ನವದೆಹಲಿ: ಈ ಬಾರಿಯ ನವೆಂಬರ್‌ನಲ್ಲಿ 1.7 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವಾಗಿದೆ ಎಂದು ಕೇಂದ್ರೀಯ ಹಣಕಾಸು ಸಚಿವಾಲಯ (Ministry of Finance) ಸೋಮವಾರ ತಿಳಿಸಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ 1,69,016 ಕೋಟಿ ರೂ. ಸಂಗ್ರಹವಾಗಿದ್ದರೆ ಈ ಬಾರಿ 1,70,276 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ದರೆ ಈ ಬಾರಿ 0.7% ಬೆಳವಣಿಗೆ ಸಾಧಿಸಿದೆ. ಆದರೆ ಈ ಅಕ್ಟೋಬರ್‌ಗೆ ಹೋಲಿಸಿದ್ದರೆ ಬಹಳ ಕಡಿಮೆ ಜಿಎಸ್‌ಟಿ ಸಂಗ್ರಹವಾಗಿದೆ.
ಅಕ್ಟೋಬರ್‌ನಲ್ಲಿ 1.96 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಜಿಎಸ್‌ಟಿ ಸಂಗ್ರಹದಲ್ಲಿ ನವೆಂಬರ್ ತಿಂಗಳಿನಲ್ಲಿ ಕಡಿಮೆ ಸಂಗ್ರಹವಾಗಿದೆ. ಇದನ್ನೂ ಓದಿ: ಟ್ರಂಪ್ ಸುಂಕ ಸಮರದ ಮಧ್ಯೆಯೂ ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿ
ತೆರಿಗೆ ಸಂಗ್ರಹ ಕಡಿಮೆಯಾಗಿದ್ದು ಯಾಕೆ?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಳಗೊಂಡಿರುವ ಜಿಎಸ್‌ಟಿ ಮಂಡಳಿ ಜಿಎಸ್‌ಟಿ ಸ್ಲ್ಯಾಬ್ ಅನ್ನು ಪರಿಷ್ಕರಿಸಿದ್ದು ಹೊಸ ದರ ಸೆ.22 ರಿಂದ ಜಾರಿಯಾಗಿದೆ.
2017 ರಲ್ಲಿ ಜಾರಿಗೆ ಬಂದ ಜಿಎಸ್‌ಟಿಯಲ್ಲಿ 4 ಸ್ಲ್ಯಾಬ್‌ಗಳಿದ್ದವು. 5%, 12%, 18%, 28% ಸ್ಲ್ಯಾಬ್‌ಗಳಿದ್ದವು. ಈ ಸ್ಲ್ಯಾಬ್‌ಗಳ ಪೈಕಿ 12% ಮತ್ತು 28% ಸ್ಲ್ಯಾಬ್‌ಗಳನ್ನು ತೆಗೆದು ಹಾಕಲಾಗಿದೆ. ಈ ಸ್ಲ್ಯಾಬ್‌ನಲ್ಲಿರುವ ವಸ್ತುಗಳನ್ನು 5% ಮತ್ತು 18% ಸ್ಲ್ಯಾಬ್‌ಗೆ ಶಿಫ್ಟ್ ಮಾಡಲಾಗಿದೆ. ದರ ಕಡಿತದಿಂದಾಗಿ ಜಿಎಸ್‌ಟಿ ಸಂಗ್ರಹ ಕಡಿಮೆಯಾಗಿದೆ. ಇದನ್ನೂ ಓದಿ: ದೇಶದ ಎಲ್ಲಾ ಡಿಜಿಟಲ್ ಅರೆಸ್ಟ್ ಕೇಸ್ ಸಿಬಿಐ ಹೆಗಲಿಗೆ: ಸುಪ್ರೀಂ
ಯಾವ ರಾಜ್ಯದ್ದು ಎಷ್ಟು?
ಕರ್ನಾಟಕ 3,878 ಕೋಟಿ ರೂ., ಮಹಾರಾಷ್ಟ್ರ 9,923 ಕೋಟಿ ರೂ., ತಮಿಳುನಾಡು 3,764 ಕೋಟಿ ರೂ., ಉತ್ತರ ಪ್ರದೇಶ 2,664 ಕೋಟಿ ರೂ., ಗುಜರಾತ್ 3,825 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.
ಯಾವ ತಿಂಗಳು ಎಷ್ಟು ಲಕ್ಷ ಕೋಟಿ ರೂ.?
ಅಕ್ಟೋಬರ್ – 1.96
ಸೆಪ್ಟೆಂಬರ್ -1.89
ಆಗಸ್ಟ್ -1.86
ಜುಲೈ – 1.96
ಜೂನ್ – 1.85
ಮೇ – 2.01
ಏಪ್ರಿಲ್ – 2.37 (ಸಾರ್ವಕಾಲಿಕ ಗರಿಷ್ಠ)
ಮಾರ್ಚ್ – 1.96
ಫೆಬ್ರವರಿ -1.84
ಜನವರಿ – 1.96




