣುಗೋಪಾಲ್ ದೊಡ್ಡವರು ಅಂತ ಗೊತ್ತಾಯ್ತು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಹೊಸ ಧಾರಾವಾಹಿ: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಜೈ ಲಲಿತಾ
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೂ ವೇಣುಗೋಪಾಲ್ ಹೈಕಮಾಂಡ್ ಆಗಿದ್ದಾರೆ. ಇದು ಕಾಂಗ್ರೆಸ್ ಪರಿಸ್ಥಿತಿ ಎಲ್ಲಿಗೆ ಬಂದಿದೆ ಗೊತ್ತಾಯ್ತು. ಯಾವುದೋ ಒಬ್ಬ ವ್ಯಕ್ತಿ ಕೈಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ, ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟ ಬಿಟ್ಟು ರೈತರ ಸಮಸ್ಯೆ ಆಲಿಸಲಿ: ರೇಣುಕಾಚಾರ್ಯ
ಈ ದೇಶ ನಡೆಸೋ ಕಾಂಗ್ರೆಸ್ ಕೈಯಲ್ಲಿ ಇವತ್ತು ಬಂಡವಾಳ ಇಲ್ಲ. ಬಂಡವಾಳಕ್ಕೆ ಇರೋ ಒಂದೇ ಒಂದು ರಾಜ್ಯ ಕರ್ನಾಟಕ. ವೇಣುಗೋಪಾಲ್ ಅಲ್ಲಿ ಕುಳಿತು ಕಾಂಗ್ರೆಸ್‌ನಲ್ಲಿ ಇರೋ 2-3 ಗುಂಪುಗಳನ್ನ ಕರೆಯುತ್ತಿದ್ದಾರೆ. ಯಾವ ಗುಂಪು ಎಷ್ಟು ಬಾಳಿಕೆ ಬರುತ್ತೆ ಅಂತ ವೇಣುಗೋಪಾಲ್ ನೋಡುತ್ತಿದ್ದಾರೆ. ಕಾಂಗ್ರೆಸ್‌ಗೆ ಮೊದಲು ಎಟಿಎಂ ಲೀಡರ್ ಬೇರೆ ಇದ್ದರು. ಆ ಜನರಲ್ ಸೆಕ್ರೆಟರಿ ಬೇರೆ. ಹೈಕಮಾಂಡ್ ಜನರಲ್ ಸೆಕ್ರೆಟರಿ ವೇಣುಗೋಪಾಲ್. ಇವರು ಯರ‍್ಯಾರು ಎಷ್ಟಕ್ಕೆ ಬಾಳುತ್ತೀರಾ. ನೀವು ಎಷ್ಟಕ್ಕೆ ಬಾಳುತ್ತೀರಾ ಅಂತ ಇಬ್ಬರನ್ನು ತೂಕ ಮಾಡೋ ಸ್ಥಿತಿಗೆ ಬಂದಿದೆ. ರಾಜ್ಯದ ಹಿತ ಮರೆತು ಅಧಿಕಾರ ಉಳಿಯೋಕೆ, ಛೇರ್ ಉಳಿಸಿಕೊಳ್ಳಬೇಕು ಅಂತ ಸಿಎಂ-ಡಿಸಿಎಂ ಪೈಪೋಟಿಗೆ ಬಿದ್ದು ರಾಜ್ಯದ ಸ್ಥಿತಿ ಗಂಭೀರ ಮಾಡಿದ್ದಾರೆ ಎಂದು ಸಿಎಂ, ಡಿಸಿಎಂ, ಹೈಕಮಾಂಡ್ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಶ್ರೀರಂಗಪಟ್ಟಣ | ಜಾಮಿಯಾ ಮಸೀದಿ ಹಿಂದೂಗಳದ್ದು, ಹನುಮ ಮಂದಿರ ಮತ್ತೆ ಕಟ್ಟುವೆವು – ಮಾಲಾಧಾರಿಗಳ ಬಿಗಿಪಟ್ಟು
