ನವದೆಹಲಿ: ವಿರೋಧ ಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕೇಂದ್ರ ಸರ್ಕಾರದಿಂದ ‘ಸಂಚಾರ್ ಸಾಥಿ’ ಆ್ಯಪ್ (Sanchar Saathi) ಪೂರ್ವ-ಸ್ಥಾಪನೆ (Pre-Install) ಕಡ್ಡಾಯವಲ್ಲ ಎಂದು ದೂರ ಸಂಪರ್ಕ ಇಲಾಖೆ (DoT) ಹೇಳಿದೆ.
ಈ ಹಿಂದೆ ಕೇಂದ್ರ ಸರ್ಕಾರ ಮೊಬೈಲ್‌ಗಳಲ್ಲಿ ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್ಸ್ಟಾಲ್ ಮಾಡಲು ಸ್ಮಾರ್ಟ್ಫೋನ್ ಕಂಪನಿಗಳಿಗೆ ಆದೇಶಿಸಿತ್ತು. ಇದು ಜನರ ಮೇಲೆ ನಿರಂತರ ನಿಗಾ ವಹಿಸಲಿದೆ, ಸರ್ಕಾರ ಜನರ ಮೇಲೆ ಗೂಢಚಾರಿಕೆ ಮಾಡುತ್ತಿದೆ ಎಂದು ವಿಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕಡ್ಡಾಯ ರದ್ದುಗೊಳಿಸಿ ಸರ್ಕಾರ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಇಡ್ಲಿ, ನಾಟಿಕೋಳಿ ತಿಂದಮೇಲೆ ಎಲ್ಲವೂ ಮುಗಿದಿದೆ, ಇನ್ನು ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ: ಇಕ್ಬಾಲ್ ಹುಸೇನ್
ಎಲ್ಲಾ ನಾಗರಿಕರಿಗೆ ಸೈಬರ್ ಭದ್ರತೆಗೆ ಪ್ರವೇಶವನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ಎಲ್ಲಾ ಸ್ಮಾರ್ಟ್ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್‌ನ ಪೂರ್ವ-ಸ್ಥಾಪನೆಯನ್ನು ಕಡ್ಡಾಯಗೊಳಿಸಿತ್ತು. ಈ ಆ್ಯಪ್ ಸುರಕ್ಷಿತವಾಗಿದೆ ಮತ್ತು ಸೈಬರ್ ಜಗತ್ತಿನ ದುಷ್ಟ ಶಕ್ತಿಗಳಿಂದ ನಾಗರಿಕರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಸಂಚಾರ್ ಸಾಥಿಯ ಹೆಚ್ಚುತ್ತಿರುವ ಸ್ವೀಕಾರವನ್ನು ಗಮನದಲ್ಲಿಟ್ಟುಕೊಂಡು, ಮೊಬೈಲ್ ತಯಾರಕರಿಗೆ ಪೂರ್ವ-ಸ್ಥಾಪನೆಯನ್ನು ಕಡ್ಡಾಯಗೊಳಿಸದಿರಲು ಸರ್ಕಾರ ನಿರ್ಧರಿಸಿದೆ ಎಂದು ದೂರ ಸಂಪರ್ಕ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್‌ಗೆ ಇಡ್ಲಿ, ನಾಟಿ ಕೋಳಿ ಸಾರು – ಡಿನ್ನರ್‌ಗೆ ಬೆಳ್ಳುಳ್ಳಿ ಕಬಾಬ್ ಇರುತ್ತೇನೋ: ನಿಖಿಲ್ ಲೇವಡಿ

