ನವದೆಹಲಿ: ಸಂಸತ್ ಭವನದ ಆವರಣಕ್ಕೆ ನಾಯಿ (Dog) ತಂದ ವಿಚಾರಕ್ಕೆ ಕೇಳಲಾದ ಪ್ರಶ್ನೆಗೆ ಕಾಂಗ್ರೆಸ್ ರಾಜ್ಯಸಭಾ ಸಂಸದೆ ರೇಣುಕಾ ಚೌಧರಿ (Renuka Chowdhury) ʼಬೌ ಬೌʼ ಎಂದು ಬೊಗಳಿ ಉತ್ತರ ನೀಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಅಡಳಿತ ಪಕ್ಷದ ಸದಸ್ಯರು ನಿಮ್ಮ ವಿರುದ್ಧ ಹಕ್ಕುಚ್ಯುತಿ ನಿರ್ಣಯ (Privilege Motion) ಮಾಡಲು ಮುಂದಾಗಿದ್ದಾರೆ ಎಂದು ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಸಿಟ್ಟಾದ ಅವರು ನಾಯಿ ಬೊಗಳುವ ರೀತಿ ಪ್ರತಿಕ್ರಿಯಿಸಿದ್ದಾರೆ.
ಹಕ್ಕು ಚ್ಯುತಿಯನ್ನು ಯಾವಾಗ ತರಲಾಗುತ್ತದೆ ಎಂದು ನಾನು ನೋಡುತ್ತೇನೆ. ಇದಕ್ಕೆ ನಾನು ಸೂಕ್ತ ಉತ್ತರವನ್ನು ನೀಡುತ್ತೇನೆ ಎಂದು ಗರಂ ಆದರು. ಇದನ್ನೂ ಓದಿ: ಸಾಕು ನಾಯಿಯೊಂದಿಗೆ ಸಂಸತ್ತಿಗೆ ಬಂದ ʻಕೈʼ ಸಂಸದೆ – ಮೊದಲ ದಿನವೇ ವಿವಾದ
VIDEO | Parliament Winter Session: Congress MP Renuka Chowdhury reacts over reports that the Rajya Sabha is considering initiating a privilege motion against her over her recent remarks involving dogs, says, “I will see when it will be brought… I will give a befitting reply…”… pic.twitter.com/yXifawrLT3
— Press Trust of India (@PTI_News) December 3, 2025
ಮಾಲಿನ್ಯದಿಂದಾಗಿ ಜನರು ಸಾಯುತ್ತಿದ್ದಾರೆ ಮತ್ತು ಯಾರೂ ಅದರ ಬಗ್ಗೆ ಚಿಂತಿಸುತ್ತಿಲ್ಲ. ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಕುಟುಂಬಗಳು ನಾಶವಾಗುತ್ತಿವೆ. ಕಾರ್ಮಿಕ ಕಾನೂನುಗಳನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಸಂಚಾರ್ ಸಾಥಿ ಆ್ಯಪ್ ಅನ್ನು ನಮ್ಮ ಮೇಲೆ ಹೇರಲಾಗುತ್ತಿದೆ. ಆದರೆ ರೇಣುಕಾ ಚೌಧರಿ ಅವರ ನಾಯಿ ಅವರನ್ನು ಕೆರಳಿಸಿದೆ. ಇದಕ್ಕೆ ನಾನು ಏನು ಹೇಳಲಿ ಎಂದು ಪ್ರಶ್ನಿಸಿದರು.
#WATCH | Delhi | On privilege motion being brought against her, Congress MP Renuka Chowdhury says, “People are dying because of pollution and no one is worried about it. BLOs are committing suicide, their families are getting destroyed, and they are not worried about them. Labour… pic.twitter.com/D93ey8VqDG
— ANI (@ANI) December 3, 2025
ಸಂಸತ್ತಿನ ಆವರಣಕ್ಕೆ ನಾಯಿಗಳು ಪ್ರವೇಶಿಸುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ. ಅಟಲ್ ಬಿಹಾರ್ ವಾಜಪೇಯಿ ಕೂಡ ಒಮ್ಮೆ ಎತ್ತಿನ ಬಂಡಿಯಲ್ಲಿ ಬಂದಿದ್ದರು. ನಾಯಿಗಳು ತುಂಬಾ ನಿಷ್ಠೆಯಿಂದ ಇರುವ ಪ್ರಾಣಿ. ಆದರೆ ಜನರಿಗೆ ಈ ನಿಷ್ಠೆಯ ಬಗ್ಗೆ ಏನು ಗೊತ್ತು? ನನ್ನ ವರ್ತನೆಯ ಬಗ್ಗೆ ಸರ್ಟಿಫಿಕೇಟ್ ನೀಡಲು ಕಿರಣ್ ರಿಜಿಜು ಯಾರು? ಬಿಜೆಪಿಯ ಸಚಿವರು ರೈತರ ಮೇಲೆ ಕಾರು ಹರಿಸಿ ಕೊಲ್ಲುತ್ತಾರೆ. ಅದರ ಬಗ್ಗೆ ಅವರು ಮಾತನಾಡಲಿ ಎಂದು ತಿರುಗೇಟು ನೀಡಿದರು.

