Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿಎಂ, ಡಿಸಿಎಂ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ: ಡಿ.ಕೆ.ಸುರೇಶ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸಿಎಂ, ಡಿಸಿಎಂ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ: ಡಿ.ಕೆ.ಸುರೇಶ್

Bengaluru City

ಸಿಎಂ, ಡಿಸಿಎಂ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ: ಡಿ.ಕೆ.ಸುರೇಶ್

Public TV
Last updated: November 29, 2025 8:30 pm
Public TV
Share
3 Min Read
DK Suresh
SHARE

– ಸೋನಿಯಾ ಗಾಂಧಿ ತ್ಯಾಗದ ಬಗ್ಗೆ ಡಿಸಿಎಂ ಹಿಂದೆಯೂ ಹೇಳಿದ್ದರು

ನವದೆಹಲಿ: ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ, ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ‌. ಸುರೇಶ್ (D.K Suresh) ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಪಕ್ಷದಲ್ಲಿ ಎಲ್ಲಾ ಗೊಂದಲಗಳು ಬಗೆಹರಿದಿವೆಯೇ, ಈ ಹಿಂದೆ ನಡೆದ ಮಾತುಕತೆ ವೇಳೆ ನೀವು ಇದ್ದೀರಾ ಎನ್ನುವ ಪ್ರಶ್ನೆಗೆ, “ಇನ್ನೂ ಹೆಚ್ಚಿನದ್ದೇನಾದರೂ ಇದ್ದರೇ ಅದನ್ನು ವರಿಷ್ಠರು ಬಗೆಹರಿಸುತ್ತಾರೆ. ಈ ಬಗ್ಗೆ ಇಬ್ಬರು ನಾಯಕರು ಈಗಾಗಲೇ ಸ್ಪಷ್ಟನೆ ನೀಡಿರುವಾಗ ಹೆಚ್ಚಿನ ವ್ಯಾಖ್ಯಾನಗಳು ಬೇಡ. ಶಿವಕುಮಾರ್ ಅವರ ಮಾತು ಒಂದೇ, 140 ಶಾಸಕರು ನಮ್ಮವರೇ.‌ ಅವರು ಪಕ್ಷದ ರಾಜ್ಯ ಅಧ್ಯಕ್ಷ ಎಂದು ಈ ಹಿಂದೆ ಹೇಳಿದ್ದಾರೆ, ಇಂದು,‌ ನಾಳೆಯೂ ಹೇಳುತ್ತಾರೆ” ಎಂದರು. ಇದನ್ನೂ ಓದಿ: ಕುರ್ಚಿ ಕದನಕ್ಕೆ ಬ್ರೇಕ್‌ – ಹೃದಯಾಘಾತಕ್ಕೆ ಸ್ಟಂಟ್ ಹಾಕಿ ಜೀವ ಉಳಿಸಿದ್ದಾರೆ: ಬಿ.ವೈ ರಾಘವೇಂದ್ರ ವ್ಯಂಗ್ಯ

DK Shivakumar Siddaramaiah 1

ಸಿಎಂ- ಡಿಸಿಎಂ ಒಟ್ಟಾಗಿ ಪಕ್ಷ ಕಟ್ಟುತ್ತೇವೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಉಪಹಾರ ಸಭೆಯ ನಂತರ ಹೇಳಿರುವ ಬಗ್ಗೆ ಕೇಳಿದಾಗ, “ಇದು ಅವರ ಕರ್ತವ್ಯ ಕೂಡ. ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಮುಖ್ಯಮಂತ್ರಿಯವರು ಹಾಗೂ ಉಪಮುಖ್ಯಮಂತ್ರಿಯವರು ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ” ಎಂದರು.

ಕೊಟ್ಟ ಮಾತು ಹೇಳಿಕೆ ತಿರುಚಿದ್ದೀರಿ
ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಹಿಂದೆ ನೀಡಿದ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಆ ರೀತಿಯ ಹೇಳಿಕೆ ನೀಡಿಲ್ಲ. ನಾನು ಹೇಳಿದ್ದು ಬೇರೆ, ರೀತಿ ಅದನ್ನು ನೀವು (ಮಾಧ್ಯಮದವರು) ತಿರುಚಿದ್ದೀರಿ. ಆದರೂ ಸಿಎಂ ಮತ್ತು ಡಿಸಿಎಂ ಇಬ್ಬರೂ ಇಂದು ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕಾರಣಕ್ಕೆ ಇದನ್ನು ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ” ಎಂದರು.

