ರಾಮನಗರ: ನಮ್ಮಲ್ಲಿ ಸದ್ಯ ಯಾವುದೇ ಗೊಂದಲ ಇಲ್ಲ. ವೆಜ್ ಆಯ್ತು, ನಾನ್ ವೆಜ್ ಕೂಡಾ ಆಯ್ತು. ಎಲ್ಲರೂ ಸಮಾಧಾನವಾಗಿ ಇದ್ದಾರೆ ಅನ್ನೋದು ಅರ್ಥ ಆಯಿತು ಎಂದು ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಹೇಳಿದ್ದಾರೆ.
ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ (Breakfast Meeting) ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಏನೇ ತೀರ್ಮಾನ ಇದ್ದರೂ ಅದನ್ನ ನಾವೇ ಮಾಡುತ್ತೇವೆ ಎಂದಿದೆ. ಇದರಲ್ಲಿ ಇನ್ನೂ ಯಾವುದೇ ಗೊಂದಲ ಉಳಿದಿಲ್ಲ. ಇಡ್ಲಿ, ನಾಟಿಕೋಳಿ ಎಲ್ಲರೂ ಸಮಾನರು ಎಂದು ಅರ್ಥ ಮಾಡಿಸಿದೆ ಎಂದರು. ಇದನ್ನೂ ಓದಿ: ಸ್ಲೋವಾಕಿಯಾದಲ್ಲಿರುವ ಕರ್ನಾಟಕದ ಉದ್ಯೋಗಿಗಳೊಂದಿಗೆ ಡಾ. ಶರಣಪ್ರಕಾಶ್ ಪಾಟೀಲ್ ಸಂವಾದ
ಇನ್ನೂ ಅಧಿಕಾರ ಶಾಶ್ವತ ಅಲ್ಲ ಎಂಬ ಸಿಎಂ (Siddaramaiah) ವೈರಾಗ್ಯ ಮಾತುಕತೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದರಲ್ಲಿ ಯಾವುದೇ ವೈರಾಗ್ಯ ಇಲ್ಲ, ಇದು ಸಹಜ ಅಲ್ವಾ? ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನನಗೂ ಅಧಿಕಾರ ಶಾಶ್ವತ ಅಲ್ಲ. ಹಿಂದೆ ಇದ್ದ ಕುಮಾರಸ್ವಾಮಿಗೆ ಅಧಿಕಾರ ಶಾಶ್ವತ ಇತ್ತಾ? ಕೇವಲ ಅಧಿಕಾರ ಮಾತ್ರವಲ್ಲ, ಪ್ರಪಂಚವೇ ಯಾರಿಗೂ ಶಾಶ್ವತ ಅಲ್ಲ. ಎಲ್ಲದಕ್ಕೂ ಒಂದು ಕೊನೆ ಅಂತ ಇರುತ್ತೆ. ನಮ್ಮ ಮುಖ್ಯಮಂತ್ರಿಗಳು ಅರ್ಥಬದ್ಧವಾದ ಮಾತು ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಧಾರವಾಡ | 3 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನ ಸ್ಮಶಾನಕ್ಕೆ ದಾನ ಕೊಟ್ಟ ಮಾಲೀಕ

