ಬೆಂಗಳೂರು: ಡಿವೋರ್ಸ್ (Divorce) ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಹೊಂದಾಣಿಕೆಯ ಸಮಸ್ಯೆ ಇದಕ್ಕೆ ಮೂಲ ಕಾರಣವಾಗಿದೆ. ಸೂಕ್ತ ಕೌನ್ಸಿಲಿಂಗ್ ಇಲ್ಲದೆ ಎಷ್ಟು ಸಂಬಂಧಗಳು ಕೋರ್ಟ್ ಕಟಕಟೆಯಲ್ಲಿ ಮುರಿದುಹೋಗುತ್ತಿವೆ. ಇದಕ್ಕಾಗಿ ಸೂಕ್ತ ಕೌನ್ಸಿಲಿಂಗ್ ನಡೆಸಲು ರಾಜ್ಯ ಸರ್ಕಾರವೇ ಮುಂದಾಗಿದೆ.
ಡಿವೋರ್ಸ್ ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದಲೇ ಈಗ ‘ಕೂಡಿ ಬಾಳೋಣ’ ಕೌನ್ಸಿಲಿಂಗ್ ಸೆಂಟರ್ (Counselling Centre) ಆರಂಭಿಸಲು ಆದೇಶಿಸಲಾಗಿದೆ. ವಿವಾಹದ ಮಹತ್ವ ತಿಳಿಸಲು, ವಿಚ್ಛೇದನ ತಗ್ಗಿಸಲು, ಮದುವೆಗೂ ಮುಂಚೆಯೇ ಸಂವಹನ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಸೂಚನೆಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಈ ಕೇಂದ್ರ ಆರಂಭವಾಗಲಿದೆ. ಇದನ್ನೂ ಓದಿ: SIR ಗದ್ದಲಕ್ಕೆ ಎರಡನೇ ದಿನವೂ ಸಂಸತ್ ಕಲಾಪ ಬಲಿ
ಈ ಸಂಬಂಧ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯನ್ನ ಕೂಲಂಕುಶವಾಗಿ ಪರಿಶೀಲಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪ್ರಸ್ತಾವನೆಗೆ ಅನುಮೋದನೆ ನೀಡಿ ಆದೇಶ ನೀಡಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಗೈಡ್‌ಲೈನ್ಸ್ನಂತೆ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಶುರುವಾಗಲಿದೆ. ಡಿವೋರ್ಸ್ ಪ್ರಕರಣ ಕಡಿಮೆ ಮಾಡಲು ‘ಕೂಡಿ ಬಾಳೋಣ’ ಕೌನ್ಸಿಲಿಂಗ್ ಸೆಂಟರ್ ಆರಂಭಿಸಲು ಆದೇಶಿಸಲಾಗಿದೆ. ಸೂಕ್ತ ಸ್ಥಳ ಹಾಗೂ ಕೌನ್ಸಿಲಿಂಗ್‌ಗೆ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಇದನ್ನೂ ಓದಿ: ಪ್ರಧಾನಿ ಕಚೇರಿ ಇನ್ಮುಂದೆ ಸೇವಾ ತೀರ್ಥ; ರಾಜಭವನಗಳಿಗೆ ಲೋಕಭವನ ಎಂದು ಮರುನಾಮಕರಣ ಮಾಡಿದ ಕೇಂದ್ರ

