ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪಿಕಪ್ ಮಾಡುವ ಕ್ಯಾಬ್ ಹಾಗೂ ಖಾಸಗಿ ವಾಹನಗಳಿಗೆ ಟಫ್ ರೂಲ್ಸ್ ಜಾರಿಗೆ ಬಿಐಎಎಲ್ ಸಜ್ಜಾಗಿದೆ. 8 ನಿಮಿಷಕ್ಕಿಂತ ಹೆಚ್ಚು ಹೊತ್ತು ವಾಹನ ನಿಲ್ಲಿಸಿದರೆ ದಂಡ ಬೀಳಲಿದೆ.
ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವೆಂದರೆ, ಅದು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ. ಈಗ ಏರ್‌ಪೋರ್ಟ್‌ನಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಹೊಸ ನಿಯಮ ಜಾರಿಯಾಗುತ್ತಿದೆ. ಇದನ್ನೂ ಓದಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹೊಸ ನಿಯಮ ಜಾರಿ
ಏನು ಹೊಸ ರೂಲ್ಸ್?
ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರನ್ನು ಪಿಕಪ್ ಮಾಡಲು ಬರುವ ಕ್ಯಾಬ್ ಖಾಸಗಿ ವಾಹನಗಳು ಎಂಟು ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಲ್ಲುವಂತಿಲ್ಲ. ವೈಟ್ ಬೋರ್ಡ್‌ಗೆ ಎಂಟು ನಿಮಿಷ, ಯೆಲ್ಲೋ ಬೋರ್ಡ್‌ಗೆ 10 ನಿಮಿಷ ನಿಗದಿ ಮಾಡಲಾಗುವುದು. ಒಂದು ವೇಳೆ ಹೆಚ್ಚು ಅವಧಿಗೆ ವಾಹನ ನಿಲ್ಲಿಸಿದರೆ ದಂಡ ವಿಧಿಸಲಾಗುವುದು. ಡಿಸೆಂಬರ್ 8 ರಿಂದ ಹೊಸ ರೂಲ್ಸ್ ಜಾರಿಗೆ ಬರುವ ಸಾಧ್ಯತೆ ಇದೆ.
ಟರ್ಮಿನಲ್ 1 ಮತ್ತು 2 ರಲ್ಲಿ ಗೊತ್ತುಪಡಿಸಿದ ಆಗಮನ ಪಿಕಪ್ ವಲಯಗಳಿಗೆ ಪ್ರವೇಶ ಎಲ್ಲಾ ಖಾಸಗಿ (ಬಿಳಿ-ಬೋರ್ಡ್) ವಾಹನಗಳಿಗೆ 8 ನಿಮಿಷ ಉಚಿತವಾಗಿರುತ್ತದೆ.
ದಂಡ ಎಷ್ಟು?
* 8-13 ನಿಮಿಷಗಳವರೆಗೆ ಕಾಯಲು 150 ರೂ.ಗಳಿಂದ ಶುಲ್ಕ
* 13-18 ನಿಮಿಷಗಳವರೆಗೆ 300 ರೂ. ಶುಲ್ಕ
* 18 ನಿಮಿಷಗಳನ್ನು ಮೀರಿ ವಾಹನಗಳು ನಿಂತರೆ ಟೋಯಿಂಗ್ ಸಾಧ್ಯತೆ
ಈ ಹೊಸ ನೀತಿ ಜಾರಿಯಾದರೆ ಚಾಲಕರು ತೀವ್ರ ವಿರೋಧ ವ್ಯಕ್ಯಪಡಿಸುವ ಸಾಧ್ಯತೆ ಇದೆ. ಆದರೆ, ವಾಹನ ದಟ್ಟಣೆ ಕಡಿಮೆ ಮಾಡಲು ಇದೊಂದೇ ಅಸ್ತ್ರ ಅಂತಾ ಪ್ರಾಧಿಕಾರ ತೀರ್ಮಾನಕ್ಕೆ ಬಂದಿದೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಹೈ ಅಲರ್ಟ್ – ಕೊಟ್ಟಿಗೆಹಾರದಲ್ಲಿ ಪ್ರತಾಪ್ ಸಿಂಹ ಕಾರು ತಪಾಸಣೆ


