ನವದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ನಿಶ್ಚಿತ, ಹೊಸ ಸಿಎಂ ಯಾರು ಎನ್ನುವುದು ಗೊತ್ತಿಲ್ಲ. ಆದರೆ ಯಾರೇ ಸಿಎಂ ಆದರೂ ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ (Arvind Bellad) ಚಾಟಿ ಬೀಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಸೂಟ್‌ಕೇಸ್ ತಲುಪಿಸುವ ಸ್ಪರ್ಧೆಯಲ್ಲಿ ಭ್ರಷ್ಟಾಚಾರ ಆಕಾಶಕ್ಕೆ ಮುಟ್ಟಿದೆ. ಸಿಎಂ ಯಾರು ಆಗಬೇಕು ಅದು ಅವರ ಪಕ್ಷದ ತಿರ್ಮಾನ. ಆದರೆ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದರು. ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಜಿಪಿಎಸ್ ಸ್ಪೂಫಿಂಗ್; ಸಮಸ್ಯೆ ಪರಿಹಾರಕ್ಕೆ ಕ್ರಮ: ರಾಮ್ ಮೋಹನ್ ನಾಯ್ಡು
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಪರಮೇಶ್ವರ್ ನಡುವೆ ಮಲ್ಲಿಕಾರ್ಜುನ್ ಖರ್ಗೆ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಅಹಿಂದಾ ನಾಯಕ ಎಂದು ಸಿದ್ದರಾಮಯ್ಯ (Siddaramaiah) ಹೇಳಿಕೊಳ್ಳುತ್ತಾರೆ. ಅಹಿಂದಾದಲ್ಲಿ ಹತ್ತಾರು ಜಾತಿಗಳಿವೆ. ಅವರು ಯಾರೂ ಸಿದ್ದರಾಮಯ್ಯ ಅವರನ್ನು ಒಪ್ಪಿಕೊಂಡಿಲ್ಲ. ಅವರು ಕುರುಬರ ನಾಯಕರು ಎಂದರೆ ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಆರೋಪ – ಎಸ್‌ಡಿಪಿಐ ಮುಖಂಡನ ವಿರುದ್ಧ FIR
ಆದರೆ ಓಬಿಸಿಯಲ್ಲಿ ಈಡಿಗ, ಮಡಿವಾಳ, ಸವಿತಾ ಸಮಾಜ, ಮರಾಠ, ಕಂಬಾರ, ಕುಂಬಾರರು, ವಿಶ್ವಕರ್ಮ ಸೇರಿದಂತೆ ಬಹಳಷ್ಟು ಸಮುದಾಯ ಇದೆ. ಆ ಸಮಾಜಗಳು ನಮ್ಮ ನಾಯಕ ಸಿದ್ದರಾಮಯ್ಯ ಎಂದು ಎಲ್ಲಿ ಒಪ್ಪಿಕೊಂಡಿದ್ದಾರೆ? ಅವರು ಯಾವ ರೀತಿಯ ಓಬಿಸಿ ನಾಯಕ? ಅಲ್ಪಸಂಖ್ಯಾತರ ಮತ ಕಾಂಗ್ರೆಸ್ ಜೊತೆಗಿದೆ, ಅದು ಸಿದ್ದರಾಮಯ್ಯ ವೋಟ್ ಅಲ್ಲ, ಸಿದ್ದರಾಮಯ್ಯ ಅಹಿಂದಾ ನಾಯಕ ಅಲ್ಲ ಎಂದರು. ಇದನ್ನೂ ಓದಿ: ಈ ವರ್ಷದಲ್ಲೇ ಕಡಿಮೆ, ನವೆಂಬರ್‌ನಲ್ಲಿ 1.7 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಯಾವ ರಾಜ್ಯದ ಪಾಲು ಎಷ್ಟು?
ಸರ್ಕಾರದ ವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಇನ್ನು ಪಕ್ಷದಲ್ಲಿ ತಿರ್ಮಾನ ಮಾಡಿಲ್ಲ, ರಾಜ್ಯದ ಜನತೆಗೆ ಸರ್ಕಾರದ ಬಗ್ಗೆ ವಿಶ್ವಾಸ ಇಲ್ಲ, ಅವರ ಶಾಸಕರಿಗೂ ಮುಖ್ಯಮಂತ್ರಿ ಮೇಲೆ ವಿಶ್ವಾಸ ಇಲ್ಲ. ಅದಕ್ಕಾಗಿ ಸಿಎಂ ಪದೇ ಪದೇ ದೆಹಲಿಗೆ ಬರುತ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ನಟೋರಿಯಸ್ ಟ್ರಾಫಿಕ್ ಇದೆ: ರಾಜೀವ್ ರೈ

