ಚಿಕ್ಕಬಳ್ಳಾಪುರ: ತಾಂತ್ರಿಕ ಕಾರಣಗಳಿಂದ ಬೆಂಗಳೂರು ಏರ್‌ಪೋರ್ಟ್‌ನಿಂದ (Bengaluru Airport) 20 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.
ದೇಶದ ವಿವಿಧ ಭಾಗಗಳಿಗೆ ವಿಮಾನಗಳು ತೆರಳಬೇಕಿತ್ತು. ತಾಂತ್ರಿಕ ಕಾರಣಗಳು, ಪೈಲಟ್ ಸಮಸ್ಯೆ, ಸಾಫ್ಟ್‌ವೇರ್ ಸಮಸ್ಯೆಗಳಿಂದ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಇದನ್ನೂ ಓದಿ: 8 ನಿಮಿಷಕ್ಕಿಂತ ಹೆಚ್ಚು ಹೊತ್ತು ವಾಹನ ನಿಲ್ಲಿಸಿದ್ರೆ ದಂಡ – ಏರ್‌ಪೋರ್ಟ್‌ನಲ್ಲಿ ಪಿಕಪ್ ಮಾಡುವ ಕ್ಯಾಬ್, ಖಾಸಗಿ ವಾಹನಗಳಿಗೆ ರೂಲ್ಸ್
ದೆಹಲಿ, ಕೋಲ್ಕತ್ತಾ, ಅಹಮದಾಬಾದ್, ಗೋವಾ, ಪುಣೆ ಸೇರಿ ಹಲವು ಕಡೆ ವಿಮಾನಗಳು ಹಾರಾಟ ನಡೆಸಬೇಕಿತ್ತು. ಕಳೆದ ಮಧ್ಯರಾತ್ರಿಯಿಂದ ಇದುವರೆಗೂ 20 ವಿಮಾನ ಹಾರಾಟ ರದ್ದಾಗಿದೆ.

