ಉಡುಪಿ: ಡಿಸೆಂಬರ್ 7 ರಂದು ಶ್ರೀಕೃಷ್ಣಮಠದ (Sri Krishna Mutt) ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಭಾಗವಹಿಸಲಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಮಠದ ಆಯೋಜನೆಯ ಗೀತೋತ್ಸವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪವನ್ ಕಲ್ಯಾಣ್ ಆಗಮಿಸಲಿದ್ದಾರೆ. ಇದನ್ನೂ ಓದಿ: ಡಿವೋರ್ಸ್ ತಡೆಗೆ ರಾಜ್ಯ ಸರ್ಕಾರದಿಂದ ‘ಕೂಡಿ ಬಾಳೋಣ’ ಕೌನ್ಸಿಲಿಂಗ್ ಸೆಂಟರ್
ನ.8 ರಂದು ಪೇಜಾವರ ಶ್ರೀಗಳಿಂದ ಗೀತೋತ್ಸವ ಉದ್ಘಾಟನೆಗೊಂಡಿತ್ತು. ಲಕ್ಷ ಕಂಠ ಗೀತಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಗೀತೋತ್ಸವ ಸಮಾರೋಪಕ್ಕೆ ಆಂಧ್ರದ ಡಿಸಿಎಂ ಭಾಗಿಯಾಗಲಿದ್ದಾರೆ.