“ಇಬ್ಬರು ನಾಯಕರು ಖುದ್ದಾಗಿ ಮಾಧ್ಯಮಗಳ ಮುಂದೆಯೇ ಮಾತನಾಡಿದ್ದಾರೆ. ಈಗ ಮತ್ತೊಬ್ಬರು ಮಾತನಾಡುವುದರಿಂದ ಹೆಚ್ಚಿನ ಅರ್ಥ ಬರುವುದಿಲ್ಲ” ಎಂದು ಸ್ಪಷ್ಟನೆ ನೀಡಿದರು.

ಸೋನಿಯಾ ಗಾಂಧಿ ತ್ಯಾಗದ ಬಗ್ಗೆ ಹಿಂದೆಯೂ ಹೇಳಿದ್ರು
ಸೋನಿಯಾಗಾಂಧಿ ಅವರ ತ್ಯಾಗದ ಬಗ್ಗೆ ಸಿಎಂ ಸಮ್ಮುಖದಲ್ಲೇ ಶಿವಕುಮಾರ್ ಅವರು ಹೇಳಿದ ಬಗ್ಗೆ ಕೇಳಿದಾಗ, “ಡಿಸಿಎಂ ಅವರು, ನೆಹರು ಅವರ ಕುಟುಂಬದ ತ್ಯಾಗ,‌ ಬಲಿದಾನದ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮಾತ್ರವಲ್ಲ, ಸೋನಿಯಾ ಗಾಂಧಿಯವರ ತ್ಯಾಗದ ಬಗ್ಗೆ ಹೃದಯದಿಂದ ತಿಳಿಸುವ ಕೆಲಸವನ್ನು ಕಾರ್ಯಕರ್ತರಿಗೆ, ಮುಖಂಡರಿಗೆ ಈ ಹಿಂದೆಯೂ ಮಾಡಿದ್ದಾರೆ. ಇದೇನು ಹೊಸದಲ್ಲ” ಎಂದು ಹೇಳಿದರು.

DK Shivakumar 3 1

ಉಪಹಾರ ಭೇಟಿ ತಾತ್ಕಾಲಿಕ ಕದನ ವಿರಾಮವೇ? ವಿಧಾನಸಭಾ ಅಧಿವೇಶನದ ತನಕ ಒಗ್ಗಟ್ಟಾಗಿ ನಡೆಯುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರಲ್ಲ ಎಂದು ಕೇಳಿದಾಗ, “ಅವರು ಏನು ಹೇಳಿದ್ದಾರೋ, ಮಾಧ್ಯಮದವರು ಯಾವ ರೀತಿ ವ್ಯಾಖ್ಯಾನ ಮಾಡಿದ್ದಿರೋ ಗೊತ್ತಿಲ್ಲ. ಅವರ ಹೇಳಿಕೆ, ನಿಮ್ಮ ವ್ಯಾಖ್ಯಾನ ನೋಡಿ ಆನಂತರ ಮಾತನಾಡುತ್ತೇನೆ” ಎಂದರು.

ಹೈಕಮಾಂಡ್ ಮಟ್ಟದಲ್ಲಿ ಸಭೆ ಬಗ್ಗೆ ಕೇಳಿದಾಗ, “ಹೈಕಮಾಂಡ್ ನವರು ಪ್ರತಿದಿನ ಸಭೆ ಸೇರುತ್ತಿರುತ್ತಾರೆ. ರಾಷ್ಟ್ರಮಟ್ಟದ ವಿಚಾರ, ಸಂಘಟನೆ, ರಾಜ್ಯಗಳ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಲೇ ಇರುತ್ತಾರೆ. ಲೋಕಸಭಾ ಅಧಿವೇಶನ ಸೋಮವಾರದಿಂದ ಪ್ರಾರಂಭ ಆಗುತ್ತಿರುವುದರಿಂದ ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿಹಿಡಿಯಲು ಸಭೆ ಸೇರಬೇಕಾಗುತ್ತದೆ. ಚರ್ಚೆ ನಡೆಸಬೇಕಾದ ವಿಚಾರಗಳ ಬಗ್ಗೆ ತಿಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಸಭೆ ಸಹಜ”ಎಂದು ಹೇಳಿದರು.

