ಬೆಂಗಳೂರು: ಅನುವಂಶೀಯ ಕಾರಣಗಳಿಂದ ಉಂಟಾಗುವ ಮಲ್ಟಿಪಲ್ ಸಿಸ್ಟಿಕ್ ಕಿಡ್ನಿ ರೋಗದಿಂದ (Kidney Disease) ಬಳಲುತ್ತಿದ್ದ ಮಗಳ (Daughter) ಜೀವ ಉಳಿಸಲು ತಂದೆಯೇ ಕಿಡ್ನಿ ದಾನ ಮಾಡಿದ ಹೃದಯಸ್ಪರ್ಶಿ ಘಟನೆ ವೈಟ್‌ಫೀಲ್ಡ್‌ನ ಮೆಡಿಕವರ್ ಆಸ್ಪತ್ರೆಯಲ್ಲಿ (Medicover Hospitals) ನಡೆದಿದೆ.
ಕೆಲ ವರ್ಷಗಳ ಹಿಂದೆ ಇದೇ ರೋಗದಿಂದ ಪತ್ನಿ ಬಳಲುತ್ತಿದ್ದಾಗ ಕೂಡ ತಂದೆಯವರು ಕಿಡ್ನಿ ದಾನ ಮಾಡಲು ಮುಂದಾಗಿದ್ದರು. ಆದರೆ ಆ ಸಮಯದಲ್ಲಿ ಶಸ್ತ್ರಚಿಕಿತ್ಸೆ ವೇಳೆ ಉಂಟಾದ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಟ್ರಾನ್ಸ್‌ಪ್ಲಾಂಟ್ ನೆರವೇರಿಸಲಾಗಿರಲಿಲ್ಲ.
ಈಗ ಮಗಳಿಗೆ ಮತ್ತೆ ಅದೇ ಕಾಯಿಲೆ ತಗುಲುತ್ತಿದ್ದಂತೆ, ತಂದೆಯವರು ತಕ್ಷಣವೇ ಕಿಡ್ನಿ ದಾನಕ್ಕೆ ಮುಂದೆ ಬಂದು ತನ್ನ ಮಗಳ ಜೀವವನ್ನು ರಕ್ಷಿಸಿದ್ದಾರೆ. ಚಿಕಿತ್ಸೆ ಬಳಿಕ ಮಾತನಾಡಿದ ಮೆಡಿಕವರ್ ಆಸ್ಪತ್ರೆಯ ವೈದ್ಯರಾದ ಡಾ.ಹರೀಶ್ ಬಾಬು ಅವರು, ಸಮಗ್ರ ಮತ್ತು ನಿಖರವಾದ ವೈದ್ಯಕೀಯ ಮೌಲ್ಯಮಾಪನ ಮಾಡಿದ ಬಳಿಕ, ನಿಯಂತ್ರಣದಲ್ಲಿರುವ ಮಧುಮೇಹ ಮತ್ತು ರಕ್ತದೊತ್ತಡ ಇದ್ದರೂ ಹಿರಿಯರನ್ನು ಕಿಡ್ನಿ ದಾನಕ್ಕೆ ಪರಿಗಣಿಸಬಹುದು ಎಂದು ಹೇಳಿದರು.ಈ ಸಂದರ್ಭದಲ್ಲಿ ವೈದ್ಯರಾದ ಡಾ. ಪ್ರಮೋದ್ ಮತ್ತು ಡಾ. ದಿಲೀಪ್ ಉಪಸ್ಥಿತರಿದ್ದರು.

