ಬಿಗ್ಬಾಸ್ನಲ್ಲಿ (Bigg Boss) ಯಾವಾಗ ಯಾವ್ಯಾವ ಸ್ಪರ್ಧಿಗಳ ನಡುವೆ ವೈರತ್ವ ಹುಟ್ಟಿಕೊಳ್ಳುತ್ತೋ ತಿಳಿಯದಂತಾಗಿದೆ. ಇದೀಗ ಆಪ್ತರಾಗಿದ್ದ ಕಾವ್ಯ (Kavya) ಹಾಗೂ ರಕ್ಷಿತಾ (Rakshita Shetty) ನಡುವೆ ಬಿಗ್ಬಾಸ್ ಕೊಟ್ಟ ಆಟದ ವಿಚಾರಕ್ಕೆ ಭಾರಿ ಜಗಳ ಶುರುವಾಗಿದೆ.
ಪರಸ್ಪರ ನೀನಾ ನಾನಾ ಎಂದು ಚಾಲೆಂಜ್ ಹಾಕಿಕೊಂಡಿದ್ದಾರೆ ಕಾವ್ಯ ಹಾಗೂ ರಕ್ಷಿತಾ. ಯಾವ ಸ್ಪರ್ಧಿ ಬಿಗ್ಬಾಸ್ ಮನೆಯಲ್ಲಿ ಇರಲು ಯೋಗ್ಯರಲ್ಲರೋ ಅವರ ಬೆನ್ನಿಗೆ ಚೂರಿ ಹಾಕುವ ಆಟದಲ್ಲಿ ಕಾವ್ಯ ಬೆನ್ನಿಗೆ ರಕ್ಷಿತಾ ಚೂರಿ ಹಾಕುತ್ತಾರೆ. “ನೀವು ನನ್ನ ಕಾಂಪಿಟೇಟರ್ ಎಂದು 1% ಕೂಡ ನನಗೆ ಅನ್ನಿಸಲಿಲ್ಲ ಎಂದಿದ್ದಾರೆ” ರಕ್ಷಿತಾ. ಅಲ್ಲಿಂದ ಜಗಳ ವಿಪರೀತಕ್ಕೆ ಹೋಗಿದೆ. ಇದನ್ನೂ ಓದಿ: ಬಿಗ್ಬಾಸ್ ಮನೇಲಿ ಗಿಲ್ಲಿ V/S ರಘು.. ಜೋರಾಯ್ತು ಜಗಳ
ಕಾವ್ಯ ಹಾಗೂ ರಕ್ಷಿತಾ ಬೆನ್ನಿಗೆ ಚೂರಿ ಚುಚ್ಚಿಸಿಕೊಂಡು ಗಾರ್ಡನ್ ಏರಿಯಾದಲ್ಲಿ ಮನಬಂದಂತೆ ಜಗಳವಾಡಿದ್ದಾರೆ. ಕಾವ್ಯಾಗೆ ರಕ್ಷಿತಾ “ಎಫರ್ಟ್ ಇಲ್ಲದೆ ನಿಮಗೆ ವಿನ್ನಿಂಗ್ ಟ್ಯಾಗ್ ಬೇಕು ಎಂದು ಆಸೆ ಪಡುತ್ತೀರಿ “ಎಂದು ಕಾಲೆಳೆದ್ರೆ ರಕ್ಷಿತಾಗೆ ಕಾವ್ಯ “ನಿನ್ನ ಡ್ರಾಮಾ, ನಿನ್ನ ಸ್ಟಾçಟಜಿ, ನಿನ್ನ ಚೀಪ್ ಗಿಮಿಕ್ ನನ್ನ ಹತ್ರ ನಡೆಯಲ್ಲ, ಹೇಳೋದನ್ನೂ ಕೇಳೋದಕ್ಕೂ ಮೀಟರ್ ಇಲ್ವಾ?” ಎಂದಿದ್ದಾರೆ. ಇದನ್ನ ಹೇಳುತ್ತಾ ಕಾಲಲ್ಲಿ ಹೊಸಕುವಂತೆ ವರ್ತಿಸಿದ್ದಾರೆ ಕಾವ್ಯ.
ರಕ್ಷಿತಾಗೆ ಆರಂಭದಲ್ಲಿ ಕಾವ್ಯ ಹಾಗೂ ಗಿಲ್ಲಿ ಆಪ್ತರಾಗಿದ್ದರು. ಕಾವ್ಯ ಜೊತೆ ರಕ್ಷಿತಾ ಇದುವರೆಗೂ ಜಗಳವಾಡಿದ್ದಿಲ್ಲ. ಅಶ್ವಿನಿ ಗೌಡ ಜೊತೆ ಕಾವ್ಯಗೆ ಜಗಳ ನಡೆಯುವಾಗ ರಕ್ಷಿತಾ ಬೆಂಬಲ ವ್ಯಕ್ತಪಡಿಸಿದ್ದರು. ಈಗ ಬೆನ್ನಿಗೆ ಚೂರಿ ಹಾಕಿಸಿಕೊಳ್ಳುವ ಕೆಲಸ ಕಾವ್ಯ ಮಾಡಿದ್ದಾರೆ ಎಂದು ರಕ್ಷಿತಾಗೆ ಯಾಕೆ ಅನ್ನಿಸಿತು. ಅದಕ್ಕೆ ರಕ್ಷಿತಾ ಕೊಟ್ಟ ಕಾರಣ ಏನು? ಕಾವ್ಯ ಪ್ರತಿರೋಧವೇನು? ಅನ್ನೋದನ್ನು ತಿಳಿಯುವ ಕುತೂಹಲ ಬಿಗ್ಬಾಸ್ ಪ್ರಿಯರಲ್ಲಿ ಹೆಚ್ಚಾಗಿದೆ.