ಶಿವಕುಮಾರ್ ಅವರ ಶ್ರಮಕ್ಕೆ ಪಕ್ಷ ಕೂಲಿ ನೀಡುತ್ತದೆಯೇ ಎಂದು ಕೇಳಿದಾಗ, “ಕೆಪಿಸಿಸಿ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಹುದ್ದೆ ಇದೆಲ್ಲವೂ ಪಕ್ಷ ನೀಡಿರುವ ಹುದ್ದೆಯೇ. ಆದ ಕಾರಣ ಇದರ ಬಗ್ಗೆ ಮತ್ತೆ ಮಾತನಾಡುವುದು ಸೂಕ್ತವಲ್ಲ” ಎಂದರು.

ದೆಹಲಿ ಭೇಟಿಯ ಬಗ್ಗೆ ಕೇಳಿದಾಗ, “ಸಂಜೆ ಖಾಸಗಿ ಕಾರ್ಯಕ್ರಮವಿದ್ದು, ನಮ್ಮ ಸ್ನೇಹಿತರು ಅದಕ್ಕೆ‌‌ ಆಹ್ವಾನಿಸಿದ್ದಾರೆ. ಆದ ಕಾರಣಕ್ಕೆ ದೆಹಲಿಗೆ ಬಂದಿದ್ದೇನೆ. ಇದರ ನಡುವೆ ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಭೇಟಿ ಮಾಡುತ್ತೇನೆ. ನಾನು ಇನ್ನೂ ಭೇಟಿಗೆ ಸಮಯ ಕೇಳಿಲ್ಲ. ವರಿಷ್ಠರು ಯಾರು ಲಭ್ಯವಿದ್ದಾರೆ ಎಂದು ಗೊತ್ತಿಲ್ಲ. ವಾರಾಂತ್ಯವಾದ ಕಾರಣಕ್ಕೆ ಯಾರೂ ಭೇಟಿಗೆ ಸಿಗುವುದಿಲ್ಲ ಎಂದುಕೊಂಡಿರುವೆ. ಸಿಕ್ಕಿದರೆ ಭೇಟಿ ಮಾಡಿ ಆನಂತರ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದರು. ಇದನ್ನೂ ಓದಿ: ಈ ಡ್ರಾಮಾ 2-3 ತಿಂಗಳು ಇರುತ್ತೆ, ಯಾಕಂದ್ರೆ ಸಿದ್ದರಾಮಯ್ಯ ದೇವರಾಜ ಅರಸು ರೆಕಾರ್ಡ್ ಬ್ರೇಕ್ ಮಾಡ್ಬೇಕು ಅಂತಿದ್ದಾರೆ – ಶೈಲೇಂದ್ರ ಬೆಲ್ದಾಳೆ

TAGGED:congressd k shivakumarD.K.SureshPower-Sharing Tusslesiddaramaiah
Share This Article
Facebook Whatsapp Whatsapp Telegram

Cinema news

Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories
The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories

You Might Also Like

gas shortage
Bengaluru City

ಮಧ್ಯಪ್ರಾಚ್ಯ ಯುದ್ಧದಿಂದ `ಗ್ಯಾಸ್’ ಟ್ರಬಲ್; ಬೆಂಗಳೂರಿನ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತ – ಹೋಟೆಲ್‌ಗಳು ಬಂದ್ ಸಾಧ್ಯತೆ?

Public TV
By Public TV
1 minute ago
Indira Canteen 1
Bengaluru City

ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ: ಬೈರತಿ ಸುರೇಶ್

Public TV
By Public TV
5 minutes ago
Legislative Council
Bengaluru City

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

Public TV
By Public TV
23 minutes ago
pm modi meeting
Latest

ಭಾರತದಲ್ಲಿ ಗ್ಯಾಸ್ ಎಮರ್ಜೆನ್ಸಿ; ತೈಲ, ವಿದೇಶಾಂಗ ಸಚಿವರ ಜೊತೆ ಮೋದಿ ಸಭೆ

Public TV
By Public TV
30 minutes ago
Basavaraj Bommai 1
Bengaluru City

ಎಲ್‌ಪಿಜಿ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ – ಬೊಮ್ಮಾಯಿ

Public TV
By Public TV
47 minutes ago
Fire Accident Gas Leak
Chamarajanagar

ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ – ದಂಪತಿಗೆ ಗಂಭೀರ ಗಾಯ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?