ರಾಜ್ಯದಲ್ಲಿ ಅನೇಕ ಸಮಸ್ಯೆ ಇದೆ. ರೈತರ ಬಗ್ಗೆ ದಲಿತರ ಬಗ್ಗೆ ಕೇಳೋರು ಇಲ್ಲ. ದಲಿತರ ಯೋಗ ಕ್ಷೇಮ ಈ ಸರ್ಕಾರ ನೋಡಿಲ್ಲ. ಕಾಂಗ್ರೆಸ್‌ನಲ್ಲಿರೋ ದಲಿತ ಲೀಡರ್‌ಗಳಿಗೂ ಕಾಂಗ್ರೆಸ್ ಉಳಿಯೋದು ಮುಖ್ಯ. ದಲಿತ ಸಮುದಾಯ ಉಳಿಯೋದು ಮುಖ್ಯ ಅಲ್ಲ. ಅಧಿವೇಶನ 8 ರಿಂದ ಪ್ರಾರಂಭ ಆಗುತ್ತಿದೆ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡೋಕೆ ಅಧಿವೇಶನ ಮಾಡುತ್ತೇವೆ. ಆದರೆ ಈಗಾಗಲೇ 31 ಬಿಲ್‌ಗಳು ಇವೆ. ಈಗ ಮತ್ತೆ 22 ಹೊಸ ಬಿಲ್‌ಗಳು ಇವೆ ಅಂತ ಹೇಳುತ್ತಿದ್ದಾರೆ. ಇದು ಬಿಲ್ ಪಾಸ್ ಅಧಿವೇಶನನಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಶಿವನಸಮುದ್ರ ನಾಲೆಯಿಂದ ಆನೆ ರಕ್ಷಿಸಿದ ಸಿಬ್ಬಂದಿ ಸನ್ಮಾನಿಸಿದ ಸಚಿವ ಈಶ್ವರ ಖಂಡ್ರೆ
ಸದನ ನಡೆಯೋದೆ 8-9 ದಿನ. ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಇಲ್ಲ. ರಾಜು ಕಾಗೆ ಪ್ರತ್ಯೇಕ ರಾಜ್ಯ ಬೇಕು ಅಂತ ಕೇಳುತ್ತಿದ್ದಾರೆ. ನಿಮ್ಮದೇ ಶಾಸಕರು. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು. ಕಾಂಗ್ರೆಸ್ ದೇಶ, ರಾಜ್ಯ ಒಡೆಯೋದ್ರಲ್ಲಿ ನಿಪುಣರು. ಯುಪಿ, ಛತ್ತೀಸ್‌ಗಢ, ಆಂಧ್ರ ಪ್ರದೇಶ ಒಡೆದರು. ಈಗ ಕರ್ನಾಟಕ ಒಡೆಯೋಕೆ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಈ ಬಿಲ್ ಪಾಸ್ ಮಾಡೋಕೆ ವಿಶೇಷ ಅಧಿವೇಶನ ಕರೆಯಿರಿ. ಆದರೆ ಬೆಂಗಳೂರಿಗೆ ಸಂಬಂಧಿಸಿದ ಬಿಲ್ ಬೆಳಗಾವಿಯಲ್ಲಿ ಮಾಡೋದು ಸರಿಯಲ್ಲ ಎಂದರು. ಇದನ್ನೂ ಓದಿ: ‘ಸಂಚಾರ್ ಸಾಥಿ’ ಆ್ಯಪ್ ಪ್ರಿ-ಇನ್ಸ್ಟಾಲ್ ಕಡ್ಡಾಯವಲ್ಲ: ಕೇಂದ್ರ ಸ್ಪಷ್ಟನೆ
ಸಚಿವ ಹೆಚ್‌ಕೆ ಪಾಟೀಲ್‌ರನ್ನ ಏನೋ ಅಂದುಕೊಂಡಿದ್ದೆ. ಉತ್ತರ ಕರ್ನಾಟಕ ಭಾಗದ ನಾಯಕರಾಗಿ ಅವರು ಆ ಭಾಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕ ಹೀಗೆ ತಾರತಮ್ಯ ಆಗೋಕೆ ಉತ್ತರ ಕರ್ನಾಟಕದ ನಾಯಕರೇ ಕಾರಣ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಯಾಕೆ ಹಿಂದುಳಿದಿದೆ? ಅಲ್ಲಿಯವರೇ ಸಿಎಂ ಆಗಿದ್ದರು ಯಾಕೆ ಅಭಿವೃದ್ಧಿ ಆಗಿಲ್ಲ? ತಾರತಮ್ಯ ಮಾಡೋರಿಗೆ ತಕ್ಕ ಪಾಠ ಕಲಿಸೋ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಇಡ್ಲಿ, ನಾಟಿಕೋಳಿ ತಿಂದಮೇಲೆ ಎಲ್ಲವೂ ಮುಗಿದಿದೆ, ಇನ್ನು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ: ಇಕ್ಬಾಲ್ ಹುಸೇನ್



