ನವದೆಹಲಿ: ಮಸಾಲಾ ಬಾಂಡ್ (Masala Bond) ಪ್ರಕರಣ ಸಂಬಂಧ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ (Pinarayi Vijayan) ಜಾರಿ ನಿರ್ದೇಶನಾಲಯ (ED) ನೋಟಿಸ್ ನೀಡಿದೆ.
ಕೇರಳ ಮೂಲಕ ಸೌಕರ್ಯ ಹೂಡಿಕೆ ನಿಧಿ ಮಂಡಳಿ (ಕಿಫ್‌ಬಿ) ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿ ದಾಖಲಾಗಿರುವ ಕೇಸ್ ಸಂಬಂಧ ಇಡಿ ನೋಟಿಸ್ ಜಾರಿ ಮಾಡಿದೆ.
ಈ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಅಷ್ಟೇ ಅಲ್ಲದೆ ಮಾಜಿ ಹಣಕಾಸು ಸಚಿವ ಮತ್ತು ಸಿಪಿಎಂ ನಾಯಕ ಥಾಮಸ್ ಐಸ್ಯಾಕ್ ಹಾಗೂ ಕಿಫ್‌ಬಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅಬ್ರಹಾಂರಿಗೂ ನೋಟಿಸ್ ನೀಡಲಾಗಿದೆ.
2019ರಲ್ಲಿ ಫೆಮಾ ಕಾಯ್ದೆಯನ್ನು ಉಲ್ಲಂಘಿಸಿ ಮಸಾಲಾ ಬಾಂಡ್‌ಗಳ ಮೂಲಕ ಕಿಫ್‌ಬಿ 2,150 ಕೋಟಿ ರೂ. ಸಂಗ್ರಹಿಸಿದ ಆರೋಪ ಇವರ ಮೇಲಿದೆ.

